ಬೆಂಗಳೂರು : ಮೇ.೨೨: ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೂವರು ಸಚಿವರಿಗೆ ವಿಧಾನಸೌಧ\ ವಿಕಾಸ ಸೌಧದಲ್ಲಿ ಕೊಠಡಿ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಕರ್ನಾಟಕ ಸರ್ಕಾರದ ನೂತನ ಸಂಪುಟ ದರ್ಜೆ ಸಚಿವರುಗಳಾಗಿ ಪ್ರಮಾಣವಚನ ಸ್ವೀಕರಿಸುವ ಮಾನ್ಯ ಸಂಪುಟ ದರ್ಜೆ ಸಚಿವರುಗಳಿಗೆ ವಿಧಾನಸೌಧ\ ವಿಕಾಸಸೌಧ ಕಟ್ಟಡದಲ್ಲಿ ಕೊಠಡಿಗಳನ್ನ ಹಂಚಿಕೆ ಮಾಡುವ ಬಗ್ಗೆ ಪರಿಶೀಲಿಸಿ ಆದೇಶ ಹೊರಡಿಸಲಾಗಿದೆ.



ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವಿಧಾನಸೌಧ / ವಿಕಾಸ ಸೌಧ ಕಟ್ಟಡದಲ್ಲಿ ಈ ಕೆಳಕಂಡಂತೆ ಹಂಚಿಕೆ ಮಾಡಿ ಆದೇಶಿಸಿದ್ದಾರೆ.
೧. ಕೆ.ಜೆ. ಜಾರ್ಜ್, ಸಂಪುಟ ದರ್ಜೆ ಸಚಿವರು – ವಿಧಾನಸೌಧ ಕೊಠಡಿ ಸಂಖ್ಯೆ – ೩೧೭-೩೧ ಎ
೨. ಎಂ.ಬಿ. ಪಾಟೀಲ್, ಸಂಪುಟ ದರ್ಜೆ ಸಚಿವರುವಿಧಾನಸೌಧ ಕೊಠಡಿ ಸಂಖ್ಯೆ – ೩೪೪-೩೪೪-ಎ
೩. ಜಮೀರ್ ಅಹಮದ್, ವಿಕಾಸಸೌಧ ಕೊಠಡಿ ಸಂಖ್ಯೆ – ೧೪೩ – ೧೪೬