ನ್ಯೂ ಇಯರ್‌ಗೆ ಈಗಾಗಲೇ ಸಿಲಿಕಾನ್ ಸಿಟಿ ಸಿಂಗಾರಗೊಂಡಿದೆ. ಮಧುಮಗಳಂತೆ ಬ್ರಿಗೇಡ್ ರಸ್ತೆ ಸಿಂಗಾರಗೊಂಡಿದೆ. ನಿನ್ನೆ ರಾತ್ರಿಯೇ ಕಲರ್ ಪುಲ್ ಲೈಟಿಂಗ್ಸ್‌ನಿಂದ ಜಗಮಗಿಸುತ್ತಿದೆ ಬ್ರಿಗೇಡ್ ರಸ್ತೆ. ನ್ಯೂ ಇಯರ್ ಸೆಲೆಬ್ರೆಷನ್ ಸಲುವಾಗಿ ಪೊಲೀಸ್ ಇಲಾಖೆ ತೀವ್ರ ನಿಗಾ ವಹಿಸಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ನಲ್ಲಿ ಪರಿಶೀಲನೆ ನಡೆಸಿದ್ದಾರೆರ ಕಮೀಷನರ್ ದಯಾನಂದ್. ಭದ್ರತಾ ವ್ಯವಸ್ಥೆ ಹಾಗು ಸಿಸಿಟಿವಿಗಳ ಅಳವಡಿಕೆ ಪರಿಶೀಲನೆ ಮಾಡಿದ್ದಾರೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ನಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಸಿಸಿಟಿವಿಗಳ ಮೂಲಕ ಹದ್ದಿನ ಕಣ್ಣು ಇಡಲಾಗಿದೆ.
ಹೊಸ ವರ್ಷ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಮೋಜು ಮಸ್ತಿಗೆ ಬ್ರೇಕ್ ಹಾಕಲಾಗಿದೆ. ಇಂದು ಸಂಜೆ 7 ಗಂಟೆಯ ನಂತರ ಚಾಮುಂಡಿ ಬೆಟ್ಟಕ್ಕೆ ನಿರ್ಬಂಧ ಹೇರಲಾಗಿದೆ. ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದು, 7 ಗಂಟೆಗೂ ಮೊದಲೇ ಹೋಗುವ ಭಕ್ತರು ರಾತ್ರಿ 9 ಗಂಟೆಯ ಒಳಗಾಗಿ ವಾಪಸ್ ಆಗುವಂತೆ ಸೂಚನೆ ಕೊಡಲಾಗಿದೆ. ತಾವರೆಕಟ್ಟೆ ಗೇಟ್ ಮೂಲಕ ವಾಪಸ್ ಆಗುವಂತೆ ಸೂಚನೆ ಕೊಡಲಾಗಿದೆ. ಸಂಜೆ 7 ಗಂಟೆಗೆ ಬೆಟ್ಟಕ್ಕೆ ಹೋಗುವ ಎಲ್ಲಾ ಗೇಟ್‌ಗಳು ಬಂದ್ ಆಗಲಿದೆ. ಬೆಟ್ಟದ ನಿವಾಸಿಗಳನ್ನು ಹೊರತು ಪಡಿಸಿ ಉಳಿದವರಿಗೆ ನಿರ್ಭಂದ ಅನ್ವಯ. ಜನವರಿ 1ರಂದು ಬೆಳಗ್ಗೆ ಬೆಟ್ಟಕ್ಕೆ ಎಂದಿನಂತೆ ತೆರಳಬಹುದು.
ತುಮಕೂರಿನಲ್ಲಿ ಹೊಸ ವರ್ಷ ಆಚರಣೆಯ ಮೋಜು ಮಸ್ತಿಗೆ ಬ್ರೇಕ್ ಹಾಕಲಾಗಿದೆ. ದೇವರಾಯನ ದುರ್ಗ ಅರಣ್ಯ ಪ್ರದೇಶ, ನಾಮದ ಚಿಲುಮೆ, ಬಸದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಇವತ್ತು ಬೆಳಗ್ಗೆ 8 ಗಂಟೆಯಿಂದ ಜನವರಿ 2ರ ಬೆಳಗ್ಗೆ 8 ಗಂಟೆವರೆಗೂ ನಿರ್ಬಂಧ ಹೇರಲಾಗಿದೆ. ಎರಡು ದಿನಗಳ ಕಾಲ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದು, ದೇವರಾಯದುರ್ಗ, ನಾಮದ ಚಿಲುಮೆ ಸುರಕ್ಷಿತ ಅರಣ್ಯ ಪ್ರದೇಶ ಆಗಿರುವ ಹಿನ್ನೆಲೆಯಲ್ಲಿ ಪ್ರವೇಶ ನಿರ್ಬಂಧ ಮಾಡಲಾಗಿದೆ. ಈ ಪ್ರವಾಸಿ ತಾಣಗಳಲ್ಲಿ ಪೊಲೀಸ್ ಕಣ್ಗಾವಲು ಹಾಕಿದ್ದು, ಹೊಸ ವರ್ಷಾಚರಣೆ ವೇಳೆ ಮದ್ಯಸೇವಿಸಿ ಬೈಕ್, ಕಾರು ಚಾಲನೆ ಮಾಡಿದ್ರೆ ದಂಡ ವಿಧಿಸಲಾಗ್ತಿದೆ. ವೀಲಿಂಗ್, ಡ್ರಾಗ್ ರೇಸ್ ಮಾಡಿದ್ರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ. ಖಾಸಗಿ ಫಾರಂ ಹೌಸ್‌ಗಳಲ್ಲಿ ಅನುಮತಿ ಪಡೆಯದೆ ರೇವ್ ಪಾರ್ಟಿ ಹಾಗೂ ಮೋಜುಮಸ್ತಿ ಕಾರ್ಯಕ್ರಮ ಆಯೋಜಿಸುವಂತಿಲ್ಲ ಎಂದು ಹೊಸ ವರ್ಷಾಚರಣೆಯ ಗೈಡ್ ಲೈನ್ ಹೊರಡಿಸಿದೆ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ..
ಹೊಸ ವರ್ಷ 2025ರ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಕೋಲಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೂಚನೆ ಹೊರಡಿಸಿದ್ದು, ಅನುಮತಿ ಇಲ್ಲದೆ ತೋಟದ ಮನೆ ಮತ್ತು ಫಾರ್ಮ್ ಹೌಸ್‌ಗಳಲ್ಲಿ ಸಂಭ್ರಮಾಚರಣೆ ನಿಷೇಧ ಮಾಡಲಾಗಿದೆ. ನೈತಿಕ ಪೊಲೀಸಗಿರಿ ಮತ್ತು ಅನುಚಿತ ವರ್ತನೆ ಮಾಡಿದ್ರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುವಂತಿಲ್ಲ, ಡಿದು ವಾಹನ ಚಲಾಯಿಸಬಾರದು. ಬೈಕ್ ವೀಲ್ಹಿಂಗ್ ಮಾಡಬಾರದು, ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ಸಂಭ್ರಮಾಚರಣೆಯ ಸಂದರ್ಭದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಬಾರದು ಎಂದು ಕಟ್ಟೆಚ್ಚರ ನೀಡಿದ್ದಾರೆ. ಹೊಸ ವರ್ಷ ಹಿನ್ನಲೆಯಲ್ಲಿ ಸುಮಾರು 500 ಪೊಲೀಸ್ ಸಿಬ್ಬಂದಿ ಮತ್ತು 200 ಗೃಹರಕ್ಷಕದಳ ಸಿಬ್ಬಂದಿ ಕಾರ್ಯ ನಿರ್ವಹಣೆ ಮಾಡಲಿದ್ದು, ರಾತ್ರಿಯಿಡಿ ಕೋಲಾರದಾದ್ಯಂತ ಪೊಲೀಸ್ ಸಿಬ್ಬಂದಿ ರೌಂಡ್ಸ್ ಮಾಡಲಿದ್ದಾರೆ.
ಜನವರಿ 1 ಹೊಸ ವರ್ಷಾಚರಣೆಗೆ ಹಿಂದುಪರ ಸಂಘಟನೆಗಳ ವಿರೋಧ ವ್ಯಕ್ತಪಡಿಸಿದ್ದು, ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರದಲ್ಲಿ ಪ್ರತಿಭಟನೆ ಮಾಡಿದ್ದಾರೆ. ವಿಶ್ವ ಹಿಂದುಪರಿಷತ್, ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದು, ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ಹೊರ ಹಾಕಿದ್ದಾರೆ. ಬ್ರಿಟೀಷರ ಹೊಸವರ್ಷ ಬೇಡ. ನಮ್ಮ ಹೊಸವರ್ಷ ಯುಗಾದಿ ಎಂದು ಘೋಷಣೆ ಮೊಳಗಿಸಿದ್ದಾರೆ..