
ಭಾರತದಲ್ಲಿ ಸಾಕಷ್ಟು ಮಸೀದಿಗಳ ಜಾಗದಲ್ಲಿ ಶಿವನ ದೇವಸ್ಥಾನವಿದೆ ಅನ್ನೋ ಬಗ್ಗೆ ಈಗಾಗಲೇ ಹಲವಾರು ಕೋರ್ಟ್‌ಗಳಲ್ಲಿ ದಾವೆ ಹೂಡಲಾಗಿದೆ. ಅಯೋಧ್ಯೆಯ ಬಾಬರಿ ಮಸೀದಿ ಜಾಗ ಶ್ರೀರಾಮ ಜನಿಸಿದ ಜಾಗ ಎನ್ನುವ ಕಾರಣಕ್ಕೆ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್ ಅಂತಿಮವಾಗಿ ಬಾಬರಿ ಮಸೀದಿ ಜಾಗದಲ್ಲಿ ಶ್ರೀರಾಮನ ದಿವ್ಯ ಮಂದಿರ ಸ್ಥಾಪನೆಗೆ ಆದೇಶ ನೀಡಲಾಗಿತ್ತು.ಆ ಬಳಿಕ ಸಾಕಷ್ಟು ಮಸೀದಿಗಳ ಮೇಲೆ ಹಿಂದೂಪರ ಸಂಘಟನೆಗಳು ದೂರು ಸಲ್ಲಿಸಿದ್ದರು.

ವಾರಣಾಸಿ ದೇಗುದ ಬಳಿಯ ಮಸೀದಿ ಸೇರಿದಂತೆ ಮಥುರಾದ ಶಾಹಿ ಈದ್ಗಾ ಮಸೀದಿ, ಸಂಭಲ್‌ನ ಶಾಹಿ ಜಾಮಾ ಮಸೀದಿ ಹೀಗೆ ದೇಶದ 10ಕ್ಕೂ ಹೆಚ್ಚು ಮಸೀದಿಗಳ ಮೂಲ ಪತ್ತೆಗಾಗಿ ಸಮೀಕ್ಷೆ ನಡೆಸಬೇಕು ಎಂದು ಕೋರಿ ಈಗಾಗಲೇ ಸಾಕಷ್ಟು ಅರ್ಜಿಗಳನ್ನು ಸಲ್ಲಿಸಲಾಗಿದೆ.ಆದರೆ ಇದೀಗ ಎಲ್ಲಾ ಪ್ರಕರಣಗಳಲ್ಲಿ ವಿಚಾರಣೆ, ಮಧ್ಯಂತರ ಆದೇಶ ಹಾಗು ಅಂತಿಮ ತೀರ್ಪು ನೀಡುವುದಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ 1991 ಪ್ರಕಾರ 1947 ಆಗಸ್ಟ್ 15 ರಂದು ಯಾವ ಸ್ವರೂಪದಲ್ಲಿ ಇತ್ತು, ಅದೇ ರೀತಿ ಇರಬೇಕು ಎನ್ನುವುದು ನಿಯಮ.ಆದರೆ ರಾಮ ಜನ್ಮಭೂಮಿ ಬಾಬರಿ ಮಸೀದಿಯನ್ನು ಹೊರತುಪಡಿಸಿ ಈ ಕಾನೂನು ಮಾಡಲಾಗಿತ್ತು.ಹೀಗಾಗಿ ಉಳಿದ ಮಸೀದಿಗಳ ವಿಚಾರದಲ್ಲಿ ಕೋರ್ಟ್ ಮಧ್ಯಪ್ರವೇಶ ಮಾಡುವುದು ಹಾಗು ಮಸೀದಿಗಳ ಸಮೀಕ್ಷೆ ವಿಚಾರ ಕಾನೂನು ಬಾಹೀರವೇ..? ಅನ್ನೊ ಬಗ್ಗೆ ಸುಪ್ರೀಂಕೋರ್ಟ್ ಪರಿಶೀಲನೆ ಮಾಡಲಿದೆ. ಅಲ್ಲೀವರೆಗೂ ಹೊಸ ಪ್ರಕರಣ ಕೂಡ ದಾಖಲಿಸಿಕೊಳ್ಳದಂತೆ ಸೂಚನೆ ಕೊಡಲಾಗಿದೆ.