ವಂದೇ ಭಾರತ್ ರೈಲುಗಳಿಗೆ ಜನರಿಂದ ಅತ್ಯುತ್ತಮವಾದ ಪ್ರತಿಕ್ರಿಯೆಗಳು ಬರುತ್ತಿವೆ. ಈ ರೈಲುಗಳು ಎಲ್ಲಾ ರೀತಿಯಾದ ಅತ್ಯುತ್ತಮ ವ್ಯವಸ್ಥೆಗಳನ್ನ ಹೊಂದಿದ್ದು, ಕಡಿಮೆ ವೆಚ್ಚದಲ್ಲಿ ವೇಗವಾಗಿ ಮತ್ತು ಐಷಾರಾಮಿಯಂತಹ ಪ್ರಯಾಣದ ಅನುಭೂತಿಯನ್ನು ಕೊಡುತ್ತದೆ. ಅದರಲ್ಲೂ ಕಡಿಮೆ ಸಮಯದಲ್ಲಿ ಅತಿ ವೇಗವಾಗಿ ಚಲಿಸುವ ಮುಖಾಂತರ ನಿರೀಕ್ಷೆಗೆ ಮೀರಿದ ವೇಗದಲ್ಲಿ ಪ್ರಯಾಣವನ್ನ ಮಾಡುತ್ತದೆ.

ಆದರೆ ಇದೀಗ ಇದೇ ವಂದೇ ಭಾರತ್ ರೈಲುಗಳ ಬಗ್ಗೆ ಆರೋಪವೊಂದು ಕೇಳಿ ಬಂದಿದ್ದು ಕೇಂದ್ರ ಸರ್ಕಾರಕ್ಕೆ ಮತ್ತು ರೈಲು ಇಲಾಖೆಗೆ ಭಾರೀ ಮುಖಭಂಗವಾಗಿದೆ. ಇದರಿಂದ ಮೋದಿ ಸರ್ಕಾರ ವ್ಯಾಪಾಕವಾದ ಟೀಕೆಗೆ ಕೂಡ ಒಳಗಾಗುತ್ತಿದೆ.
ಅಷ್ಟಕ್ಕೂ ಇಲ್ಲಿ ಆಗಿದ್ದೇನು ಅಂದ್ರೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗ್ತಾ ಇತ್ತು, ಆ ವೈರಲ್ ವಿಡಿಯೋದಲ್ಲಿ ವಂದೇ ಭಾರತ್ ರೈಲಿನ ಬೋಗಿಯೊಳಗೆ ಮಳೆಯಿಂದ ನೀರು ಸೋರುತ್ತಿರುವ ದೃಶ್ಯವಿತ್ತು, ವಂದೇ ಭಾರತ್ ರೈಲಿನ ಒಳಗೆ ನೀರು ಸೋರುತ್ತಿರುವ ವೇಳೆ ಕೆಲವರು ನೀರು ಹರಿದು ಹೋಗದಂತೆ ತಡೆಯಲು ಪ್ಲಾಸ್ಟಿಕ್ ಡಬ್ಬಗಳನ್ನ ತಂದು ಇಡುತ್ತಿರುವುದನ್ನ ಕಾಣಬಾಹುದಾಗಿದೆ.

ಮೊದಮೊದಲು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನ ಹಂಚಿಕೊಳ್ಳಲಾಗಿತ್ತು, ಆಗ ಇದನ್ನ ಸುಳ್ಳು ಎಂದೇ ಭಾವಿಸಲಾಗಿತ್ತು, ಆದರೆ ಈ ವಿಡಿಯೋಗೆ ಕಮೆಂಟ್ ಮಾಡಿದ ಹಲವು ಮಂದಿಗಳು, ನಮಗೂ ಇದೇ ರೀತಿಯಾದ ಅನುಭವವಾಗಿದೆ, ನಾವು ಕೂಡ ಈ ಬಗ್ಗೆ ವ್ಯಕ್ತಿಯೊಬ್ಬರು ದೂರು ಕೊಡುವುದನ್ನ ನೋಡಿದ್ದೇವೆ, ಎಂದು ಬರೆದುಕೊಂಡಿದ್ದಾರೆ. ಹೀಗಾಗು ಈ ವಿಡಿಯೋ ಇದೀಗ ಎಲ್ಲೇಡೆ ವೈರಲ್ ಆಗ್ತಾ ಇದ್ದು ಕೆಂದ್ರ ಮೋದಿ ಸರ್ಕಾರವನ್ನ ಮತ್ತೊಮ್ಮೆ ಮುಜುಗರಕ್ಕೆ ಈಡು ಮಾಡಲಾಗುತ್ತೊರೋದು ಮಾತ್ರ ಸುಳ್ಳಲ್ಲ..
ಒಟ್ಟಾರೆಯಾಗಿ ಇದೀಗ ಕೇಂದ್ರದ ನಿರ್ಲಕ್ಷ್ಯ ಮತ್ತು ರೈಲ್ವೆ ಇಲಾಖೆಯ ಬೇಜವಬ್ದಾರಿತನದಿಂದ ಈ ರೀತಿಯ ಘಟನೆ ನಡೆದಿದ್ದರೆ ಅವುಗಳನ್ನ ಸರಿಪಡಿ, ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯಾದ ತೊಂದರೆಗಳು ಆಗದ ರೀತಿ ನೋಡಿಕೊಳ್ಳಬೇಕು ಎಂಬ ಅಭಿಪ್ರಾಯವನ್ನ ಸಾರ್ವಜನಿಕರು ವ್ಯಕ್ತ ಪಡಿಸುತ್ತಿದ್ದಾರೆ.