ಬ್ರಿಟನ್ : ದೇಶಬಿಟ್ಟರೂ ಭಾಷೆ ಬಿಡಬಾರದು ಎಂಬ ಹಳೆ ನಾಡನುಡಿಗೆ ಸಾಕ್ಷಿಯಾಗಿ ಬ್ರಿಟನ್ ಸಂಸತ್ ನಲ್ಲಿ ಕನ್ನಡಿಗ ಕನ್ನಡದ ಕಂಪನ್ನ ಸಾರಿದ್ದಾನೆ. ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತನ್ನು ಕನ್ನಡಿಗ ಅದೀಶ್.ಅಧೀಶ್ ರ್. ವಾಲಿ ನಿಜವಾಗಿಸಿದ್ದಾರೆ.
ಬ್ರಿಟನ್ ಸಂಸತ್‌ನಲ್ಲಿ ಅದೀಶ್. ಆರ್. ವಾಲಿ ಅಚ್ಚ ಕನ್ನಡದಲ್ಲಿ ಬಸವಣ್ಣನ ವಚನ ಹೇಳಿರೋ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇವನ್ಯಾರವ ಇವನ್ಯಾರವ ವಚನವನ್ನ ಅದೀಶ್ ಸಂಸತ್ ನಲ್ಲಿ ಹೇಳಿ ಕನ್ನಡಿಗರ ಹೃದಯ ಗೆದ್ದಿದ್ದಾನೆ.
ಸ್ವತಃ ಡಿಸಿಎಂ ಡಿಕೆಶಿ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದೀಶ್ ವಚನ ಹೇಳಿದ ವಿಡಿಯೋ ನೋಡಿ ಹೃದಯ ತುಂಬಿ ಬಂತು. ಕಳೆದ ವರ್ಷ ಈ ಹುಡುಗ ನನ್ನನ್ನು ಭೇಟಿಯಾಗಿದ್ದ, ಆತನ ಕನ್ನಡ ಪ್ರೇಮ ಕಂಡು ನನಗೆ ಖುಷಿ ಜೊತೆಗೆ ಆಶ್ಚರ್ಯ ಕೂಡ ಆಯ್ತು. ಕರ್ನಾಟಕದ ಪುಣ್ಯ ಭೂಮಿ ಸ್ಪರ್ಶಿಸಿದ ಪ್ರತಿಯೊಬ್ಬರ ಹೃದಯದಲ್ಲೂ ಇದೇ ರೀತಿ ಕನ್ನಡ ಪ್ರೀತಿ ಉಕ್ಕುತ್ತದೆ. ಅದು ಈ ನೆಲದ ಸೊಗಡು ಎಂದು ಡಿಸಿಎಂ ಡಿಕೆಶಿ ಬರೆದುಕೊಂಡಿದ್ದಾರೆ.
https://www.facebook.com/share/v/GzfV6ewL4pZC2F6x/?mibextid=qi2Omg
ಇನ್ನು, ಕಳೆದ ವರ್ಷ ಸಹ ಅದೀಶ್. ಆರ್. ವಾಲಿ ಬ್ರಿಟನ್ ನಲ್ಲಿ ಡಿಗ್ರಿ ಸ್ವೀಕರಿಸುವ ಘಟಿಕೋತ್ಸವದಲ್ಲಿ ಸರ್ಟಿಫಿಕೇಟ್ ಪಡೆಯೋ ಸಂದರ್ಭ ಕರ್ನಾಟಕದ ಬಾವುಟ ಪ್ರದರ್ಶನ ಮಾಡಿದ್ದರು 25 ಸೆಕೆಂಡ್ ವೀಡಿಯೊ ಎಲ್ಲೆಡೆ ವೈರಲ್ ಆಗಿತ್ತು.