ಪ್ರಜಾಪ್ರಭುತ್ವ ಬಲಪಡಿಸುವ ಶಕ್ತಿ ನಿಮ್ಮ ಕೈಯಲ್ಲಿಯೇ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶಾದ್ಯಂತ ಇಂದು ಮೂರನೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್ ನಲ್ಲಿ ಮತದಾನ ಮಾಡಿ ಮಾತನಾಡಿದ್ದಾರೆ. ಪ್ರಜಾಪ್ರಭುತ್ವ ಬಲಪಡಿಸುವ ಶಕ್ತಿ ಇರುವುದು ನಿಮ್ಮ ಕೈಯಲ್ಲಿದೆ ಎಂದು ಅವರು ಜನರತ್ತ ಕೈ ಬೀಸಿ ಹೇಳಿದ್ದಾರೆ. ಮೂರನೇ ಹಂತದ ಮತದಾನದ ವೇಳೆ ಸೂರತ್ ಹೊರತುಪಡಿಸಿ ಗುಜರಾತ್ ನ ಎಲ್ಲ 25 ಕ್ಷೇತ್ರಗಳಿಗೂ ಮತದಾನ ನಡೆಯುತ್ತಿದೆ.
ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಈಗಾಗಲೇ ಸೂರತ್ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನಿಯೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಇದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಗಾಂಧಿನಗರದಲ್ಲಿರುವ ರಾಜಭವನದಿಂದ ಮತ ಚಲಾಯಿಸಲು ನೇರವಾಗಿ ಅಹಮದಾಬಾದ್‌ನ ನಿಶಾನ್ ಹೈಯರ್ ಸೆಕೆಂಡರಿ ಶಾಲೆಗೆ ತೆರಳಿದರು. ಅಲ್ಲಿ ಅಮಿತ್ ಶಾ ಅವರು ಮೋದಿ ಅವರನ್ನು ಸ್ವಾಗತಿಸಿದರು. ಅಮಿತ್ ಶಾ ಅವರು ಗಾಂಧಿ ನಗರದಿಂದ ಎರಡನೇ ಬಾರಿಗೆ ಸ್ಪರ್ಧಿಸಿದ್ದಾರೆ. ಮತದಾನ ಮಾಡಿದ ನಂತರ ಪ್ರಧಾನಿ ಬೆರಳ ಶಾಹಿಯನ್ನು ಜನರಿಗೆ ತೋರಿಸಿದ್ದಾರೆ.