ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಧ್ಯೆ ಒಡಕು ಮೂಡಿದೆ.
ಬೆಳಗಾವಿಯಲ್ಲಿ ಸ್ವಾಮೀಜಿ ಸಭೆ ನಡೆಸಿದರೆ, ಕೂಡಲ ಸಂಗಮದಲ್ಲಿ ಕಾಶಪ್ಪನವರ್ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ ಸಭೆ ಮಾಡಿದ್ದಾರೆ. ಕೂಡಲಸಂಗಮ ಪಂಚಮಸಾಲಿ ಪೀಠದಲ್ಲೇ ಸಭೆ ನಡೆಸಿದ್ದಾರೆ..
ಸ್ವಾಮೀಜಿ ವಿರೋಧವಾಗಿ ಪೀಠದಲ್ಲೇ ಸಭೆ ನಡೆಸಿ ಸೆಡ್ಡು ಹೊಡೆದಿದ್ದಾರೆ ಕಾಶಪ್ಪನವರ್. ಬೆಳಗಾವಿಯ ಚಳಿಗಾಲ ಅಧಿವೇಶನ ವೇಳೆ ಟ್ರ್ಯಾಕ್ಟರ್ ಮೂಲಕ ಮುತ್ತಿಗೆ ಹಾಕಲು ಸ್ವಾಮೀಜಿ ಮುಂದಾಗಿದ್ದಾರೆ. ಆದರೆ ಸ್ವಾಮೀಜಿ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.’
ರಾಜ್ಯ ಕಾರ್ಯಕಾರಣಿ ಸಭೆ ಮಾಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಮುಖಂಡರು ಆಗಮಿಸಿ ಭಾಗಿಯಾಗಿದ್ದಾರೆ. ಕೂಡಲ ಸಂಗಮದ ಪಂಚಮಸಾಲಿ ಪೀಠದ ಮಠದಲ್ಲಿ ನಡೆದಿರುವ ಸಭೆಗೆ ಸ್ವಾಮೀಜಿಯೇ ಗೈರಾಗಿದ್ದಾರೆ. ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ವಿರುದ್ಧ ಸಭೆ ನಡೆಸಲಾಗಿದೆ.