ಭಾರತ ಹಾಗು ಇಂಡಿಯಾ ಎರಡೂ ಹೆಸರು ನಮ್ಮ ದೇಶದಲ್ಲಿ ಚಾಲ್ತಿಯಲ್ಲಿದೆ. ಚಕ್ರವರ್ತಿ ಭರತ ವರ್ಷ ಆಳಿದ ದೇಶ ಭಾರತ ಎಂದು ಕರೆಯಲ್ಪಟ್ಟರೆ, ಸಿಂಧೂ ನದಿ ತಟದಲ್ಲಿ ಇರುವ ಪ್ರಾಂತ್ಯ ಆಗಿರುವ ಕಾರಣಕ್ಕೆ ಗ್ರೀಕ್ ಭಾಷೆಯಲ್ಲಿ ‘ಸಿಂಧೂ’ ನದಿಗೆ ‘ಇಂಡಸ್’ ಎಂದು ಕರೆದಿದ್ದರು. ‘ಇಂಡಸ್’ ನದಿ ಪಕ್ಕದಲ್ಲಿ ನೆಲೆಸಿದ್ದವರು ‘ಇಂಡಿಯನ್ಸ್’ ಎಂದು ಕರೆದಿದ್ದರು. ಆ ಬಳಿಕ ಇಂಡಿಯನ್ಸ್ ಇರುವ ರಾಷ್ಟ್ರವನ್ನು ಬ್ರಿಟೀಷರು ಇಂಡಿಯಾ ಎಂದು ಕರೆದರು. ಹೀಗಾಗಿ ಭಾರತವನ್ನು ಇಂಡಿಯಾ ಎಂದು ಕರೆಯಲಾಯ್ತು. ಭಾರತದಲ್ಲಿ ಬ್ರಿಟೀಷರು ಆಡಳಿತ ಶುರುವಾದ ಬಳಿಕ ಈಸ್ಟ್ ಇಂಡಿಯಾ ಕಂಪನಿ ಎನ್ನುವ ಹೆಸರು ಬಂದಿತ್ತು. ಭಾರತದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ಆದ ಪ್ರಭಾವ ಬೀರಿದ್ದು, ಸಂವಿಧಾನದಲ್ಲೂ ವೀ ದ ಪೀಪಲ್ಸ್ ಆಫ್ ಇಂಡಿಯಾ ಎಂದು ಪೀಠಿಕೆಯಲ್ಲಿ ಸೇರಿಕೊಂಡಿದೆ.
ಈಗ ಹೆಸರು ಬದಲಾವಣೆ ಚರ್ಚೆ ಆಗ್ತಿರೋದು ಯಾಕೆ..?
ಇಲ್ಲೀವರೆಗೂ ಇಂಡಿಯಾ ಎನ್ನುವ ಹೆಸರನ್ನು ತೆಗೆದು ಭಾರತ್ ಎಂದು ಮರು ನಾಮಕರಣ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರವೇ ಆಗಲಿ, ಅಧಿಕೃತ ವ್ಯಕ್ತಿಗಳೇ ಆಗಲಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಲು ಬರುತ್ತಿರುವ ಅಮೆರಿಕ ಅಧ್ಯಕ್ಷರಿಗೆ ರಾಷ್ಟ್ರಪತಿ ಭವನದಿಂದ ಆಹ್ವಾನ ಪತ್ರಿಕೆ ಹೋಗಿದ್ದು, ಅದರಲ್ಲಿ ಭಾರತ್ ರಿಪಬ್ಲಿಕ್ಎಂದು ಮುದ್ರಣ ಮಾಡಲಾಗಿದೆ. ಇದು ಕಣ್ತಪ್ಪಿನಿಂದ ಆಗಿರುವ ಅಚಾತುರ್ಯ ಅಲ್ಲ. ರಿಪಬ್ಲಿಕ್ ಆಫ್ ಇಂಡಿಯಾ ಎಂದು ಬರೆಯಬೇಕಿದ್ದ ಜಾಗದಲ್ಲಿ ಭಾರತ್ ರಿಪಬ್ಲಿಕ್ ಎಂದು ಬರೆದಿರುವುದು ಉದ್ದೇಶ ಪೂರ್ವಕ ಎನ್ನಲಾಗ್ತಿದೆ. ಮುಂಬರುವ ಲೋಕಸಭಾ ವಿಶೇಷ ಅಧಿವೇಷನದಲ್ಲಿ ಈ ಬಗ್ಗೆ ಸಂವಿಧಾನ ತಿದ್ದುಪಡಿ ಮಾಡಲಾಗುವುದು ಎನ್ನುವ ಮಾಹಿತಿ ಹರಿದಾಡ್ತಿದೆ. ಆದರೆ ಕೇಂದ್ರದ ನಿರ್ಧಾರ ಕಾಂಗ್ರೆಸ್ ಕಣ್ಣು ಕೆಂಪಾಗುವಂತೆ ಮಾಡಿದೆ.
I.N.D.I.A ಒಕ್ಕೂಟದ ಹೆಸರಿಗೆ ಕೇಸರಿ ಕೌಂಟರ್..
ಭಾರತೀಯ ಜನತಾ ಪಾರ್ಟಿ ಕೇಂದ್ರದಲ್ಲಿ ಸತತ 2ನೇ ಬಾರಿ ಆಡಳಿತ ಚುಕ್ಕಾಣಿ ಹಿಡಿದಿದ್ದು, ಈ ಬಾರಿ ಮೋದಿ ನೇತೃತ್ವದ ಬಿಜೆಪಿಯನ್ನು ಕೆಳಗಿಳಿಸಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ತರುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಇದೇ ಕಾರಣಕ್ಕೆ ಮೈತ್ರಿಕೂಟ ರಚನೆ ಮಾಡಿಕೊಂಡು I.N.D.I.A ಎಂದು ನಾಮಕರಣ ಮಾಡಿದ್ದಾರೆ. ಒಕ್ಕೂಟ ರಚನೆ ಆದ ಬಳಿಕ ಬೆಂಗಳೂರಿನಲ್ಲಿ ಹೆಸರು ಘೋಷಣೆ ಮಾಡಲಾಯ್ತು. ಅಂದೇ ಇಂಡಿಯಾ ವರ್ಸಸ್ ಬಿಜೆಪಿ ಎನ್ನುವ ಘೋಷ ವಾಕ್ಯ ಮೊಳಗಿತ್ತು. ಇದೀಗ ಇಂಡಿಯಾ ವರ್ಸಸ್ ಬಿಜೆಪಿ ಅನ್ನೋದನ್ನು ತೊಡೆದು ಹಾಕುವ ಉದ್ದೇಶದಿಂದಲೇ ಇಂಡಿಯಾ ಬದಲು ಭಾರತ್ ಎಂದು ನಾಮಕರಣಕ್ಕೆ ಮುಂದಾಗಿದ್ದಾರೆ. ಇಂಡಿಯಾ ಒಕ್ಕೂಟ ನೋಡಿ ಪ್ರಧಾನಿ ನರೇಂದ್ರ ಮೋದಿಗೆ ಅಸೂಯೆ ಆಗಿದೆ. ಭಯ ಆಗಿದೆ ಎನ್ನುವ ಚರ್ಚೆಗಳು ಆರಂಭ ಆಗಿದೆ.
ಹಿಂದಿ ರಾಷ್ಟ್ರ ಭಾಷೆ ಮಾಡಲು ಕೇಂದ್ರದ ಚಿತಾವಣೆ..
ನಮ್ಮ ದೇಶದಲ್ಲಿ ಯಾವುದೇ ರಾಷ್ಟ್ರೀಯ ಭಾಷೆ ಎನ್ನುವುದು ಅಧಿಕೃತವಾಗಿ ಉಲ್ಲೇಖ ಆಗಿಲ್ಲ. ಪ್ರತಿಯೊಂದು ರಾಜ್ಯಗಳು ಭಾಷೆಯ ಆಧಾರದಲ್ಲೇ ರಚನೆ ಆಗಿದ್ದವು. ಆದರೂ ಹಿಂದಿ ಭಾಷಿಕರ ಪ್ರಭಾವದಿಂದ ಉತ್ತರ ಭಾರತದಲ್ಲಿ ಹಿಂದಿ ಒಂದೇ ಭಾಷೆಯಾಗಿ ಉಳಿದುಕೊಂಡಿದೆ. ಉಳಿದೆಲ್ಲಾ ಭಾಷೆಗಳು ಕಣ್ಮರೆ ಆಗಿವೆ. ಇದೀಗ ದಕ್ಷಿಣ ಭಾರತದಲ್ಲಿ ಮಾತ್ರ ಹಿಂದಿ ಬಳಕೆ ಸಾಧ್ಯವಾಗ್ತಿದೆ. ಇದೇ ಕಾರಣಕ್ಕೆ ಕಳೆದ ಚುನಾವಣೆಯಲ್ಲೂ ಕರ್ನಾಟಕದಲ್ಲಿ ಹಿನ್ನಡೆ ಸಾಧಿಸಿತ್ತು. ಭಾರತ್ ಎನ್ನುವುದನ್ನು ತಿದ್ದುಪಡಿ ಮಾಡಿ ಜಾರಿ ಮಾಡಿದ್ರೆ, ಇನ್ಮುಂದೆ ಭಾರತ್ ಹಿಂದಿ ಭಾಷೆಯ ಪದ, ಅನಿವಾರ್ಯವಾಗಿ ಎಲ್ಲಾ ರಾಜ್ಯಗಳಲ್ಲೂ ಭಾರತ್ ಎಂದೇ ಬಳಸಬೇಕಾಗುತ್ತದೆ. ಭಾರತದ ಹೆಸರೇ ಹಿಂದಿಯಲ್ಲಿರುವಾಗ ಹಿಂದಿಯಲ್ಲಿ ಯಾಕೆ ವ್ಯವಹಾರರಿಕ ಭಾಷೆ ಆಗಬಾರದು ಅನ್ನೋ ಚರ್ಚೆ ಹುಟ್ಟು ಹಾಕ್ತಾರೆ. ಒಂದು ವೇಳೆ ಹಿಂದಿ ವ್ಯವಹಾರಿಕ ಭಾಷೆ ಆದರೆ, ಬಿಜೆಪಿ ತನ್ನ ಅಜೆಂಡಾಗಳನ್ನು ಉತ್ತರ ಭಾರತದ ಹಾಗೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲೂ ಹರಡಲು ಸಾಧ್ಯ ಅನ್ನೋ ಕಾರಣಕ್ಕೆ ಹೀಗೆಲ್ಲಾ ಮಾಡ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ.
ಕೃಷ್ಣಮಣಿ