ತಮಿಳುನಾಡುಸೇಲಂ ಜಿಲ್ಲೆಯ ಖಾಸಗಿ ಶಾಲೆಯೊಂದರ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಫುಟ್ಬಾಲ್ ಪಂದ್ಯದಲ್ಲಿ ತಂಡದ ಕಳಪೆ ಪ್ರದರ್ಶನದಿಂದ ಅಸಮಾಧಾನಗೊಂಡಿದ್ದು, ಚಿಕ್ಕ ಮಕ್ಕಳನ್ನ ತೀವ್ರವಾಗಿ ಥಳಿಸಿದ್ದಾರೆ. ಈ ಘಟನೆ ಕೊಳತ್ತೂರಿನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿದೆ.ಇಲ್ಲಿ, ದೈಹಿಕ ಶಿಕ್ಷಣ ಶಿಕ್ಷಕ ಅಣ್ಣಾಮಲೈ ಅಂತರ್ ಶಾಲಾ ಫುಟ್ಬಾಲ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ವಿದ್ಯಾರ್ಥಿಗಳನ್ನ ಅಮಾನುಷವಾಗಿ ಥಳಿಸಿದ್ದಾರೆ.
ಈ ಘಟನೆಯ ವೀಡಿಯೋ ಕಾಣಿಸಿಕೊಂಡಾಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಉಂಟಾಗಿತ್ತು. ಇದಾದ ಬಳಿಕ ಶಿಕ್ಷಕನನ್ನ ಅಮಾನತು ಮಾಡಲಾಗಿದೆ.ವೈರಲ್ ವೀಡಿಯೊ ಕುರಿತು ಆಕ್ರೋಶ ವ್ಯಕ್ತ ಪಡೆಸಿರುವ ಅಣ್ಣಾಮಲೈ, ವಿದ್ಯಾರ್ಥಿಗಳು ಇತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮುಂದೆ ಒದೆಯುವುದು ಮತ್ತು ಹೊಡೆಯುವುದು ಕಂಡುಬರುತ್ತದೆ.
Physical Education teacher in Tamil Nadu's Salem suspended after he assaults students, and a video of the same goes viral.
— Vani Mehrotra (@vani_mehrotra) August 11, 2024
The teacher was identified as Annamalai, who assaulted the school's football team over its alleged poor performance in a match.#TamilNadu pic.twitter.com/mZ0sqP66Ip
ಶಾಲೆಯ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ಮಂಡಿಯೂರಿ, ಅಸಮಾಧಾನಗೊಂಡು ಅಳುತ್ತಿರುವ ದೃಶ್ಯ ಕಂಡು ಬಂದಿದೆ. ಶಿಕ್ಷಕನ ವರ್ತನೆಯಿಂದ ಆಘಾತಕ್ಕೊಳಗಾದ ಮಾಜಿ ವಿದ್ಯಾರ್ಥಿಯೊಬ್ಬರು ವೀಡಿಯೊವನ್ನ ರೆಕಾರ್ಡ್ ಮಾಡಿದ್ದಾರೆ ಮತ್ತು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.