ಈಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು. ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತು ಕಲಿಯುಗದಲ್ಲಿ ಸುಳ್ಳಾಗ್ತಿದ್ಯಾ ಎಂಬ ಅನುಮಾನ ಮೂಡ್ತಿದೆ. ಇತ್ತೀಚೆಗೆ ಮಕ್ಕಳೊಂದಿಗೆ ಕೆಲ ತಾಯಂದಿರ ವರ್ತನೆ ಇದಕ್ಕೆ ಕಾರಣ ಆಗ್ತಿದೆ. ಕೆಲ ತಾಯಂದಿರು ಕೋಪದ ಕೈಗೆ ಬುದ್ದಿ ಕೊಟ್ಟು ತಮ್ಮ ಕರುಳ ಕುಡಿ ಸಣ್ಣ ಮಗು ಎಂಬುದನ್ನು ಕೂಡ ಗಣನೆಗೆ ತೆಗೆದುಕೊಳ್ಳದೇ ಪುಟ್ಟ ಮಕ್ಕಳಿಗೆ ಹಿಗ್ಗಾಮುಗ್ಗಾ ಥಳಿಸಿ ಕ್ರೌರ್ಯ ಮೆರೆಯುತ್ತಿದ್ದಾರೆ.
ಅದೇ ರೀತಿ ಇಲ್ಲೊಂದು ಕಡೆ ತಾಯಿಯೊಬ್ಬಳು ತನ್ನ ಅಪ್ರಾಪ್ತ ಮಗನನ್ನು ಕ್ರೂರವಾಗಿ ಥಳಿಸಿದ್ದಾಳೆ. ಈ ದೃಶ್ಯವನ್ನು ಯಾರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಈ ವೀಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಕ್ರೂರಿ ಅಮ್ಮನನ್ನು ಬಂಧಿಸಿದ್ದಾರೆ.
क्या दुनिया में माँ ऐसी भी होती हैं?
— MANOJ SHARMA LUCKNOW UP🇮🇳🇮🇳🇮🇳 (@ManojSh28986262) July 17, 2024
रूह कंपा देने वाली वीडियो 😡😡
90 KG की महिला अपने छोटे 25 KG बेटे के ऊपर बैठकर उसे मुक्कों, दांतों सर पटकना गाला दबाना !!
एक मासूम छोटा बच्चा वहीं पर खड़ा देख रहा!
अगर ये सच है तो इसको जल्द गिरफ्तार करे !! #viralvideo #up #uttrakhand pic.twitter.com/NCZzsihfCw
ಉತ್ತರಾಖಂಡ್ ಹರಿದ್ವಾರದ ರೂರ್ಕಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿ ಆಗಿದೆ. ವೀಡಿಯೋದಲ್ಲಿ ಕಾಣಿಸುವಂತೆ ಮಹಿಳೆ ತನ್ನ 8 ವರ್ಷದ ಮಗುವನ್ನು ನೆಲಕ್ಕೆ ತಳ್ಳಿ ಆತನ ಮೇಲೆ ಕುಳಿತು ಆತನ ಕೈಗಳನ್ನು ಹಿಡಿದು ಆತನ ಎದೆಭಾಗಕ್ಕೆ ಜೋರಾಗಿ ಕಚ್ಚುತ್ತಾಳೆ. ಈ ವೇಳೆ ಮಗು ನೋವು ತಡೆಯಲಾಗದೇ ಜೋರಾಗಿ ಕೂಗುತ್ತಾನೆ. ಅಲ್ಲದೇ ಯಾರಾದರೂ ಸ್ವಲ್ಪ ನೀರು ಕೊಡಿ ಎಂದು ಅದು ಆರ್ತನಾಗಿ ಕೇಳುವುದನ್ನು ಕಾಣಬಹುದಾಗಿದೆ. ಬರೀ ಇಷ್ಟೇ ಅಲ್ಲದೇ ಬಾಲಕನ ತಲೆಯನ್ನು ಹಿಡಿದು ತಾಯಿ ನೆಲಕ್ಕೆ ಕುಟ್ಟುವುದನ್ನು ಕೂಡ ವೀಡಿಯೋದಲ್ಲಿ ಕಾಣಬಹುದು. ಈ ವೇಳೆ ಜೊತೆಯಲ್ಲೇ ಇನ್ನೊಬ್ಬ ಪುಟ್ಟ ಬಾಲಕನಿದ್ದು, ಆತ ಅಮ್ಮನ ಕೃತ್ಯವನ್ನು ಆತಂಕದಿಂದ ನೋಡುವುದನ್ನು ಕಾಣಬಹುದು. ಬಹುತೇಕ ಈ ವೀಡಿಯೋದಲ್ಲಿ ಕಾಣಿಸುವಂತೆ ಆಕೆ ಬಾಲಕನ್ನು ಕೊಲ್ಲಲು ನೋಡುತ್ತಿರುವಂತೆ ಕಾಣಿಸುತ್ತಿದೆ. ಈ ಭೀಕರ ದೃಶ್ಯವನ್ನು ಸಮೀಪದಲ್ಲೇ ಇದ್ದ ನೋಡುಗರು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.