ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮಂಡ್ಯ ಜಿಲ್ಲೆಯ ಮೇಲುಕೋಟೆಯ (Melukote) ಶಿಕ್ಷಕಿ ಕೊಲೆ ಕೇಸ್ (Murder) ನ ಆರೋಪಿ ಬಂಧಿಸುವಲ್ಲಿ ಖಾಕಿಪಡೆ ಯಶಸ್ವಿಯಾಗಿದೆ.ಮೇಲುಕೋಟೆ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣದ ಕೊಲೆ ಆರೋಪಿ ನಿತೀಶ್ ಅರೆಸ್ಟ್ ಆಗಿದ್ದಾನೆ. ಮಾಣಿಕ್ಯನಹಳ್ಳಿ ಗ್ರಾಮದ ನಿತೀಶ್ ಬಂಧಿತ ಆರೋಪಿ ಅಂತ ಗುರುತಿಸಲಾಗಿದೆ.

ಮೃತ ದೀಪಿಕಾ ಕುಟುಂಬಸ್ಥರು ಕೂಡ ನಿತೀಶ್ ಮೇಲೆ ಅನುಮಾನ ವ್ಯಕ್ತಪಡಿಸಿದ್ರು.ಮೃತ ದೀಪಿಕಾಳಿಗೆ ನಿತೀಶ್ ನಿಂದ ಕೊನೆ ಪೋನ್ ಕಾಲ್ ಹೋಗಿತ್ತು.
ದೀಪಿಕಾ ಮೃತದೇಹ ಸಿಕ್ಕ ಬಳಿಕ ಎಸ್ಕೇಪ್ ಆಗಿದ್ದ ನಿತೀಶ್ ಈಗ ಸೆರೆಯಾಗಿದ್ದಾನೆ. ಎಸ್ಕೇಪ್ ಆಗಿದ್ದ ನಿತೀಶ್ ಪೊಲೀಸರಿಗೆ ಲಾಕ್ ಆಗಿದ್ದಾನೆ. ನಿತೀಶ್ ನನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಪೊಲೀಸರು ತೀರ್ಮಾನ ಮಾಡಿದ್ದಾರೆ.ನ್ಯಾಯಾಧೀಶರ ಬಳಿ ಪೊಲೀಸ್ ಕಸ್ಟಡಿಗೆ ಕೇಳಲು ಪೊಲೀಸರ ತಯಾರಿ ನಡೆಸಿದ್ದಾರೆ.
