ಕೋಟ್ಯಂತರ ಅಭಿಮಾನಿಗಳ ಪಾಲಿನ ಆ ನಿರೀಕ್ಷೆ ನಿಜವಾಗುವ ಕ್ಷಣ ಬಂದೇ ಬಿಟ್ಟಿದೆ. ಹೌದು ಹಲವು ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal challengers Bangalore) ತಂಡ ಐಪಿಎಲ್ (IPL) ಫೈನಲ್ ಪ್ರವೇಶ ಮಾಡಿದೆ. ಇದುವರೆಗೂ ಕಪ್ ಗೆಲ್ಲದ ಆರ್.ಸಿ.ಬಿ (RCB) ಈ ಬಾರಿ ಕ್ಯೂ ಗೆಲ್ಲೋದು ಪಕ್ಕಾ ಎಂಬ ನಿರೀಕ್ಷೆ ಹುಟ್ಟುಹಾಕಿದೆ.

ಐಪಿಎಲ್ 2025 ರ (ipl 2025) ಕ್ವಾಲಿಫೈಯರ್ 1 ರಲ್ಲಿ (Qualifier 1) ಪಂಜಾಬ್ ಕಿಂಗ್ಸ್ ವಿರುದ್ಧದ ಅದ್ಭುತ ಗೆಲುವಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal challengers Bangalore) ಐಪಿಎಲ್ 2025 ರ ಫೈನಲ್‌ಗೆ ಲಗ್ಗೆ ಇಡುವ ಮೂಲಕ ಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ.
ಈ ಮಧ್ಯೆ ನಿನ್ನೆ ನಡೆದ ಕ್ವಾಲಿಫೈಯರ್-2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಭರ್ಜರಿ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡ ಫೈನಲ್ಸ್ ಗೆ ಲಗ್ಗೆ ಇಟ್ಟಿದೆ. ಅಲ್ಲಿಗೆ ಐಪಿಎಲ್ 2025 ರ ಅಂತಿಮ ಕಾಳಗದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು V/S ಪಂಜಾಬ್ ಕಿಂಗ್ಸ್ ತಂಡ ಕಾದಾಡಲಿವೆ.
ಈಗಾಗಲೇ ಆರ್.ಸಿ.ಬಿ ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂಬ ವಿಶ್ವಾಸದಲ್ಲಿದ್ದು,ಸಂಭ್ರಮ ಮುಗಿಲು ಮುಟ್ಟಿದೆ. ಈ ನಡುವೆ ಕಪ್ ನಮ್ಮದಾಗಬೇಕು ಅಂದ್ರೆ ಮತ್ತೊಮ್ಮೆ ಪಂಜಾಬ್ ತಂಡವನ್ನು ರಾಯಲ್ ಚಾಲೆಂಜರ್ಸ್ ಮಣಿಸಬೇಕಿದೆ. ಈ ಬಾರಿಯ ಐಪಿಎಲ್ ಸೀಸನ್ ನಲ್ಲಿ ಒಟ್ಟು 3 ಪಂದ್ಯಗಳಲ್ಲಿ ಆರ್.ಸಿ.ಬಿ ಮತ್ತು ಪಂಜಾಬ್ ಮುಖಾಮುಖಿಯಾಗಿದ್ದು, ಈ ಪೈಕಿ ಎರಡೂ ಪಂದ್ಯಗಳಲ್ಲಿ ಆರ್.ಸಿ.ಬಿ ಗೆದ್ದು ಬೀಗಿದೆ.

ಹೀಗಾಗಿ ಫೈನಲ್ಸ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಕಟ್ಟಿಹಾಕುವ ಕಲೆ ಆರ್.ಸಿ.ಬಿ ಆಟಗಾರರಿಗೆ ಚೆನ್ನಾಗಿಯೇ ತಿಳಿದಿದೆ ಎಂದೇ ಭಾವಿಸಬಹುದು. ಆದ್ರೆ ಪಂಜಾಬ್ ತಂಡವನ್ನು ಕಡೆಗಣಿಸುವಂತಿಲ್ಲ. ಯಾಕಂದ್ರೆ ಐದು ಬಾರಿ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಕ್ವಾಲಿಫೈಯರ್-2 ಪಂದ್ಯದಲ್ಲಿ ಪಂಜಾಬ್ ತಂಡ ಬಗ್ಗುಬಡಿದು ಫೈನಲ್ ಪ್ರವೇಶಿಸಿದೆ.
ಹೀಗಾಗಿ ನಾಳಿನ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗೋದ್ರಲ್ಲಿ ಅನುಮಾನವೇ ಇಲ್ಲ. ಸದ್ಯಕ್ಕಂತೂ ಆರ್.ಸಿ.ಬಿ ತಂಡ ಬಲಿಷ್ಠವಾಗಿಯೇ ಕಾಣುತ್ತಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಲೈನ್ ಅಪ್ ಅದ್ಭುತವಾಗಿದೆ. ಫಿಲ್ ಸಾಲ್ಟ್ ಮತ್ತು ಕೊಹ್ಲಿ ಉತ್ತಮ ಆರಂಭ ಕಟ್ಟಿಕೊಟ್ಟರೆ, ಮಯಾಂಕ್ ಅಗರ್ವಾಲ್ , ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಕೃನಾಲ್ , ಟೀಮ್ ಡೇವಿಡ್ , ಶೆಪರ್ಡ್ ವರೆಗೂ ಕೂಡ ನಮ್ಮ ಬ್ಯಾಟಿಂಗ್ ಲೈನ್ ಅಪ್ ಇದೆ .

ಇನ್ನು ಬೌಲಿಂಗ್ ವಿಚಾರದಲ್ಲಿ ಹೇಜಲ್ ವುಡ್ ತಂಡಕ್ಕೆ ಮರಳಿರುವುದು ಆನೆ ಬಲ ಬಂದಂತಾಗಿದ್ದು, ಇನ್ನುಳಿದಂತೆ ಯಶ್ ದಯಾಳ್, ಭುವನೇಶ್ವರ್ ಕುಮಾರ್, ಸುಯಶ್ ಶರ್ಮಾ ಮತ್ತು ಕೃನಾಲ್ ಪಾಂಡ್ಯ ತಮ್ಮ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಬಿಟ್ರೆ ಪಂಜಾಬ್ ತಂಡವನ್ನು ಕಟ್ಟಿಹಾಕುವುದು ರಾಯಲ್ ಚಾಲೆಂಜರ್ಸ್ ಗೆ ಕಷ್ಟವೇನಲ್ಲ.

ಹೀಗಾಗಿ ಫೈನಲ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದು, ಈಗಾಗಲೇ ಪಟಾಕಿಗಳನ್ನು ರೆಡಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಈ ಸಲಾ ಆರ್.ಸಿ.ಬಿ ಕಪ್ ಗೆದ್ರೆ 18 ವರ್ಷಗಳ ನಂತರ ಕಪ್ ಗೆದ್ದು ಹೊಸ ಇತಿಹಾಸ ನಿರ್ಮಿಸೋದಂತು ಸತ್ಯ.