• Home
  • About Us
  • ಕರ್ನಾಟಕ
Thursday, September 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬೃಹನ್ನಗರ ಕಲ್ಪನೆ–ಸಮಸ್ಯೆಗಳ ವಿರಾಟ್‌ ರೂಪ

ನಾ ದಿವಾಕರ by ನಾ ದಿವಾಕರ
September 4, 2025
in Top Story, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ
0
ಬೃಹನ್ನಗರ ಕಲ್ಪನೆ–ಸಮಸ್ಯೆಗಳ ವಿರಾಟ್‌ ರೂಪ
Share on WhatsAppShare on FacebookShare on Telegram

ಬಂಡವಾಳಶಾಹಿಯಲ್ಲಿ ನಗರೀಕರಣ ಔದ್ಯಮಿಕ ರೂಪದಲ್ಲೇ ವಿಸ್ತರಿಸುತ್ತಾ ಹೋಗುತ್ತದೆ

ADVERTISEMENT

ನಾ ದಿವಾಕರ

 ಸಾಮಾನ್ಯ ಆರ್ಥಿಕ ಪರಿಭಾಷೆಯಲ್ಲಿ ʼ ಅಭಿವೃದ್ಧಿ ಅಥವಾ ಪ್ರಗತಿ ʼ ಎಂಬ ಕಲ್ಪನೆಯನ್ನು ಇಡೀ ಸಮಾಜದ ಸಮಾನ ಮುನ್ನಡೆ, ಸಮತೋಲಿತ ಬೆಳವಣಿಗೆ ಮತ್ತು ಸಮಾಜದ ಸಮಸ್ತ ಸದಸ್ಯರನ್ನೂ ಒಳಗೊಂಡಂತಹ ಸಾಮಾಜಿಕ ಮೇಲ್‌ ಚಲನೆ-ಆರ್ಥಿಕ ಸಬಲೀಕರಣದ ನೆಲೆಯಲ್ಲಿ ನಿರ್ವಚಿಸಲಾಗುತ್ತದೆ. ಈ ಮಾದರಿಯಲ್ಲಿ ಅಭಿವೃದ್ಧಿಯ ಫಲಾನುಭವಿಗಳು ಸಮಾಜದ ಸದಸ್ಯರಾಗಿರುವುದೇ ಅಲ್ಲದೆ, ಅಲ್ಲಿರುವಂತಹ ಬಿರುಕುಗಳನ್ನು ಸರಿಪಡಿಸುವ ಮೂಲಕ, ಸಾಮಾಜಿಕ-ಆರ್ಥಿಕ ತರತಮಗಳನ್ನು ಸರಿಪಡಿಸುವ ನಿಟ್ಟಿನಲ್ಲಿ, ಎಲ್ಲರನ್ನೂ ಅಭಿವೃದ್ಧಿ ಪಥದ ಭಾಗಿದಾರಾರರಾಗಿ (Stake holders) ಪರಿಭಾವಿಸುವುದು ಪಾರಂಪರಿಕ ಜ್ಞಾನ  ಶಾಖೆಗಳಲ್ಲಿ ಕಾಣಬಹುದಾದ ಮಾದರಿಗಳು. ಭಾರತದಂತಹ ತಾರತಮ್ಯಗಳ, ಅಸಮಾನತೆಗಳ ದೇಶದಲ್ಲಿ ಈ ಮಾದರಿಯೇ ದೇಶದ ಅಭಿವೃದ್ಧಿಯ ಮೂಲ ತಳಪಾಯವಾಗಬೇಕಿತ್ತು.

 ಆಧುನಿಕ ಚಿಂತನಾಧಾರೆಗಳಲ್ಲಿ ಕಾಣಬಹುದಾದ ಮತ್ತೊಂದು ತಾತ್ವಿಕ ಆಲೋಚನೆ ಎಂದರೆ ಅಭಿವೃದ್ಧಿಯ ಹಾದಿಯಲ್ಲಿ ಸಮಾಜಕ್ಕೆ ತಗಲುವ ಸಾಮಾಜಿಕ ವೆಚ್ಚ (Social Cost) ̧  ಸರ್ಕಾರಕ್ಕೆ ತಗಲುವ ಆರ್ಥಿಕ ವೆಚ್ಚ ( Economic Cost) ಹಾಗೂ ಭೌಗೋಳಿಕವಾಗಿ ಎಲ್ಲರನ್ನೂ ಬಾಧಿಸುವ ಪರಿಸರ ಕೇಂದ್ರಿತ ವೆಚ್ಚ (Environmental Cost). ಈ ಮೂರೂ ಅಂಶಗಳನ್ನು ಸಮಾನ ನೆಲೆಯಲ್ಲಿ ನಿರ್ವಚಿಸಿ, ನಿಷ್ಕರ್ಷೆಗೊಳಪಡಿಸಿ, ಭೌಗೋಳಿಕ ಅಭಿವೃದ್ಧಿಯ ಯೋಜನೆಗಳನ್ನು ಹಮ್ಮಿಕೊಂಡಾಗ, ಭಾರತದ ಸಂವಿಧಾನದ ಕನಸು ಎನ್ನಬಹುದಾದ ಸರ್ವತೋಮುಖ ಅಭಿವೃದ್ಧಿಯ ಕಲ್ಪನೆಗಳು ಸಾಕಾರಗೊಳ್ಳುತ್ತವೆ. ಇದು ಸಾಧ್ಯವಾಗದೆ ಹೋದಾಗ ಸ್ವಾಭಾವಿಕವಾಗಿ ಭಾರತ ಎಂದರೆ ಎರಡು ಭಾರತಗಳು ಕಾಣುತ್ತವೆ. ಒಂದು ಮುಂದುವರೆದ ನಗರ ಭಾರತ ಮತ್ತೊಂದು ಹಿಂದುಳಿಯುವ ಗ್ರಾಮೀಣ ಭಾರತ. (ಉದಾಹರಣೆಗೆ ಮೈಸೂರು-ಬೆಂಗಳೂರು ದಶಪಥ ನಿರ್ಮಾಣದಿಂದ ಭೂಮಿ ಕಳೆದುಕೊಳ್ಳುವ ರೈತರು, ವ್ಯಾಪಾರ ಕಳೆದುಕೊಳ್ಳುವ ಸಣ್ಣ ವ್ಯಾಪಾರಿಗಳು ಮತ್ತು ಉದ್ಯೋಗಗಳು ಚರ್ಚೆಗೊಳಪಟ್ಟಿವೆ. ಆದರೆ ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ 120 ಕಿಲೋಮೀಟರ್‌ ವ್ಯಾಪ್ತಿಯ, ಎರಡೂ ಬದಿಯ ಗ್ರಾಮಗಳಲ್ಲಿ ಉದ್ಭವಿಸಬಹುದಾದ ಸಾಮಾಜಿಕ-ಸಾಂಸ್ಕೃತಿಕ ವ್ಯತ್ಯಯ-ಪಲ್ಲಟಗಳು ಎಲ್ಲಿಯೂ ಚರ್ಚೆಯಾಗುತ್ತಿಲ್ಲ. ಈ ಸಾಮಾಜಿಕ ವೆಚ್ಚ ಗಣನೆಗೆ ಬಾರದೆ ಉಳಿದುಬಿಡುತ್ತದೆ.)

 ಜಾಗತೀಕರಣ-ನವ ಉದಾರವಾದ

 ಅರ್ಥಶಾಸ್ತ್ರಜ್ಞರು ಈ ಸೂಕ್ಷ್ಮಗಳನ್ನು ಸರ್ಕಾರಗಳಿಗೆ ತಮ್ಮದೇ ಆದ ವ್ಯಾಖ್ಯಾನಗಳ ಮೂಲಕ ಮನದಟ್ಟು ಮಾಡುತ್ತಲೇ ಬಂದಿದ್ದಾರೆ. ಆದರೆ 1980ರ ನಂತರ ಭಾರತ ಜಾಗತೀಕರಣಕ್ಕೆ ತೆರೆದುಕೊಂಡು, 1990ರ ಮುಕ್ತ ಮಾರುಕಟ್ಟೆ-ನವ ಉದಾರವಾದಕ್ಕೆ ಒಡ್ಡಿಕೊಂಡ ನಂತರ, ಭಾರತದ ಆಳುವ ವರ್ಗಗಳು ಪಕ್ಷಾತೀತವಾಗಿ, ಈ ಸೂಕ್ಷ್ಮಗಳನ್ನು ಪರಿಗಣಿಸಲು ನಿರಾಕರಿಸುತ್ತಲೇ ಬಂದಿವೆ. ಭಿನ್ನ ಸಿದ್ಧಾಂತಗಳ ಸರ್ಕಾರಗಳು ಎಲ್ಲಿಯಾದರೂ ಸಮಾನ ನೆಲೆ ಕಾಣುವುದೇ ಆದರೆ ಈ ಆರ್ಥಿಕ ಚಿಂತನೆಗಳಲ್ಲಿ ಮತ್ತು ಇದರ ಭಾಗವಾಗಿ 1970ರ ದಶಕದಿಂದಲೇ ದೇಶದಲ್ಲಿ ಅನುಸರಿಸಲಾಗುತ್ತಿರುವ ನಗರೀಕರಣ-ನಗರ ವಿಸ್ತರಣೆಯ ಆಡಳಿತ ನೀತಿಗಳಲ್ಲಿ ಕಾಣಬಹುದು. 2010ರ ಅನಂತರದಲ್ಲಿ ತೀವ್ರತೆ ಪಡೆದುಕೊಂಡ ನವ ಉದಾರವಾದಿ ಆರ್ಥಿಕ ನೀತಿಗಳನ್ನು ಮೂಲತಃ ನಿರ್ದೆಶಿಸುತ್ತಿರುವುದು ಔದ್ಯಮಿಕ ಕಾರ್ಪೋರೇಟ್‌ ಮಾರುಕಟ್ಟೆ ಮತ್ತು ಡಿಜಿಟಲ್‌ ಬಂಡವಾಳಶಾಹಿ. ಗ್ರೀಕ್‌ ಅರ್ಥಶಾಸ್ತ್ರಜ್ಞ ಯಾನಿಸ್‌ ವರೋಫಾಕಿಸ್‌ ಇದನ್ನು Cloud Capitalsm ಅಥವಾ Techno Feudalism ಎಂದು ಕರೆಯುತ್ತಾರೆ.

ಈ ಚಿಂತನಾ ಕ್ರಮವೇ ಭಾರತದ ನಗರೀಕರಣ ಮತ್ತು ನಗರ ವಿಸ್ತೀರ್ಣದ ಆಲೋಚನೆಗಳನ್ನು ಪ್ರಧಾನವಾಗಿ ಆವರಿಸಿಕೊಂಡಿದ್ದು, ಪಕ್ಷಾತೀತವಾಗಿ ಅಮರಿಕೊಂಡಿದೆ. ಈಗ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಬೆಂಗಳೂರು ನಗರವನ್ನು Greater Bangalore ಅಥವಾ ಬೃಹತ್‌ ಬೆಂಗಳೂರು ಮಾಡುವ ಯೋಜನೆಗೆ ಚಾಲನೆ ನೀಡಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು  ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಎಂದು ಮರುನಾಮಕರಣ ಮಾಡಿ ಈ ಯೋಜನೆಯಡಿ ಬೆಂಗಳೂರನ್ನು ಐದು ಪಾಲಿಕೆಗಳನ್ನಾಗಿ ವಿಂಗಡಿಸುವ ಬೃಹತ್‌ ಯೋಜನೆಗೆ ಸಿದ್ದರಾಮಯ್ಯ ಸರ್ಕಾರ ನೀಲನಕ್ಷೆ ಸಿದ್ಧಪಡಿಸಿದೆ. ಇದಕ್ಕೆ ಪೂರಕವಾಗಿ ಈಗಾಗಲೇ ರಾಮನಗರ ಜಿಲ್ಲೆಯನ್ನು ಆಪೋಷನ ತೆಗೆದುಕೊಂಡಾಗಿದ್ದು, ಇನ್ನುಳಿದ ಸುತ್ತಲಿನ ಜಿಲ್ಲೆಗಳು ಕ್ರಮೇಣವಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿವೆ. ಕ್ರಮೇಣ ದೊಡ್ಡಬಳ್ಳಾಪುರದ ಸಮೀಪ ಇರುವ KWIN City , ದೇವನಹಳ್ಳಿಯ ಬಳಿ ಆಗಲಿರುವ ಏರೋಸ್ಪೇಸ್‌ ಪಾರ್ಕ್‌ ಇವೆಲ್ಲವೂ ಸೇರಿ ಬೆಂಗಳೂರು ಬೃಹತ್‌ ಆಗುವುದು ಖಚಿತ.

Mahira Khan: ಭಾರತ ಮತ್ತು ಮೋದಿನ ಹಾಡಿ ಹೊಗಳಿದ ಛತ್ತೀಸ್ ಗಡದ ಯುವತಿ..! #pmmodi #india #mahirakhan

 ಈ ಮುಂದಾಲೋಚನೆಯೇ (ಇದು ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ದುರಾಲೋಚನೆಯೂ ಹೌದು) ಬಿಬಿಎಂಪಿಯನ್ನು  ಗ್ರೇಟರ್‌ ಬೆಂಗಳೂರಿಗೆ ಪೂರಕವಾದ ಐದು ನಗರ ಪಾಲಿಕೆಗಳಾಗಿ ವಿಂಗಡಿಸಲು ಯೋಜನೆಗೆ ಮೂಲ ಕಾರಣವಾಗಿದೆ. ಈ ಬೃಹನ್ನಗರಿಯ ಪರಿಕಲ್ಪನೆಯ ಮೂಲವನ್ನು 1960-70ರ ದಶಕದ ಬೃಹನ್‌ ಮುಂಬೈ ಯೋಜನೆಯಲ್ಲಿ ಕಾಣಬಹುದು. ಮೂಲತಃ ಜಾಗತೀಕರಣದೊಂದಿಗೇ ತೆರೆದುಕೊಂಡ ಕಾರ್ಪೋರೇಟ್‌ ಮಾರುಕಟ್ಟೆ, ಬಂಡವಾಳದ ಕ್ರೋಢೀಕರಣ ಮತ್ತು ಹರಿವು ಹಾಗೂ ಬಂಡವಾಳಿಗರ ನಿಯಂತ್ರಣಗಳು ಈ ನಗರೀಕರಣ ಪ್ರಕ್ರಿಯೆಯ ಆಧಾರ ಸ್ತಂಭಗಳು. ಇದರಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ಮತ್ತು ಹೆದ್ದಾರಿ-ಮೇಲ್ಸೇತುವೆ-ಎಕ್ಸ್‌ಪ್ರೆಸ್‌ ವೇ-ವರ್ತುಲ ರಸ್ತೆ ಮುಂತಾದ ಮೂಲ ಸೌಕರ್ಯದ ನಿರ್ಮಾಣ ಪ್ರಮುಖ ಪಾತ್ರ ವಹಿಸಿದ್ದವು. ಇದೇ ಮಾದರಿಯನ್ನು ಅನುರಿಸಿ, ಗ್ರೇಟರ್‌ ಬೆಂಗಳೂರು ನಗರವನ್ನು ಒಂದು ರಿಯಲ್‌ ಎಸ್ಟೇಟ್‌ ಹಬ್‌ ಮಾಡುವ, ಡಿಜಿಟಲ್‌ ಬಂಡವಾಳದ ಸಂಸ್ಥಾನವನ್ನಾಗಿಸುವ ಯೋಜನೆಯನ್ನು ಇಲ್ಲಿ ಗುರುತಿಸಬಹುದು.

  ಚರ್ಚೆಯ ಭಿನ್ನ ಆಯಾಮಗಳು

 ಈ ಹಿನ್ನೆಲೆಯಲ್ಲಿ, ಚರ್ಚೆಯ ವ್ಯಾಪ್ತಿಯಲ್ಲಿ ಎತ್ತಿರುವ ಅಂಶಗಳನ್ನು ಪರಾಮರ್ಶೆಗೊಳಪಡಿಸುವ ಪ್ರಯತ್ನ ಇಲ್ಲಿದೆ. :

ಮೊದಲನೆಯದಾಗಿ ಬಿಬಿಎಂಪಿ-ಬಿಡಿಎ ಮಾದರಿಗಳನ್ನು ಸುಧಾರಣೆಗೊಳಪಡಿಸುವ ಮತ್ತು ಸಾಂಸ್ಥಿಕ ರಚನೆಯನ್ನೇ ಪುನಾರಚಿಸುವ ಧ್ಯೇಯ ಉದಾತ್ತವಾಗಿ ಕಂಡರೂ, ಅದು ಆಧುನಿಕ ನಗರೀಕರಣದ ಔದ್ಯಮಿಕ ಹಿತಾಸಕ್ತಿಗಳಿಗೆ ರುಚಿಸುವುದಿಲ್ಲ. ಏಕೆಂದರೆ ಈ ಹೊಸ ಮಾದರಿಯಲ್ಲಿ ಮೇಲೆ ಹೇಳಿದ ಹಾಗೆ ಅಭಿವೃದ್ಧಿ ಎಂಬ ಕಲ್ಪನೆಯನ್ನು ಸಾಮಾಜಿಕ-ಪರಿಸರ ವೆಚ್ಚದಿಂದ ದೂರವಿದ್ದುಕೊಂಡೇ ಅನಾವರಣಗೊಳಿಸಲಾಗುತ್ತದೆ. ಆಡಳಿತಾತ್ಮಕವಾಗಿ ಈ ಸುಧಾರಣೆ ಅಸಾಧ್ಯವೇನಲ್ಲ ಆದರೆ, ರಿಯಲ್‌ ಎಸ್ಟೇಟ್‌ ಉದ್ಯಮದ ಕ್ಷಿಪ್ರ ಬೆಳವಣಿಗೆ ಹಾಗೂ ನಗರ ವಿಸ್ತರಣೆಯ ಮೂಲ ಫಲಾನುಭವಿಗಳಾಗುವ ಡಿಜಿಟಲ್‌ ಔದ್ಯಮಿಕ ಮಾರುಕಟ್ಟೆ, ಅಲ್ಲಿನ ಬಂಡವಾಳ ಹೂಡಿಕೆ ಹಾಗೂ ಬಂಡವಾಳಿಗರ ಉನ್ನತಿಯ ದೃಷ್ಟಿಯಲ್ಲಿ, ಹಳೆಯ ಸಾಂಸ್ಥಿಕ ಸಂರಚನೆಗಳನ್ನು ಕೆಡವಿ ಹೊಸತನ್ನು ರೂಪಿಸುವುದು ಅನಿವಾರ್ಯವಾಗುತ್ತದೆ. ನಗರೀಕರಣ ಮತ್ತು ನಗರ ವಿಸ್ತೀರ್ಣದ ಯೋಜನೆಗಳು ಈಗ ಸರ್ಕಾರದ ಅಂಗಳದಲ್ಲೇ ರೂಪುಗೊಂಡರೂ ಮೂಲತಃ ಅದರ ಆಕರಗಳು ಕಾರ್ಪೋರೇಟ್‌ ಔದ್ಯಮಿಕ ಜಗತ್ತಿನ ಪ್ರಭಾವಿ ಕೇಂದ್ರಗಳಲ್ಲಿರುತ್ತದೆ.

 ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬಹುಪಾಲು ಶಾಸಕರು ರಿಯಲ್‌ ಎಸ್ಟೇಟ್‌ ಮತ್ತು ಇತರ ಮೂಲ ಸೌಕರ್ಯಗಳ ಔದ್ಯಮಿಕ ಜಗತ್ತಿನಿಂದಲೇ ಬಂದಿರುವುದರಿಂದ, ಗ್ರೇಟರ್‌ ಬೆಂಗಳೂರು ಯೋಜನೆಯ ಫಲಾನುಭವಿಗಳೂ ಅವರೇ ಆಗಿರುತ್ತಾರೆ. ಇದು ಪಕ್ಷಾತೀತವಾದ ವಿದ್ಯಮಾನ. ಹಾಗಾಗಿ ಇಲ್ಲಿ ಸರ್ಕಾರದ ಕ್ಷಮತೆ ಎನ್ನುವುದಕ್ಕಿಂತಲೂ, ಜನಬದ್ಧತೆ ಅಥವಾ ಸಾಮಾಜಿಕ ಜವಾಬ್ದಾರಿ ನಗಣ್ಯವಾಗುತ್ತದೆ, ಔದ್ಯಮಿಕ ಹಿತಾಸಕ್ತಿ ಮೇಲುಗೈ ಸಾಧಿಸುತ್ತದೆ. ಹಳೆಯ ಸಾಂಸ್ಥಿಕ ರಚನೆಗಳನ್ನು ಕ್ರಮೇಣವಾಗಿ ಇಲ್ಲವಾಗಿಸುತ್ತಾ, ಮುಂದಿನ ದಿನಗಳಲ್ಲಿ, ಸಾಮಾನ್ಯ ಜನರ ಮನರಂಜನೆ ಮತ್ತು ಸಾಂತ್ವನದ ನೆಲೆಗಳಾದ ಉದ್ಯಾನಗಳನ್ನೂ ಸಹ ಕಾರ್ಪೋರೇಟ್‌ ಉದ್ದಿಮೆಗೆ ಒಪ್ಪಿಸುವ ಒಂದು ಮಾದರಿಯ ಪೂರ್ವ ಸೂಚನೆಯನ್ನು ಗ್ರೇಟರ್‌ ಬೆಂಗಳೂರು ಯೋಜನೆಯಲ್ಲಿ ಕಾಣಬಹುದು. ಇಲ್ಲಿ ಹೂಡಲಾಗುವ, ಉತ್ಪಾದನೆಯಾಗುವ ಮತ್ತು ಕ್ರೋಢೀಕೃತವಾಗುವ ಬಂಡವಾಳ ಸರ್ಕಾರಕ್ಕೆ ಮುಖ್ಯವಾಗುತ್ತದೆ.

 ಎರಡನೆಯದಾಗಿ, ಸಂವಿಧಾನದ ತಿದ್ದುಪಡಿ ಕಾಯ್ದೆ 1992ರ ಮೂಲತಃ ಸ್ಥಳೀಯ ಸಂಸ್ಥೆಗಳಿಗೆ (Urban Local Bodies) ಸಾಂವಿಧಾನಿಕ ಸ್ಥಾನಮಾನ ಮತ್ತು ಅಧಿಕಾರವನ್ನು ಕಲ್ಪಿಸುವ ಘನ ಉದ್ದೇಶವನ್ನು ಹೊಂದಿದೆ. ಸ್ಥಳೀಯ ಸ್ವ ಸರ್ಕಾರವನ್ನು ( Self administered bodies) ಬಲಪಡಿಸುವ ಉದ್ದೇಶವನ್ನು ಹೊಂದಿತ್ತು. ಮೂಲತಃ ಪುರಸಭೆ ಮತ್ತು ನಗರ ಪಾಲಿಕೆಗಳನ್ನು ಅಧಿಕಾರ ವಿಕೇಂದ್ರೀಕರಣದ ಭಾಗವಾಗಿ ಪರಿಗಣಿಸಿ ಕಾಲಕಾಲಕ್ಕೆ ಚುನಾವಣೆಗಳನ್ನು ನಡೆಸುವ ಧ್ಯೇಯದೊಂದಿಗೆ ಈ ತಿದ್ದುಪಡಿ ತರಲಾಗಿತ್ತು. ಆದರೆ ಈ ಮೂರು ದಶಕಗಳಲ್ಲಿ ಭಾರತದ ಆರ್ಥಿಕ ಪಥ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದು, ಅಧಿಕಾರ, ಆದಾಯ, ತೆರಿಗೆ ಮತ್ತು ಸಂಪನ್ಮೂಲಗಳ ಕೇಂದ್ರೀಕರಣವೇ 21ನೆ ಶತಮಾನದ ಆಡಳಿತ ಮಂತ್ರವಾಗಿದೆ. ಇದರ ನೇರ ಪ್ರಾತ್ಯಕ್ಷಿಕೆಯನ್ನು ದೇಶಾದ್ಯಂತ ನಗರೀಕರಣ-ನಗರವಿಸ್ತೀರ್ಣ-ಮೂಲ ಸೌಕರ್ಯ ನಿರ್ಮಾಣ ಕ್ಷೇತ್ರಗಳಲ್ಲಿ ಗುರುತಿಸಬಹುದು.

 ಸಾಂಸ್ಥಿಕ ನಿರ್ವಹಣೆಯ ಕೊರತೆಗಳು

 ಮೂರನೆಯ ಅಂಶ, ಹೊಸ ಗ್ರೇಟರ್‌  ಬೆಂಗಳೂರು ಪ್ರಾಧಿಕಾರದ ಸಾಂಸ್ಥಿಕ ನಿರ್ವಹಣೆಯನ್ನು ಕುರಿತಾದದ್ದು. ಸರ್ಕಾರ ಯಾವ ಪಕ್ಷಕ್ಕೆ ಸೇರಿದ್ದರೂ, ಈ ಬೃಹನ್‌ ನಗರಿ ಅಥವಾ ಆಧುನಿಕ ನಗರೀಕರಣದ ನಂತರ ಉಗಮಿಸಲಿರುವ ಸಾಂಸ್ಥಿಕ ಚೌಕಟ್ಟುಗಳು ಬಹುತೇಕವಾಗಿ ಕಾರ್ಪೋರೇಟ್‌ ಬಂಡವಾಳಶಾಹಿ ಅವಲಂಬಿತ, ರಾಜಕೀಯ ಅಧಿಕಾರ ಕೆಂದ್ರಗಳಲ್ಲೇ ಉಳಿಯುತ್ತವೆ. ಈಗಲೂ ಸಹ ಸರ್ಕಾರಗಳು ದೊಡ್ಡ ನಗರ ಪಾಲಿಕೆಗಳಿಗೆ ಅಧಿಕಾರಿಗಳ ನೇಮಕವನ್ನು ಪಕ್ಷನಿಷ್ಠೆಯ ನೆಲೆಯಲ್ಲೇ ಪರಿಗಣಿಸುತ್ತವೆ. ಚುನಾವಣೆಗಳು ಪ್ರಜಾಸತ್ತಾತ್ಮಕವಾಗಿ ನಡೆದರೂ, ಅಲ್ಲಿಯೂ ಸಹ ಕುದುರೆ ವ್ಯಾಪಾರ, ಪಕ್ಷಾಂತರ ಮತ್ತು ಬೇಲಿ ಹಾರುವ ಪ್ರತಿನಿಧಿಗಳೇ ಪ್ರಧಾನವಾಗಿ ಶಕ್ತಿಕೇಂದ್ರಗಳಾಗಿರುತ್ತಾರೆ. ವಿಸ್ತೀರ್ಣವಾಗುವ ನಗರಗಳ ಮೂಲ ಸೌಕರ್ಯ ಕಾಮಗಾರಿಗಳೆಲ್ಲವೂ ಈ ಶಕ್ತಿ ಕೇಂದ್ರದಿಂದಲೇ ನಿರ್ದೇಶಿಸಲ್ಪಡುತ್ತವೆ. ಗುತ್ತಿಗೆದಾರರನ್ನು ಟೆಂಡರ್‌ ಮೂಲಕ ಆಯ್ಕೆ ಮಾಡಿದರೂ, ಅಲ್ಲಿ ತೆರೆಮರೆಯಲ್ಲಿ ನಡೆಯುವ ರಾಜಕೀಯ ಕಸರತ್ತುಗಳು ಮತ್ತು ವ್ಯವಹಾರಗಳು ಅಂತಿಮ ಅಧಿಕಾರ ಕೇಂದ್ರಗಳನ್ನು , ಸಂಪನ್ಮೂಲದ ಬಿಂದುವನ್ನು ನಿರ್ಧರಿಸುತ್ತವೆ.

 ಈ ಹಿನ್ನೆಲೆಯಲ್ಲಿ ನೋಡಿದಾಗ, ಚರ್ಚೆಯ ನಾಲ್ಕನೆಯ ಅಂಶ ತೆರಿಗೆ, ಹಣಕಾಸು, ಸಂಪನ್ಮೂಲಗಳ ಪ್ರಶ್ನೆ ಮುನ್ನಲೆಗೆ ಬರುತ್ತದೆ. ನಗರ ಪಾಲಿಕೆಗಳ ನಿರ್ವಹಣೆಗೆ ಅಗತ್ಯವಾದ ತೆರಿಗೆಯ ಹಣ ಮತ್ತು ಮೂಲ ಸಂಪನ್ಮೂಲಗಳ ವಿತರಣೆಗೆ ವೈಜ್ಞಾನಿಕ ನೆಲೆಯಲ್ಲಿ ನೀಲನಕ್ಷೆಯನ್ನು ಸಿದ್ದಪಡಿಸುವ ಒಂದು ಕ್ರಮ ನಮ್ಮಲ್ಲಿ ಈಗಲಾದರೂ ಇದೆಯೇ ? ಬಹುಶಃ ಇದು ಲಾಭ ಹಂಚಿಕೆಯ ಪ್ರಕ್ರಿಯೆಯಾಗಿ ನಿಷ್ಕರ್ಷೆಯಾಗುವುದೇ ಹೊರತು, ಜನತೆಯ ಪ್ರಗತಿ  ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಪ್ರಕ್ರಿಯೆಯಾಗಿರುವುದಿಲ್ಲ. ಪಂಚಾಯತ್‌ ವ್ಯವಸ್ಥೆಯನ್ನು ಅಳವಡಿಸಿ ಮೂರು ದಶಕಗಳೇ ಮೀರಿದ್ದರೂ, ಇಂದಿಗೂ ಸಹ ಜಿಲ್ಲಾ-ತಾಲ್ಲೂಕು-ಗ್ರಾಮ ಪಂಚಾಯತ್ ಸಂಸ್ಥೆಗಳಿಗೆ ಆರ್ಥಿಕ ಸ್ವಾಯತ್ತತೆ ನೀಡುವ ಯೋಚನೆಯನ್ನೂ ಮಾಡದಿರುವುದು, ಈ ವಿರಾಟ್‌ ಯೋಜನೆಯ (Grand Plan) ಸಂಕೇತವಾಗಿ ಕಾಣಬಹುದು.

 ಈಗ ಗ್ರೇಟರ್‌ ಬೆಂಗಳೂರನ್ನು ಐದು ನಗರ ಪಾಲಿಕೆಗಳಾಗಿ ವಿಂಗಡಿಸುವುದು, ಸಂಪನ್ಮೂಲ ಅಥವಾ ಅಧಿಕಾರದ ವಿಕೇಂದ್ರೀಕರಣದ ಪ್ರಕ್ರಿಯೆ ಎಂಬ ಭ್ರಮೆ ಬಹುಶಃ ಅತಿ ಎನಿಸುತ್ತದೆ. ಇದು ಇನ್ನೂ ಹೆಚ್ಚಿನ ಕೇಂದ್ರೀಕರಣಕ್ಕೆ ಕಾರಣವಾಗುತ್ತದೆ. ರಾಜಕೀಯ ಪ್ರಭಾವದ ವಿಸ್ತರಣೆ, ಪ್ರಸರಣ ಮತ್ತು ಪಕ್ಷ ರಾಜಕಾರಣದ ಅಧಿಕಾರ ಶಕ್ತಿ ಕೇಂದ್ರಗಳ ಕೇಂದ್ರ ಬಿಂದುಗಳಾಗಿ ಈ ನವ ಪಾಲಿಕೆಗಳು ಕಾರ್ಯನಿರ್ವಹಿಸುವ ಸಾಧ್ಯತೆಗಳೇ ಹೆಚ್ಚು. ಇಲ್ಲಿಯೂ ಸಹ ರಾಜಕೀಯ ಪಕ್ಷಗಳು , ಕಾರ್ಪೋರೇಟ್‌ ಬಂಡವಾಳಶಾಹಿಯ ಒಡನಾಟದೊಂದಿಗೆ ನಗರಾಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತವೆ. ಭೌಗೋಳಿಕವಾಗಿ, ಸಾಂವಿಧಾನಿಕವಾಗಿ ವಿಂಗಡನೆಯಾಗುವ ಪಾಲಿಕೆಗಳಲ್ಲಿ ಅಧಿಕಾರ ರಾಜಕಾರಣದ ಶಕ್ತಿ ಕೇಂದ್ರಗಳು ಪ್ರಧಾನವಾಗಿ ಫಲಾನುಭವಿಗಳಾಗುತ್ತವೆ. ಇವುಗಳ ಹಿಂದೆ ಬಂಡವಾಳಶಾಹಿಯ ಹಿತಾಸಕ್ತಿ ಮತ್ತು ಕಾರ್ಪೋರೇಟ್‌ ಔದ್ಯಮಿಕ ಪೋಷಣೆ ಮೂಲ ಮಂತ್ರವಾಗಿ ಪರಿಣಮಿಸುತ್ತದೆ.

 ಕೊನೆಯ ಅಂಶ ಒಂದು ಕನಸು ಎನಿಸುತ್ತದೆ. “ ಉತ್ತಮ ನಾಗರಿಕ ಸೇವೆ ” ಎಂಬ ಆಡಳಿತಾತ್ಮಕ ಔದಾತ್ಯವನ್ನು ನಮ್ಮ ರಾಜಕೀಯ ಪಕ್ಷಗಳು ಮರೆತು ವರುಷಗಳೇ ಕಳೆದಿವೆ. ಮಂಡಲ್‌ ಪಂಚಾಯತಿಯಿಂದ ಮಹಾನಗರ ಪಾಲಿಕೆಗಳವರೆಗೆ ಸಾಂವಿಧಾನಿಕ ಚುನಾಯಿತ ಪ್ರತಿನಿಧಿಗಳು, ರಾಷ್ಟ್ರ ರಾಜಕಾರಣದ ಪಕ್ಷಗಳ ಚಹರೆಗಳೊಂದಿಗೆ ಆಯ್ಕೆಯಾಗುವ ಪ್ರಕ್ರಿಯೆ ಆರಂಭವಾದಾಗಲೇ ಈ ಉದಾತ್ತ ನೀತಿಯ ಅವಸಾನವೂ ಆರಂಭವಾಗಿರುವುದನ್ನು ಗಮನಿಸಬಹುದು. ಹಾಗಾಗಿ ಜನಸೇವೆ ಎನ್ನುವುದು ಆಳುವ ವರ್ಗಗಳ ಅಥವಾ ಅಧಿಕಾರ ಕೇಂದ್ರಗಳ ಪಕ್ಷಪಾತಗಳು, ಸ್ವ ಹಿತಾಸಕ್ತಿಗಳು ಮತ್ತು ರಾಜಕೀಯ ಅಸ್ತಿತ್ವದ ನೆಲೆಗಳಲ್ಲೇ ನಿಷ್ಕರ್ಷೆಯಾಗುವುದು ಸಹಜ ಪ್ರಕ್ರಿಯೆಯೇ ಆಗಿದೆ. ಪುನಃ ಇಲ್ಲಿ ಪ್ರವೇಶಿಸುವುದು ರಿಯಲ್‌ ಎಸ್ಟೇಟ್‌ ಮೊದಲಾದ ಕಾರ್ಪೋರೇಟ್‌ ಔದ್ಯಮಿಕ ಹಿತಾಸಕ್ತಿಗಳು. ಹೆದ್ದಾರಿ, ದಶಪಥ ನಿರ್ಮಾಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ವಾಸ್ತವದ ಅರಿವಾಗುತ್ತದೆ.

 ಅಂತಿಮವಾಗಿ

 ಕೊನೆಯದಾಗಿ, ಈಗಿನ ಬೆಂಗಳೂರಿನ ಬಡಾವಣೆಯ ನಿವಾಸಿಗಳು ಎದುರಿಸುತ್ತಿರುವ ಮೂಲ ಸೌಕರ್ಯ ಸಮಸ್ಯೆಗಳು, ಒಳಚರಂಡಿ ಅವ್ಯವಸ್ಥೆ, ಜಲಮೂಲಗಳ ನಿರ್ವಹಣೆಯಲ್ಲಿರುವ ಕೊರತೆಗಳು ಇದಾವುದನ್ನೂ ಪರಿಹರಿಸುವ ಒಂದು ವೈಜ್ಞಾನಿಕ ಯೋಜನೆಯನ್ನು ಯಾವ ಸರ್ಕಾರಗಳೂ ರೂಪಿಸುವುದಿಲ್ಲ, ರೂಪಿಸಿಯೂ ಇಲ್ಲ. ಸ್ಥಳೀಯ ನಾಗರಿಕ ಸಂಸ್ಥೆಗಳು, ಹಿರಿಯ ನಾಗರಿಕರು, ಸಾಮಾಜಿಕ ಸಂಘಟನೆಗಳು ಹಾಗೂ ತಳಸಮಾಜದ ನಡುವೆ ನಿಂತು ಉತ್ತಮ ಸೌಕರ್ಯಗಳಿಗಾಗಿ ನಿರಂತರ ಹೋರಾಡುತ್ತಿರುವ ಹತ್ತು ಹಲವಾರು ಸಂಘಟನೆಗಳು ಈ ಯೋಜನೆಯ ಒಂದು ಭಾಗವಾಗಿ ಪರಿಗಣಿಸಲ್ಪಡುವುದೇ ಇಲ್ಲ. ಈ ಒಳಗೊಳ್ಳುವಿಕೆಯ (Inclusiveness) ಕೊರತೆಯೇ ನಮ್ಮ ನಗರಾಭಿವೃದ್ಧಿಯ ಯೋಜನೆಗಳನ್ನು ಭ್ರಷ್ಟರ ಕೂಪಗಳನ್ನಾಗಿ ಮಾಡಿವೆ.

 ಗ್ರೇಟರ್‌ ಬೆಂಗಳೂರು ಅಥವಾ ಬೃಹತ್‌ ಮೈಸೂರು ಈ ಯೋಜನೆಗಳೆಲ್ಲವೂ ಆಡಳಿತ ಭ್ರಷ್ಟಾಚಾರದ ವಿಕೇಂದ್ರೀಕರಣದ ಭಾಗವಾಗುವುದೇ ಹೊರತು, ಉತ್ತಮ ಜನಸೇವೆಯ ಕೇಂದ್ರವಾಗುವ ಸಾಧ್ಯತೆಗಳು ವಿರಳ. ಹಾಗಾಗಿ ಈಗಿನ ಬೆಂಗಳೂರಿನ ಜನತೆಯ ಗೋಳಾಟ, ಪರದಾಟ, ತೊಳಲಾಟ ಇವೆಲ್ಲವೂ ಇನ್ನೂ ಹೆಚ್ಚು ಭಾಗಿದಾರರನ್ನು ಒಳಗೊಂಡು, ಅರಣ್ಯ ರೋದನವಾಗಿ ಪರ್ಯವಸಾನ ಹೊಂದುತ್ತವೆ. ಚರ್ಚೆಯ ಸೂಚನೆಯಲ್ಲಿ ಕೊನೆಯ ವಾಕ್ಯ ಹೇಳುವಂತೆ “ ಇನ್ನಷ್ಟು ಅವಾಂತರಗಳನ್ನು ಸೃಷ್ಟಿಸುವ ಕರಾಳ ದಿನಗಳಿಗೆ ಸಿದ್ಧರಾಗುವ ” ಲಕ್ಷಣಗಳೇ ನಿಚ್ಚಳವಾಗಿವೆ. ನಮ್ಮ ದೇಶದ ಆರ್ಥಿಕತೆ ಸಾಗುತ್ತಿರುವ ಹಾದಿಯನ್ನು ಗಮನಿಸಿದರೆ ಈ ನಿರೀಕ್ಷೆ ಹುಸಿಯಾಗುವ ಸಾಧ್ಯತೆಗಳೇನೂ ಕಾಣುವುದಿಲ್ಲ. ಯಾವುದಕ್ಕೂ ಕಾದು ನೋಡೋಣ !!!

(ಕೃಪೆ : ಸಮಾಜಮುಖಿ ಮಾಸಪತ್ರಿಕೆ ಸೆಪ್ಟಂಬರ್‌ 2025)-೦-೦-೦-

Tags: ##DkShivakumarBJPbjp opposes greater bengaluru billCongress Partygreater bengalurugreater bengaluru act 2024greater bengaluru authoritygreater bengaluru authority (gba)greater bengaluru authority detailsgreater bengaluru authority logogreater bengaluru authority newsgreater bengaluru authority today newsgreater bengaluru billgreater bengaluru electiongreater bengaluru governance actgreater bengaluru governance billgreater bengaluru inಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಶ್ರೀದುರ್ಗಾ ಪರಮೇಶ್ವರಿ ಸನ್ನಿಧಾನದಲ್ಲಿ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ “ಕೊನಾರ್ಕ್” ಚಿತ್ರಕ್ಕೆ ಚಾಲನೆ .

Next Post

ಜಿ.ಎಸ್.ಟಿ ಸ್ಲ್ಯಾಬ್ ನಲ್ಲಿ ಮಹತ್ತರ ಬದಲಾವಣೆ – ದೇಶದ ಜನರಿಗೆ ಮೋದಿ ಭರ್ಜರಿ ಗಿಫ್ಟ್ 

Related Posts

ಕೇಂದ್ರದ ನಿರ್ಧಾರಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹರ್ಷ
Top Story

ಕೇಂದ್ರದ ನಿರ್ಧಾರಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹರ್ಷ

by ಪ್ರತಿಧ್ವನಿ
September 4, 2025
0

ಜಿಎಸ್‌ಟಿ ಸುಧಾರಣೆ; ಮೋದಿ ಸರ್ಕಾರದಿಂದ ರಾಷ್ಟ್ರದ ಜನತೆಗೆ ದೀಪಾವಳಿ ಕೊಡುಗೆ ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ...

Read moreDetails
ಗ್ಯಾಂಗ್ಸ್ ಆಫ್ ಯುಕೆ ಟ್ರೈಲರ್ ಉಪೇಂದ್ರ ಬಿಡುಗಡೆ

ಗ್ಯಾಂಗ್ಸ್ ಆಫ್ ಯುಕೆ ಟ್ರೈಲರ್ ಉಪೇಂದ್ರ ಬಿಡುಗಡೆ

September 4, 2025

ಡಿಕೆಶಿಗೆ ಧನ್ಯವಾದ ಸಲ್ಲಿಸಿದ ಮುಳುಗಡೆ ಸಂತ್ರಸ್ತರ ರೈತ..!

September 4, 2025
ಜಿ.ಎಸ್.ಟಿ ಸರಳೀಕರಣ – ಯಾವೆಲ್ಲಾ ವಸ್ತುಗಳು ಅಗ್ಗ- ಯಾವುದೆಲ್ಲ ದುಬಾರಿ ..?! 

ಜಿ.ಎಸ್.ಟಿ ಸರಳೀಕರಣ – ಯಾವೆಲ್ಲಾ ವಸ್ತುಗಳು ಅಗ್ಗ- ಯಾವುದೆಲ್ಲ ದುಬಾರಿ ..?! 

September 4, 2025
ಜಿ.ಎಸ್.ಟಿ ಸ್ಲ್ಯಾಬ್ ನಲ್ಲಿ ಮಹತ್ತರ ಬದಲಾವಣೆ – ದೇಶದ ಜನರಿಗೆ ಮೋದಿ ಭರ್ಜರಿ ಗಿಫ್ಟ್ 

ಜಿ.ಎಸ್.ಟಿ ಸ್ಲ್ಯಾಬ್ ನಲ್ಲಿ ಮಹತ್ತರ ಬದಲಾವಣೆ – ದೇಶದ ಜನರಿಗೆ ಮೋದಿ ಭರ್ಜರಿ ಗಿಫ್ಟ್ 

September 4, 2025
Next Post
ಜಿ.ಎಸ್.ಟಿ ಸ್ಲ್ಯಾಬ್ ನಲ್ಲಿ ಮಹತ್ತರ ಬದಲಾವಣೆ – ದೇಶದ ಜನರಿಗೆ ಮೋದಿ ಭರ್ಜರಿ ಗಿಫ್ಟ್ 

ಜಿ.ಎಸ್.ಟಿ ಸ್ಲ್ಯಾಬ್ ನಲ್ಲಿ ಮಹತ್ತರ ಬದಲಾವಣೆ - ದೇಶದ ಜನರಿಗೆ ಮೋದಿ ಭರ್ಜರಿ ಗಿಫ್ಟ್ 

Recent News

ಕೇಂದ್ರದ ನಿರ್ಧಾರಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹರ್ಷ
Top Story

ಕೇಂದ್ರದ ನಿರ್ಧಾರಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹರ್ಷ

by ಪ್ರತಿಧ್ವನಿ
September 4, 2025
ಗ್ಯಾಂಗ್ಸ್ ಆಫ್ ಯುಕೆ ಟ್ರೈಲರ್ ಉಪೇಂದ್ರ ಬಿಡುಗಡೆ
Top Story

ಗ್ಯಾಂಗ್ಸ್ ಆಫ್ ಯುಕೆ ಟ್ರೈಲರ್ ಉಪೇಂದ್ರ ಬಿಡುಗಡೆ

by ಪ್ರತಿಧ್ವನಿ
September 4, 2025
Top Story

ಡಿಕೆಶಿಗೆ ಧನ್ಯವಾದ ಸಲ್ಲಿಸಿದ ಮುಳುಗಡೆ ಸಂತ್ರಸ್ತರ ರೈತ..!

by ಪ್ರತಿಧ್ವನಿ
September 4, 2025
ಜಿ.ಎಸ್.ಟಿ ಸರಳೀಕರಣ – ಯಾವೆಲ್ಲಾ ವಸ್ತುಗಳು ಅಗ್ಗ- ಯಾವುದೆಲ್ಲ ದುಬಾರಿ ..?! 
Top Story

ಜಿ.ಎಸ್.ಟಿ ಸರಳೀಕರಣ – ಯಾವೆಲ್ಲಾ ವಸ್ತುಗಳು ಅಗ್ಗ- ಯಾವುದೆಲ್ಲ ದುಬಾರಿ ..?! 

by Chetan
September 4, 2025
ಜಿ.ಎಸ್.ಟಿ ಸ್ಲ್ಯಾಬ್ ನಲ್ಲಿ ಮಹತ್ತರ ಬದಲಾವಣೆ – ದೇಶದ ಜನರಿಗೆ ಮೋದಿ ಭರ್ಜರಿ ಗಿಫ್ಟ್ 
Top Story

ಜಿ.ಎಸ್.ಟಿ ಸ್ಲ್ಯಾಬ್ ನಲ್ಲಿ ಮಹತ್ತರ ಬದಲಾವಣೆ – ದೇಶದ ಜನರಿಗೆ ಮೋದಿ ಭರ್ಜರಿ ಗಿಫ್ಟ್ 

by Chetan
September 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೇಂದ್ರದ ನಿರ್ಧಾರಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹರ್ಷ

ಕೇಂದ್ರದ ನಿರ್ಧಾರಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹರ್ಷ

September 4, 2025
ಗ್ಯಾಂಗ್ಸ್ ಆಫ್ ಯುಕೆ ಟ್ರೈಲರ್ ಉಪೇಂದ್ರ ಬಿಡುಗಡೆ

ಗ್ಯಾಂಗ್ಸ್ ಆಫ್ ಯುಕೆ ಟ್ರೈಲರ್ ಉಪೇಂದ್ರ ಬಿಡುಗಡೆ

September 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada