ನವದೆಹಲಿ: ಪ್ರಧಾನಿ ಮೋದಿ 3ನೇ ಅವಧಿಯಲ್ಲಿ ಅಧಿಕಾರ ಸ್ವೀಕರಿಸಿ ಇಟಲಿಗೆ ಮೊದಲ ವಿದೇಶಿ ಪ್ರವಾಸ ಕೈಗೊಂಡಿದ್ದಾರೆ.
50ನೇ ಗುಂಪಿನ 7 (ಜಿ7) ನಾಯಕರ ಶೃಂಗಸಭೆಯಲ್ಲಿ (G7 Summit) ಭಾಗವಹಿಸಲು ಪ್ರಧಾನಿ ಮೋದಿ ಇಟಲಿಗೆ ತೆರಳಿದ್ದಾರೆ. ಶೃಂಗಸಭೆಯ ಸಮಯದಲ್ಲಿ ಅವರು ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak), ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಇಟಲಿ ಪ್ರಧಾನಿ ಮೆಲೋನಿ ಅವರು ಮೋದಿಯನ್ನು ಕೈ ಮುಗಿದು ಸ್ವಾಗತಿಸಿದ್ದಾರೆ.
“ಕೃತಕ ಬುದ್ಧಿಮತ್ತೆ, ಶಕ್ತಿ, ಆಫ್ರಿಕಾ-ಮೆಡಿಟರೇನಿಯನ್” ಎಂಬ ಶೀರ್ಷಿಕೆಯ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಇಟಾಲಿಯನ್ ಪಿಎಂ ಜಾರ್ಜಿಯಾ ಮೆಲೋನಿ ಈ ಸಭೆ ಆಯೋಜಿಸಿದ್ದಾರೆ. ಈ ವರ್ಷದ ಗ್ರೂಪ್ ಆಫ್ ಸೆವೆನ್ (ಜಿ7) ಶೃಂಗಸಭೆಗೆ ಆಗಮಿಸಿದ ವಿಶ್ವ ನಾಯಕರಿಗೆ ಜಾರ್ಜಿಯಾ ಮೆಲೋನಿ ಅವರ ‘ನಮಸ್ತೆ’ ಗೆಸ್ಚರ್ ಆನ್‌ಲೈನ್‌ನಲ್ಲಿ ಲಕ್ಷಾಂತರ ಜನರ ಗಮನವನ್ನು ಸೆಳೆಯಿತು.