ಬಾಗಲಕೋಟೆಯಲ್ಲಿ (Bagalakot) ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ (samyuktha patil) ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪರಮಾಶ್ಚರ್ಯ ಎಂಬಂತೆ ಗಮನ ಸೆಳೆದಿದ್ದು ಅಂದ್ರೆ ಅದು ವೀಣಾ ಕಾಶಪ್ಪನವರ್ (veena kashappanavar), ಬಾಗಲಕೋಟೆ ಲೋಕಸಭಾ ಟಿಕೆಟ್ (Ticket) ಸಿಗಲಿಲ್ಲ ಎಂಬ ಕಾರಣಕ್ಕೆ ವೀಣಾ ಕಾಶಪ್ಪನವರ್ ತೋರಿದ್ದ ಅಸಮಾಧಾ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಸೃಷ್ಟಿಸಿತ್ತು.
ರಾಜ್ಯದ ಪ್ರಮುಖ ಕಾಂಗ್ರೆಸ್ (congress) ನಾಯಕರು ಸರ್ವ ಪ್ರಯತ್ನ ಮಾಡಿದ್ರೂ ತಣ್ಣಗಾಗದ ಬಾಗಲಕೋಟೆ ಭಿನ್ನಮತ ಇದ್ದಕ್ಕಿದ್ದ ಹಾಗೇ ತಣ್ಣಗಾಗಿದೆ. ಬಂಡಾಯದ ಸಮರ ಸಾರಿದ್ದ ವೀಣಾ ಕಾಶ್ವನವರ್ ಕೊನೆಗೂ ಕಾಂಗ್ರೆಸ್ ಅಭ್ಯರ್ಥಿ ಜೊತೆ ಕೈ ಜೋಡಿಸಿದ್ದಾರೆ. ಇದುವರೆಗೂ ಸರಿಯಾಗಿಲ್ಲ ಎಂದುಕೊಂಡ ಭಿನ್ನಮತ ಶಮನವಾಗಿದೆ. ನಾಮಪತ್ರ ಸಲ್ಲಿಕೆ ಸಂಧರ್ಭದಲ್ಲಿ ಧಿಡೀರ್ ಪ್ರತ್ಯಕ್ಷಗೊಂಡ ವೀಣಾ ಅಚ್ಚರಿ ಮೂಡಿಸಿದ್ದಾರೆ. ಕಾಂಗ್ರೆಸ್ ಭಿನ್ನಮತದ ಲಾಭ ಪಡೆಯುವ ಲೆಕ್ಕಾಚಾರದಲ್ಲಿದ್ದ ಬಿಜೆಪಿಗೆ (BJP) ಶಾಕ್ ಎದುರಾಗಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಅಭ್ಯರ್ಥಿ ಸಂಯುಕ್ತ ಪಾಟೀಲ್, ವೀಣಾ ಕಾಶಪ್ಪನವರ್ ಆಗಮನದಿಂದ ಆನೆಬಲ ಬಂದಂತಾಗಿದೆ ಎಂದು ಸಂತಸದ ಮಾತುಗಳನ್ನಾಡಿದ್ರು. ಒಂದು ಕುಟುಂಬದಲ್ಲಿ ಯಾವತ್ತೂ ಮುನಿಸುಗಳು ಅನಿವಾರ್ಯವಾಗಿರುತ್ತೆ. ಆದ್ರೆ ನಾವು ಒಂದೇ ಕುಟುಂಬದವು ಅಂತ ಅಕ್ಕ ತೋರಿಸಿಕೊಟ್ಟಿದ್ದಾರೆ, ಅಕ್ಕನ ಜೊತೆಗೆ ನಾವು ಚುನಾವಣೆ ಪ್ರಚಾರದಲ್ಲಿ ತೊಡಗುತ್ತೇನೆ ಎಂದು ಹರ್ಷವ್ಯಕ್ತಪಡಿಸಿದ್ರು.
ಒಟ್ನಲ್ಲಿ ಬಾಗಲೋಟೆಯ ಬಾಂಬ್ ಸಿಡಿಯದಂತೆ ನೋಡಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಫಲಿತಾಂಶ ಜನರ ಕೈಲಿದೆ.