• Home
  • About Us
  • ಕರ್ನಾಟಕ
Wednesday, October 1, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಸಾಂಸ್ಥಿಕ ವ್ಯಕ್ತಿತ್ವದ ಹೋರಾಟದ ಬದುಕು

ನಾ ದಿವಾಕರ by ನಾ ದಿವಾಕರ
September 26, 2025
in Top Story, ಕರ್ನಾಟಕ, ಜೀವನದ ಶೈಲಿ, ದೇಶ, ರಾಜಕೀಯ
0
ಸಾಂಸ್ಥಿಕ ವ್ಯಕ್ತಿತ್ವದ ಹೋರಾಟದ ಬದುಕು
Share on WhatsAppShare on FacebookShare on Telegram

ಕರ್ನಾಟಕದ ಏಕೀಕರಣ-ಕನ್ನಡದ ವಿಕಾಸಕ್ಕಾಗಿ ಬದುಕು ಸಮರ್ಪಿಸಿದ ಪಾಟೀಲ್‌ ಪುಟ್ಟಪ್ಪ

ADVERTISEMENT

(ಕರ್ನಾಟಕ ಏಕೀಕರಣ ಟ್ರಸ್ಟ್‌ (ರಿ) ಮೈಸೂರು ದಿನಾಂಕ 6-9-2025 ರಂದು  ನೃಪತುಂಗ ಕನ್ನಡ ಶಾಲೆಯಲ್ಲಿ ಆಯೋಜಿಸಿದ್ದ ಏಕೀಕರಣ ಹೋರಾಟಗಾರರ ಜೀವನ ಪರಿಚಯ ಸರಣಿ ಉಪನ್ಯಾಸ  ಕಾರ್ಯಕ್ರಮದ ಉದ್ಘಾಟನಾ ಭಾಷಣ- ಲೇಖನ ರೂಪ)

ಭಾಗ 1

ಕರ್ನಾಟಕದ ಇತಿಹಾಸದಲ್ಲಿ ಹಲವಾರು ಮಹಾನ್‌ ಚಿಂತಕರನ್ನು, ದಾರ್ಶನಿಕರನ್ನು ಗುರುತಿಸಬಹುದು. ಭಾಷಿಕವಾಗಿ, ಸಾಂಸ್ಕೃತಿಕವಾಗಿ, ಪತ್ರಿಕೋದ್ಯಮದಲ್ಲಿ, ಭಾಷಾ ಚಳುವಳಿ-ಹೋರಾಟಗಳಲ್ಲಿ ಹಾಗೂ ರಾಜಕೀಯವಾಗಿ ವಿಂಗಡಿಸಬಹುದಾದ ಈ ಮಹನೀಯರನ್ನು ಗುರುತಿಸುವಾಗ, ನಮ್ಮ ಬಹುತ್ವ ಸಂಸ್ಕೃತಿಯ ವೈವಿಧ್ಯತೆಯಷ್ಟೇ ವೈವಿಧ್ಯಮಯ ವ್ಯಕ್ತಿತ್ವಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆದುಕೊಂಡಿರುವ, ಸಾರ್ವತ್ರಿಕ ವ್ಯಕ್ತಿತ್ವವನ್ನು ರೂಪಿಸಿಕೊಂಡು, ಬಾಳಿ ಬದುಕಿದ, ಕನ್ನಡದ ಬೆಳವಣಿಗೆ ತಮ್ಮದೇ ಆದ ಸೈದ್ದಾಂತಿಕ-ಸಾಂಸ್ಕೃತಿಕ ನೆಲೆಗಳಲ್ಲಿ ಮಹತ್ತರ ಕೊಡುಗೆ ಸಲ್ಲಿಸಿದ ಅನೇಕ ಮಹನೀಯರು ನಮ್ಮ ನಡುವೆ ಆಗಿ ಹೋಗಿದ್ದಾರೆ. ವರ್ತಮಾನದ ಸಂದರ್ಭದಲ್ಲಿ ಇಂಥವರನ್ನು ನೆನೆಯುವುದು ಎಷ್ಟು ಮುಖ್ಯವೋ, ಅವರು ಬಿಟ್ಟುಹೋದ ಮೌಲ್ಯಗಳನ್ನು, ಯಾವುದೇ ಮಾರ್ಗದಲ್ಲಾದರೂ ಅನುಸರಿಸುವುದು ಅಷ್ಟೇ ಮುಖ್ಯ.

 ಇಂತಹ ವ್ಯಕ್ತಿತ್ವಗಳ ಪೈಕಿ ಹಲವು ವೈ಼ಶಿಷ್ಟ್ಯಗಳನ್ನು ರೂಢಿಸಿಕೊಂಡು ಆದರ್ಶಪ್ರಾಯರಾಗಿ ಬದುಕಿದ ಚಿಂತಕರ ದೊಡ್ಡ ಪಟ್ಟಿಯೇ ನಮ್ಮ ಮುಂದೆ ಇದೆ. ಆದರೆ ಕರ್ನಾಟಕದ ಸಾಹಿತ್ಯ ಚರಿತ್ರೆ, ಕನ್ನಡ ಪರ ಹೋರಾಟಗಳ ಪರಂಪರೆ, ಕನ್ನಡ ಪತ್ರಿಕೋದ್ಯಮ, ಕನ್ನಡಕ್ಕಾಗಿ ಕೈ ಎತ್ತುವ ಸಂಸ್ಥೆಯ ಇತಿಹಾಸ, ಕನ್ನಡ ಭಾಷಾ ಚಳುವಳಿಗಳ ಮುಂಚೂಣಿ ನಾಯಕತ್ವ ಹೀಗೆ ವಿವಿಧ ನೆಲೆಗಳಲ್ಲಿ, ಏಕಕಾಲಕ್ಕೆ ಸಕ್ರಿಯವಾಗಿ, ಕ್ರಿಯಾಶೀಲವಾಗಿ, ದೃಢ ನಿಶ್ಚಯದೊಂದಿಗೆ ತಮ್ಮ ಬದುಕು ಸವೆಸಿದ ಕೆಲವೇ ವ್ಯಕ್ತಿಗಳು ನಮ್ಮ ನಡುವೆ ಕಾಣಲು ಸಾಧ್ಯ. ಇಂತಹ ಮಹಾನ್‌ ಚಿಂತಕ-ಸಂಘಟಕ-ಹೋರಾಟಗಾರ-ಸಾಹಿತಿಯ ಪೈಕಿ ಪಾಟೀಲ ಪುಟ್ಟಪ್ಪ ಒಬ್ಬರು ಮತ್ತು ಮುಂಚೂಣಿಯಲ್ಲಿ ನಿಲ್ಲಬಹುದಾದ ವ್ಯಕ್ತಿ ಎಂದರೆ ಅತಿಶಯೋಕ್ತಿಯಾಗಲಾರದು. ಕನ್ನಡದ ಜನತೆ ಆತ್ಮೀಯತೆಯಿಂದ ಪಾಟೀಲ್‌ ಪುಟ್ಟಪ್ಪ ಅವರನ್ನು ʼ ಪಾಪು ʼ ಎಂದೇ ಗುರುತಿಸುವುದು ವಿಶೇಷ.

BK Hariprasad : ಈ ಪಾರ್ಟಿ  ಮೀಸಲಾತಿ ನಾ ವಿರೋಧ ಮಾಡ್ತಿದೆ #pratidhvani #bkhariprasad #castsystem

 ಇಂತಹ ವ್ಯಕ್ತಿಗಳನ್ನು ಸ್ಮರಿಸುವುದು ಆಚರಣಾತ್ಮಕ ಮಾತ್ರವಾಗುತ್ತದೆ. ಆದರೆ ಅವರ ಬದುಕಿನ ಹಾದಿಯನ್ನು ಮರು ಓದಿಗೊಳಪಡಿಸಿ, ಆ ಹಾದಿಯಲ್ಲಿ ಅವರು ಎದುರಿಸಿದ ಸಂಕಟ, ಸವಾಲು, ಸಂದಿಗ್ಧತೆ ಮತ್ತು ಪ್ರಶ್ನೆಗಳನ್ನು ಮರುವಿಮರ್ಶೆಗೊಳಪಡಿಸುವುದು ವರ್ತಮಾನದ ಸಂದರ್ಭದಲ್ಲಿ ಬಹಳ ಮುಖ್ಯವಾಗುತ್ತದೆ. ಏಕೆಂದರೆ ಮಿಲೆನಿಯಂ ಮಕ್ಕಳು ಎಂದೇ ಗುರುತಿಸಬಹುದಾದ 20-30 ವಯೋಮಾನದ ಯುವ ಸಮೂಹಕ್ಕೆ ಇವರನ್ನು ಪರಿಚಯಿಸುವ ತುರ್ತು ನಮ್ಮ ಮುಂದಿದೆ. ತಂತ್ರಜ್ಞಾನದ ಸಂವಹನ ಸಾಧನಗಳಲ್ಲೇ ಮುಳುಗಿಹೋಗಿರುವ ಈ ಯುವ ತಲೆಮಾರಿಗೆ ಇಂತಹ ಮಹಾನ್‌ ಚಿಂತಕರನ್ನು ಪರಿಚಯಿಸಿ ಅಂಥವರ ಬಗ್ಗೆ ಸಂವಾದಿಸುವ ಅವಶ್ಯಕತೆಯೂ ಇದೆ. ಈ ನಿಟ್ಟಿನಲ್ಲಿ ಪಾಪು ಅವರನ್ನು ಸ್ಮರಿಸುವಾಗ, ನಮ್ಮ ಮುಂದೆ ಬಹು ಆಯಾಮಗಳು ತೆರೆದುಕೊಳ್ಳುವುದಾದರೂ, ಕರ್ನಾಟಕದ ಏಕೀಕರಣ ಹೋರಾಟದ ಮೂಲಕ ಅವರನ್ನು ಗುರುತಿಸುವುದು ಒಂದು ವಿಶಿಷ್ಟ ಪ್ರಯತ್ನ.

 ಏಕೀಕರಣ ಉಪನ್ಯಾಸ ಮಾಲಿಕೆ

ಈ ಪ್ರಯತ್ನಕ್ಕೆ ಮುಂದಾಗಿರುವುದು ನಮ್ಮ ನಡುವಿನ ನಾಟಕಕಾರರೂ, ಸಾಹಿತಿಯೂ, ವೃತ್ತಿಯಲ್ಲಿ ಪ್ರಾಧ್ಯಾಪಕಿಯೂ ಆದ ಸುಜಾತಾ ಅಕ್ಕಿ ಮತ್ತು ಅವರ ಸಹವರ್ತಿಗಳು. ಅವರು ಕಟ್ಟಿಕೊಂಡಿರುವ ಕರ್ನಾಟಕ ಏಕೀಕರಣ ಟ್ರಸ್ಟ್‌ ಒಂದು ಸಣ್ಣ ಸಂಸ್ಥೆಯಾಗಿದ್ದರೂ, ವಿಶಾಲ ಹಂದರ ಇರುವ ಒಂದು ಆಲದ ಮರದಂತೆ, ಏಕೀಕರಣ ಹೋರಾಟದಲ್ಲಿ ಸಕ್ರಿಯವಾಗಿ ಹೋರಾಡಿದ ಎಲ್ಲ ಪ್ರಾತಃಸ್ಮರಣೀಯರನ್ನೂ ವರ್ತಮಾನದ ಸಮಾಜಕ್ಕೆ ಪರಿಚಯಿಸುವ ದೊಡ್ಡ ಯೋಜನೆಯನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಯೋಚಿಸಿರುವ ಸರಣಿ ಉಪನ್ಯಾಸ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ನಡೆಸುವ ಮೂಲಕ ಯುವ ಸಮೂಹಕ್ಕೆ, ಏಕೀಕರಣದ ಇತಿಹಾಸವನ್ನು ಮತ್ತು ಅದಕ್ಕಾಗಿ ಜೀವ ತೆತ್ತವರ, ಬದುಕು ಮುಡಿಪಾಗಿಟ್ಟವರ ಚರಿತ್ರೆಯನ್ನೂ ತಲುಪಿಸುವ ಕೈಂಕರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ಪ್ರಶಂಸನೀಯ.

 ಈ ಸರಣಿ ಉಪನ್ಯಾಸದ ಮೊದಲ ಹೆಜ್ಜೆಯಾಗಿ, ಪಾಪು ಅವರನ್ನು ಪರಿಚಯಿಸುವ ಜವಾಬ್ದಾರಿಯನ್ನು, ಅಭಿಮಾನ ಪೂರ್ವಕವಾಗಿ ನನಗೆ ನೀಡಿರುವುದಕ್ಕಾಗಿ ಸುಜಾತಾ ಅಕ್ಕಿ ಮತ್ತು ಅವರ ಸಹಚರರಿಗೆ ಅಭಾರಿಯಾಗಿದ್ದೇನೆ. ಈ ಸರಣಿ ಉಪನ್ಯಾಸದ ಉದ್ಘಾಟನೆಯನ್ನು ಈ ಮುನ್ನ ಹಿರಿಯ ಸಾಹಿತಿ ಕವಯಿತ್ರಿ ಚ. ಸರ್ವಮಂಗಳ ಅವರ ಘನ ಅಧ್ಯಕ್ಷತೆಯಲ್ಲಿ ನೆರವೇರಿಸಲಾಗಿದ್ದು, ಅಂದು ಮಂಡಿಸಿದ ಪಾಪು ಅವರನ್ನು ಕುರಿತ ಉಪನ್ಯಾಸವನ್ನೇ ಇಂದು ನೃಪತುಂಗ ಕನ್ನಡ ಶಾಲೆಯ ಮಕ್ಕಳ ಮುಂದೆ ಪ್ರಸ್ತುತಪಡಿಸಲು ಅವಕಾಶ ನೀಡಿರುವುದು ಸಂತೋಷದ ವಿಚಾರ. ಈ ಪೀಠಿಕೆಯೊಂದಿಗೆ ಪಾಪು ಅವರನ್ನು ಕುರಿತ ನನ್ನ ಮಾತುಗಳನ್ನು ಇಲ್ಲಿ ಮಂಡಿಸುತ್ತೇನೆ. ಈ ಮಾಹಿತಿಗಳನ್ನು ಸಂಗ್ರಹಿಸಲು ನೆರವಾದ ಎಲ್ಲ ಬ್ಯಾಡಗಿಯ ಶ್ರೀಮತಿ ಸಂಕಮ್ಮ ಬ್ಯಾಡಗಿ ಮತ್ತು ಹಿರಿಯ ಸಾಹಿತಿ ಹೊರೆಯಾಲ ದೊರೆಸ್ವಾಮಿ ಅವರಿಗೂ ನನ್ನ ಕೃತಜ್ಞತೆಗಳು.

 ಪಾಪು ಬದುಕು ಹೊರಳು ನೋಟ

 ಪಾಟೀಲ್‌ ಪುಟ್ಟಪ್ಪ ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಕುರುಬಗೊಂಡ ಗ್ರಾಮ.  14-01-1919 ರಂದು ಜನಿಸಿದ ಪಾಪು ಶತಾಯುಷಿಯಾಗಿ 2020ರ ಮಾರ್ಚ್‌ 16ರಂದು (21) ಮಾರ್ಚ್‌ 16 2020 ರಲ್ಲಿ ಜನಿಸಿದರು. ಸಿದ್ಧಲಿಂಗಪ್ಪ-ಮಲ್ಲಮ್ಮ ಇವರ ತಂದೆ ತಾಯಿ.  ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ, ವಿಶೇಷವಾಗಿ ಕರ್ನಾಟಕದ ಏಕೀಕರಣ ಹೋರಾಟದಲ್ಲಿ ಆರಂಭದಿಂದಲೂ  ಸಕ್ರಿಯರಾಗಿದ್ದುದೇ ಅಲ್ಲದೆ, ತಮ್ಮ  ಕೊನೆಯ ಉಸಿರಿನವರೆಗೂ ಕನ್ನಡ ಪರ ಹೋರಾಟದ ಒಂದು ದಿಟ್ಟ ದನಿಯಾಗಿ ಬಾಳಿದವರು.

Veerappa Moily : ಸಾಮಾಜಿಕ, ಶೈಕ್ಷಣಿಕ ಹಕ್ಕನ್ನ ಕಸಿಯಲು ಸಾದ್ಯವಿಲ್ಲ #pratidhvani #castecensus #watch

ಶಾಲಾ ಶಿಕ್ಷಣವನ್ನು ಹಲಗೇರಿ, ಬ್ಯಾಡಗಿ, ಚಿತ್ರದುರ್ಗ ಮತ್ತು ಹಾವೇರಿಗಳಲ್ಲಿ ಮುಗಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಪೂರೈಸಿದರು. ಇದಾದ ಬಳಿಕ ಅವರು ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಎಂ.ಎಂ.ಬಿ. ವ್ಯಾಸಂಗ ಮಾಡಿದರು. 1949ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ  ಪತ್ರಿಕೋದ್ಯಮದಲ್ಲಿ ಎಂ.ಎಫ್.ಪಿ ಪದವಿ ಗಳಿಸಿದರು. ಪಾಪು ಅವರ  ಕಾಲೇಜು ಶಿಕ್ಷಣ ಧಾರವಾಡದಲ್ಲಿ 1939 ರಲ್ಲಿ ಆರಂಭವಾಯ್ತು. ಅದೇ ವರ್ಷ ಉಡುಪಿಯ `ಅಂತರಂಗ’ ಪತ್ರಿಕೆಯಲ್ಲಿ ಶ್ರೀರಂಗ, ಕುವೆಂಪು, ಬೇಂದ್ರೆಯವರ ಮೇಲೆ ಲೇಖನ ಬರೆದರು. 1941 ರಲ್ಲಿ `ನಾನು ಮಾಸ್ತಿಯವರನ್ನು ಕಂಡೆ’ ಎಂಬ ಲೇಖನ, ಮಾಸ್ತಿಯವರಿಂದ ಮೆಚ್ಚುಗೆ ಪಡೆಯಿತು. ಸಿ. ಕೆ. ವೆಂಕಟರಾಮಯ್ಯನವರ `ಅಬ್ರಹಾಂ ಲಿಂಕನ್’ ಕುರಿತು `ಜೀವನ’ ಪತ್ರಿಕೆಯಲ್ಲಿ ಬರೆದ ಲೇಖನಕ್ಕೆ ಪ್ರತಿಯಾಗಿ ವಿ. ಕೃ. ಗೋಕಾಕರು ಪ್ರತಿ ವಿಮರ್ಶೆ ಬರೆದರು .ಬೇಂದ್ರೆಯವರ ನಿಸರ್ಗ ಕವಿತೆಗಳು-ಜೀವನದಲ್ಲಿ ಸುದೀರ್ಘ ಲೇಖನ ಬರೆದು ಪ್ರಸಿದ್ಧರಾದವರು. 1942ರಲ್ಲಿ ಕರ್ನಾಟಕ ಕಾಲೇಜಿನ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆಯನ್ನೂ ಮಾಡಿದ್ದರು.

 1942 ರಲ್ಲಿ ರಾಷ್ಟ್ರೀಯ ಹೋರಾಟದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಸಂಘಟನೆ ಮಾಡಿದ `ಆಪಾದನೆಗಾಗಿ’ ಅವರನ್ನು ಕರ್ನಾಟಕ ಕಾಲೇಜಿನಿಂದ ಹೊರಹಾಕಲಾಗಿತ್ತು. ಒಂದು ವರ್ಷ ಕಾಲ ಭೂಗತ ಕಾರ್ಯಕರ್ತರಾಗಿ ಕೆಲಸ ಮಾಡಿ ತಮ್ಮ ಹೋರಾಟ ಎಂತಹದ್ದು ಎಂಬುದನ್ನು ಪಾಟೀಲ​ ಪುಟ್ಟಪ್ಪನವರು ತೋರಿಸಿಕೊಟ್ಟಿದ್ದರು. 1943 ರಲ್ಲಿ ಬೆಳಗಾವಿ ಕಾನೂನು ಕಾಲೇಜಿಗೆ ಸೇರ್ಪಡೆಯಾದ ಇವರು, 1945 ರಲ್ಲಿ ಕಾನೂನು ಪದವೀಧರರಾಗಿ ಹೊರ ಬಂದರು.1945 ರಲ್ಲಿ ನವೆಂಬರ್ 11 ರಂದು ವಿಜಾಪುರದ ಡಾ. ಬಿ. ಎಂ. ಪಾಟೀಲರ ಮಗಳು ಇಂದುಮತಿಯವರೊಡನೆ ಹೊಸ ಜೀವನಕ್ಕೆ ಕಾಲಿಟ್ಟರು. ಇವರಿಗೆ ಮಂಜುಳಾ, ಶೈಲಜಾ, ಅಶೋಕ ಎಂಬ ಮೂವರು ಮಕ್ಕಳಿದ್ದಾರೆ.

  ಪತ್ರಿಕೋದ್ಯಮದಲ್ಲಿ ಪಾಪು

1945 ರಲ್ಲಿ ಆರಂಭಕ್ಕೆ ಹೈಕೋರ್ಟಿನಲ್ಲಿ ವಕಾಲತ್ತು ಮಾಡುವ ಉದ್ದೇಶದಿಂದ ಮುಂಬಯಿಗೆ ಪ್ರಯಾಣ ಮಾಡಿದ ಪಾಟೀಲ್​ ಪುಟ್ಟಪ್ಪ, ಅಲ್ಲಿ ನಿವೃತ್ತ ಜಸ್ಟೀಸ್ ಜಹಗೀರದಾರರ ಛೇಂಬರಿನಲ್ಲಿ, ಡಾ. ತೆಂಡೂಲಕರರು ಸರದಾರ ಪಟೇಲರ ಭೇಟಿ ಮಾಡಿಸಿದರು. ಈ ವೇಳೆ ಅವರು, ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವುದನ್ನು ತಿಳಿಸಿದರು. ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳಬೇಕೆಂದು ಸರದಾರ ಪಟೇಲರು ಪುಟ್ಟಪ್ಪಗೆ ಹೇಳಿದರು. ಫ್ರೀಪ್ರೆಸ್ ಜರ್ನಲ್. ಬಾಂಬೈ ಕ್ರಾನಿಕಲ್ ಪತ್ರಿಕೆಗಳಿಗೆ ಕರ್ನಾಟಕ ಏಕೀಕರಣ ಕುರಿತು ಲೇಖನ ಬರೆದರು. ಕೆ. ಸದಾನಂದರು `ಫ್ರೀ ಪ್ರೆಸ್’ ಸೇರುವಂತೆ ಒತ್ತಾಯಪಡಿಸಿದರು. ಕೆ. ಎಫ್. ಪಾಟೀಲ ಮೊದಲಾದ ಸ್ನೇಹಿತರು ಹುಬ್ಬಳ್ಳಿಯಲ್ಲಿ ತಾವು ಆರಂಭಿಸಬೇಕೆಂದ ಪತ್ರಿಕೆಗೆ ಸಂಪಾದಕರಾಗಬೇಕೆಂದು ಹೇಳಿದರು.

 ತಮ್ಮ ಹಿರಿಯರ ಮಾರ್ಗದರ್ಶನದಂತೆ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡ ಪಾಪು ಆರಂಭಿಸಿದ, ನಿರ್‌ವಹಿಸಿದ ಹಾಗೂ ಬೆಳೆಸಿದ ಪತ್ರಿಕೆಗಳು ಹಲವು. ವಿಶಾಲ ಕರ್ನಾಟಕ ಪತ್ರಿಕೆ ಸಂಪಾದಕರಾಗಿ ಕೆಲಸಮಾಡಿದ ಪುಟ್ಟಪ್ಪನವರು ಕ್ಯಾಲಿಫೋರ್ನಿಯಾಗೆ ಹೋಗಿ ಬಂದ ಮೇಲೆ ʼ ನವಯುಗ ʼ ಮಾಸಪತ್ರಿಕೆ ಸಂಪಾದಕರಾದರು. ಆಮೇಲೆ 1954ರಲ್ಲಿ ʼ ಪ್ರಪಂಚ ʼ ವಾರಪತ್ರಿಕೆಯನ್ನು ತಾವೇ ಹುಟ್ಟು ಹಾಕಿದರು. 1957ರಲ್ಲಿ ʼ ಸಂಗಮ ʼ ಎಂಬ ಕನ್ನಡ ಡೈಜೆಸ್ಟ್​​ ಪ್ರಾರಂಭಿಸಿದರು. 1959ರಲ್ಲಿ ʼ ವಿಶ್ವವಾಣಿ ʼ ದಿನಪತ್ರಿಕೆಯನ್ನೂ,  ʼ ಮನೋರಮಾ ʼ ಎಂಬ ಚಲನಚಿತ್ರ ಮಾಸಿಕವನ್ನೂ ಆರಂಭಿಸಿ ಪತ್ರಿಕಾ ರಂಗದಲ್ಲಿ ಛಾಪು ಮೂಡಿಸಿದರು. 1936ರಲ್ಲಿ ಹಾವೇರಿಯಲ್ಲಿ ಓದುತ್ತಿರುವಾಗ `ನಮ್ಮ ನಾಡು’ ಕೈ ಬರಹದ ಪತ್ರಿಕೆಯ ಪ್ರಕಟಣೆ ಮಾಡಿದ್ದರು. ವಾರ ಪತ್ರಿಕೆ `ವಿಶಾಲ ಕರ್ನಾಟಕ’ದ ಸಂಪಾದಕತ್ವ ವಹಿಸಿದ ಇವರು ಇದೇ ಪತ್ರಿಕೆಯನ್ನು ಅಗಸ್ಟ್ 9, 1947 ರಂದು ದಿನಪತ್ರಿಕೆಯನ್ನಾಗಿಸಿದರು.

 ಹತ್ತು ಹಲವು ಪತ್ರಿಕೆಗಳನ್ನು ಏಕಕಾಲಕ್ಕೆ ನಿರ್ವಹಿಸಿ , ಜನರಿಗೆ ಮಾಹಿತಿ ತಲುಪಿಸುವ ಪಾಪು ಅವರ ವೃತ್ತಿಪರತೆ ಇಂದಿನ ಸಂವಹನಕ್ರಾಂತಿಯ ಯುಗದಲ್ಲಿ ಅಚ್ಚರಿದಾಯಕ ಎನಿಸಬಹುದು. ಒಬ್ಬ ವ್ಯಕ್ತಿಯಿಂದ ಇಷ್ಟೆಲ್ಲಾ ಸಾಧ್ಯವೇ ಎನಿಸಬಹುದು. ಆದರೆ ಪಾಪು ಅವರ ವೃತ್ತಿನಿಷ್ಠೆ ಮತ್ತು ಸಮಾಜಮುಖಿ ಧೋರಣೆ ಈ ಪ್ರಯತ್ನಗಳ ಹಿಂದಿನ ಶಕ್ತಿಯಾಗಿತ್ತು ಎನ್ನುವುದನ್ನು ಯುವ ಸಮುದಾಯ ಅರ್ಥಮಾಡಿಕೊಳ್ಳಬೇಕಿದೆ.

 ಶೈಕ್ಷಣಿಕ ಹಾದಿಯಲ್ಲಿ ಪಾಪು

  ಹೀಗೆ ಪತ್ರಿಕೆಗಳನ್ನು ಹುಟ್ಟು ಹಾಕುತ್ತಲೂ, ನಡೆಸುತ್ತಲೂ ಪತ್ರಿಕೋದ್ಯಮದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡರು. ಇದರ ಜೊತೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ, ಅನಂತರ ಕನ್ನಡಪ್ರಭ ಪತ್ರಿಕೆಯಲ್ಲಿ ಅಂಕಣಕಾರರಾಗಿ ಲೇಖನಗಳನ್ನು ಪ್ರಕಟಿಸಿದರು. ಹೀಗೆ ಪತ್ರಿಕಾ ಸಂಪಾದಕರಾಗಿ ನಾಡಿನ ಮನೆಮಾತಾದವರು ಪಾಪು. ಇದಲ್ಲದೆ ಇತರ ಸಂಸ್ಥೆಗಳಲ್ಲಿ ಸಾರ್ವಜನಿಕ ರಂಗಗಳಲ್ಲಿ ದುಡಿದು ಕನ್ನಡ ಕಟ್ಟುವ ಕೆಲಸವನ್ನು ಇವರು ನಿರಂತರವಾಗಿ ಮಾಡಿಕೊಂಡು ಬಂದಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ಪಾಟೀಲರು ದುಡಿದಿದ್ದರು.

 ರಾಷ್ಟ್ರಮಟ್ಟದಲ್ಲೂ ತಮ್ಮ ರಾಜಕೀಯ-ಸಾಮಾಜಿಕ ಸೇವೆ ಸಲ್ಲಿಸಿದ ಪಾಪು , ರಾಜ್ಯ ಸಭೆಯ ಸದಸ್ಯರಾಗಿ (1962-71) ಧಾರವಾಡ ಮತ್ತು ಕರ್ನಾಟಕದ ಸಮಸ್ಯೆಗಳಿಗೆ ಧ್ವನಿಯಾಗಿದ್ದರು. ಕರ್ನಾಟಕದ ಪ್ರಥಮ ಹಾಗೂ ಪ್ರಮುಖ ಸಾಂಸ್ಕೃತಿಕ ಸಂಸ್ಥೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ 1967 ರಲ್ಲಿ ಆಯ್ಕೆಯಾದವರು ಮತ್ತೆ ಹಿಂದಿರುಗಿ ನೋಡಿಲ್ಲ. ವಿದೇಶ ಯಾತ್ರೆ: ಪಶ್ಚಿಮ ಜರ್ಮನಿ, ಬ್ರಿಟಿಷ್ ಸರಕಾರಗಳ ಆಮಂತ್ರಣದ ಮೇರೆಗೆ 1965 ರಲ್ಲಿ ಆ ದೇಶಗಳಿಗೆ ಸಂದರ್ಶನ ಮಾಡಿದ್ದರು. 1988 ರಲ್ಲಿ ಸೋವಿಯತ್ ಸರಕಾರದ ಆಮಂತ್ರಣದ ಮೇರೆಗೆ ರಷ್ಯಾಕ್ಕೂ ಭೇಟಿ ನೀಡಿದ್ದರು.

Bagalakote : ಫೃಥ್ವಿರಾಜ ಅಂಬಿಗೇರ ಕಳೆದ 76 ದಿನಗಳ ಹಿಂದೆ ಬಾಗಲಕೋಟೆ ನಗರದಿಂದ ಸೈಕಲ್ ಯಾತ್ರೆ  #pratidhvani

 ಗೋಕಾಕ ವರದಿ ಜಾರಿಗೆ ಬರಲು ನಡೆದ ಚಳವಳಿಯ ನೇತೃತ್ವವನ್ನು ಪಾಟೀಲರೇ ವಹಿಸಿದ್ದರು. ಕರ್ನಾಟಕ ಸರಕಾರ ಕನ್ನಡ ಕಾವಲು ಮತ್ತು ಗಡಿ ಸಲಹಾ ಸಮಿತಿ ರಚಿಸಿ ಇವರನ್ನು ಅದಕ್ಕೆ ಅಧ್ಯಕ್ಷರನ್ನಾಗಿ ಮಾಡಿದಾಗ ಕನ್ನಡ ಅನುಷ್ಠಾನಕ್ಕೆ ಇವರು ಹೆಚ್ಚಿನ ಶ್ರಮ ವಹಿಸಿದ್ದರು. 1992ರಲ್ಲಿ ಅಖಿಲ ಕರ್ನಾಟಕ ಹೋರಾಟ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿದ್ದರು. ಹೀಗೆ ನಾನಾ ರಂಗಗಳಲ್ಲಿ ಸೇವೆ ಸಲ್ಲಿಸಿರುವ ಇವರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.

 ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ 1994ರಲ್ಲಿ ಡಿ’ಲಿಟ್’ ಪದವಿ ,ಕರ್ನಾಟಕ ಸರಕಾರ ನೀಡುವ ಟಿ.ಎಸ್.ಆರ್.ಪ್ರಶಸ್ತಿ,  1976ರಲ್ಲಿ ರಾಜ್ಯ ಪ್ರಶಸ್ತಿ, 1990 ವಿಶ್ವೇಶ್ವರಯ್ಯ ಭಾರತ ಜ್ಯೋತಿ ಪ್ರಶಸ್ತಿ, 1999 ರಲ್ಲಿ ಹುಬ್ಬಳ್ಳಿಯ ತಿಲಕ್ ಮೊಹರೆ ಪ್ರಶಸ್ತಿ, 1996ರಲ್ಲಿ ಹಂಪಿ ವಿಶ್ವವಿದ್ಯಾಲಯದ ನಾಡೋಜ ಗೌರವ, 2001 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, 2002 ರಲ್ಲಿ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ, ‘ಕನ್ನಡ ಸಾಹಿತ್ಯ ಪರಿಷತ್ತಿನ ‘ನೃಪತುಂಗ’ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಬೆಳಗಾವಿಯಲ್ಲಿ ನಡೆದ 70ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಗೌರವ 2003ರಲ್ಲಿ ದೊರಕಿತ್ತು.

 ಮುಂದುವರೆಯುತ್ತದೆ ,,,

Tags: haveri patil puttappanadoja patil puttappapatil puttappapatil puttappa agepatil puttappa deadpatil puttappa deathpatil puttappa death newspatil puttappa expirespatil puttappa in no morepatil puttappa kannadapatil puttappa newspatil puttappa no morepatil puttappa on kodagupatil puttappa opposedpatil puttappa quotespatil puttappa samadhipatil puttappa shortspatil puttappa speechpatil puttappa thoughtspatil puttappa tv9 newspatila puttappa papu
Previous Post

Sharan Prakash Patil: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನೀತಿ 2025–2032ಕ್ಕೆ ಸಂಪುಟ ಅನುಮೋದನೆ

Next Post

ಟಗರು ಕಾಳಗದ ಹಿನ್ನೆಲೆ ʻಜಾಕಿʼ ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್

Related Posts

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !
ಇತರೆ / Others

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !

by ಪ್ರತಿಧ್ವನಿ
September 30, 2025
0

ಇಂದು ನಗರದಲ್ಲಿನ ಚಂದ್ರ ಲೇಔಟ್‌ನಲ್ಲಿ Sunya IAS ನೂತನ ಸೆಂಟರ್‌ ಉದ್ಘಾಟನೆಗೊಂಡಿತು. ಚಂದ್ರ ಬಡಾವಣೆಯಲ್ಲಿ Civil Services Training Institutions ಗಳಿಗೆ ಹೆಸರುವಾಸಿಯಾಗಿದೆ. ರಾಜ್ಯ ಬೇರೆ ಬೇರೆ...

Read moreDetails
UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !

UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !

September 30, 2025
ಹೆಚ್ಚುವರಿ ಸೌಕರ್ಯಕ್ಕೆ ನಟ ದರ್ಶನ್‌ ಪರ ವಕೀಲರು ಕೋರ್ಟ್‌ ನಲ್ಲಿ ವಾದ !

ಹೆಚ್ಚುವರಿ ಸೌಕರ್ಯಕ್ಕೆ ನಟ ದರ್ಶನ್‌ ಪರ ವಕೀಲರು ಕೋರ್ಟ್‌ ನಲ್ಲಿ ವಾದ !

September 30, 2025
ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ,  ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !

ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ, ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !

September 30, 2025
Asia Cup : ಭಾರತ-ಪಾಕ್‌ ನಡುವೆ ಒಳ ಒಪ್ಪಂದವಿತ್ತೆ!?

Asia Cup : ಭಾರತ-ಪಾಕ್‌ ನಡುವೆ ಒಳ ಒಪ್ಪಂದವಿತ್ತೆ!?

September 30, 2025
Next Post

ಟಗರು ಕಾಳಗದ ಹಿನ್ನೆಲೆ ʻಜಾಕಿʼ ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್

Recent News

UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !
Top Story

UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !

by ಪ್ರತಿಧ್ವನಿ
September 30, 2025
ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ,  ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !
Top Story

ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ, ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !

by ಪ್ರತಿಧ್ವನಿ
September 30, 2025
ಪ್ರಸಿದ್ದ ಹಾಸ್ಯ ಕಲಾವಿದ, ರಂಗ ನಿರ್ದೇಶಕ ಯಶವಂತ ಸರದೇಶಪಾಂಡೆ ವಿಧಿವಶ!
Top Story

ಪ್ರಸಿದ್ದ ಹಾಸ್ಯ ಕಲಾವಿದ, ರಂಗ ನಿರ್ದೇಶಕ ಯಶವಂತ ಸರದೇಶಪಾಂಡೆ ವಿಧಿವಶ!

by ಪ್ರತಿಧ್ವನಿ
September 29, 2025
ಕಲ್ಯಾಣ ಕರ್ನಾಟಕದಲ್ಲಿ ನೆರೆ ಪರಿಹಾರ ಕಾರ್ಯ ತುರ್ತಾಗಿ ಕೈಗೊಳ್ಳಲು ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಆಗ್ರಹ
Top Story

ಕಲ್ಯಾಣ ಕರ್ನಾಟಕದಲ್ಲಿ ನೆರೆ ಪರಿಹಾರ ಕಾರ್ಯ ತುರ್ತಾಗಿ ಕೈಗೊಳ್ಳಲು ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಆಗ್ರಹ

by ಪ್ರತಿಧ್ವನಿ
September 28, 2025
ನಟ ವಿಜಯ್‌ : ಕಾಲ್ತುಳಿತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ, ಪರಿಹಾರದ ವಾಗ್ದಾನ
Top Story

ನಟ ವಿಜಯ್‌ : ಕಾಲ್ತುಳಿತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ, ಪರಿಹಾರದ ವಾಗ್ದಾನ

by ಪ್ರತಿಧ್ವನಿ
September 29, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !

September 30, 2025
NAASH Studio Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !

NAASH Studio Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !

September 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada