• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

The Karnataka Result | ಬಿಜೆಪಿಯ ಮಿಥ್ಯೆಗಳಿಗೆ ತಡೆ ಹಾಕಿದ ಕರ್ನಾಟಕದ ಚುನಾವಣೆಗಳು

ನಾ ದಿವಾಕರ by ನಾ ದಿವಾಕರ
May 21, 2023
in ಅಂಕಣ
0
The Karnataka Result | ಬಿಜೆಪಿಯ ಮಿಥ್ಯೆಗಳಿಗೆ ತಡೆ ಹಾಕಿದ ಕರ್ನಾಟಕದ ಚುನಾವಣೆಗಳು
Share on WhatsAppShare on FacebookShare on Telegram

ಮೂಲ : ಅಸೀಂ ಅಲಿ
The Karnataka result, a blow to the BJP’s ‘myth-making’
ದ ಹಿಂದೂ 15 ಮೇ 2023

ADVERTISEMENT


ಅನುವಾದ : ನಾ ದಿವಾಕರ

2023ರ ಕರ್ನಾಟಕದ ವಿಧಾನಸಭಾ ಚುನಾವಣೆಗಳನ್ನು ಕೇವಲ ರಾಜ್ಯ ಮಟ್ಟದ ಆಡಳಿತ ವಿರೋಧಿ ಅಲೆಯ ಚೌಕಟ್ಟಿನಲ್ಲೇ ವಿಶ್ಲೇಷಣೆ ಮಾಡುವುದು ಸಹಜವಾಗಿಯೇ ತೋರುತ್ತದೆ. ಆದರೆ ಆಡಳಿತ ವಿರೋಧಿ ಅಲೆಯ ನೆಲೆಯಲ್ಲೇ ಸ್ಥಳೀಯ ವಿಚಾರಗಳ ಚೌಕಟ್ಟಿನಲ್ಲಿ ಈ ಫಲಿತಾಂಶವನ್ನು ಸರಳೀಕರಿಸುವುದರಿಂದ ರಾಷ್ಟ್ರ ರಾಜಕೀಯವೂ ಹೇಗೆ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಪ್ರಭಾವಿತವಾಗುತ್ತದೆ ಎಂಬ ವಾಸ್ತವವನ್ನು ಮರೆಮಾಚಿದಂತಾಗುತ್ತದೆ. ಏಕೆಂದರೆ, 2014ರಿಂದಲೂ ರಾಷ್ಟ್ರ ರಾಜಕಾರಣದಲ್ಲಿ ತನ್ನ ಪಾರಮ್ಯವನ್ನು ಸಾಧಿಸಿರುವ ಬಿಜೆಪಿಯ ಮಹತ್ವಾಕಾಂಕ್ಷೆಯಲ್ಲಿ ಇರುವ ಹಲವಾರು ವೈರುಧ್ಯಗಳನ್ನು ಅರ್ಥಮಾಡಿಕೊಳ್ಳಲು ಈ ಚುನಾವಣೆಯ ಫಲಿತಾಂಶಗಳು ನೆರವಾಗುತ್ತದೆ.

ಬಿಜೆಪಿಯ ಹೀನಾಯ ಸೋಲಿಗೆ ಆಡಳಿತ ವಿರೋಧಿ ಅಲೆ ಕಾರಣ ಎನ್ನುವುದು ವಾಸ್ತವವೇ ಆದರೂ, ಅದನ್ನೂ ಮೀರಿದ ಕೆಲವು ಕಾರಣಗಳಿವೆ. ಮೂರು ದಶಕಗಳ ಅವಧಿಯಲ್ಲಿ ಬಿಜೆಪಿ ಯಡಿಯೂರಪ್ಪ ಅವರನ್ನು ಮುಂದಿಟ್ಟುಕೊಳ್ಳದೆ ಸ್ಪರ್ಧಿಸಿದ ಮೊದಲ ಚುನಾವಣೆ ಇದಾಗಿದೆ. ಚುನಾವಣಾ ಪ್ರಚಾರದಲ್ಲಿ ಹಾಗೂ ತದನಂತರ ಯಡಿಯೂರಪ್ಪ ಅವರನ್ನು ಒಳಗೊಳ್ಳಲಾಯಿತಾದರೂ, ಪ್ರಸ್ತುತ ಚುನಾವಣೆಗಳನ್ನು ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವಳಿಯ ಮೂಲಕವೇ ಎದುರಿಸಿದೆ. ಚುನಾವಣಾ ರಣತಂತ್ರವನ್ನು ಹೆಣೆಯುವುದು ಮತ್ತು ಪ್ರಚಾರದ ಮಾದರಿ ಈ ಬಾರಿ ಬಿಜೆಪಿಯಲ್ಲಿ ಕೇಂದ್ರೀಕರಣಕ್ಕೊಳಗಾಗಿದ್ದು, ಹಿಂದೆಂದೂ ಕಾಣದಂತೆ ರಾಷ್ಟ್ರೀಯ ನಾಯಕತ್ವವು ರಾಜ್ಯ ಘಟಕದ ಮೇಲೆ ತನ್ನ ನಿಯಂತ್ರಣವನ್ನು ಸಾಧಿಸಿತ್ತು. 2021ರಲ್ಲಿ ಯಡಿಯೂರಪ್ಪ ಪದಚ್ಯುತವಾದ ನಂತರದಲ್ಲಿ ಈ ಬೆಳವಣಿಗೆಯಾಗಿರುವುದನ್ನು ಗಮನಿಸಬೇಕಿದೆ.

ಬಿಜೆಪಿ ಸೃಷ್ಟಿಸಿದ ಮಿಥ್ಯೆಗಳು

2014ರ ನಂತರದಲ್ಲಿ ಆಡಳಿತಾರೂಢ ಪಕ್ಷದ ರಾಷ್ಟ್ರೀಯ ಆಧಿಪತ್ಯವನ್ನು ಭದ್ರಪಡಿಸುವ ಸಲುವಾಗಿಯೇ ಮೋದಿ-ಶಾ ನೇತೃತ್ವದ ಬಿಜೆಪಿ ಹಲವಾರು ಮಿಥ್ಯೆಗಳನ್ನು ಸೃಷ್ಟಿಸುತ್ತಾ ಬಂದಿರುವುದನ್ನು ಗಮನಿಸಬೇಕಿದೆ. ಮಿಥ್ಯೆ ಎಂಬ ಪದವನ್ನು ಬಳಸುವಾಗ ಫ್ರಾನ್ಸ್‌ನ ಇತಿಹಾಸಕಾರ ಜಾರ್ಜಸ್‌ ಸೊರೆಲ್‌ ಅವರು ಮಿಥ್ಯೆ ಎನ್ನುವುದನ್ನು ಹೇಗೆ ನಿರ್ವಚಿಸಿದ್ದಾರೆ ಎಂದು ನೋಡುವುದು ಒಳಿತು. “ ರಾಜಕೀಯ ಒಮ್ಮತಕ್ಕೆ ಅನುಕೂಲ ಮಾಡಿಕೊಡುವ ದೃಢವಾದ ಕಲ್ಪನೆಯನ್ನು” ಸೊರೆಲ್‌ ಮಿಥ್ಯೆ ಎಂದು ನಿರ್ವಚಿಸುತ್ತಾರೆ. ಇಲ್ಲಿ ಸೃಷ್ಟಿಸಲಾದ ಮಿಥ್ಯೆಯ ಸತ್ಯಾಂಶ-ಮೌಲ್ಯ ಮುಖ್ಯವಾಗುವುದಿಲ್ಲ. ಬದಲಾಗಿ ಆಧಿಪತ್ಯದ ಶಕ್ತಿ ಸಂಚಯದಲ್ಲಿ ಈ ಮಿಥ್ಯೆಯು ಎಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿರುತ್ತದೆ ಎನ್ನುವುದು ಮುಖ್ಯವಾಗುತ್ತದೆ.

ಕಳೆದ ಒಂದು ದಶಕದಲ್ಲಿ ಬಿಜೆಪಿ ತನ್ನ ರಾಜಕೀಯ ವಿಸ್ತರಣೆಗಾಗಿ ಅಥವಾ ಅದರ ನ್ಯಾಯಸಮ್ಮತತೆಗಾಗಿ ಎರಡು ಮಿಥ್ಯೆಗಳನ್ನು ಪ್ರಧಾನವಾಗಿ ಆಧರಿಸಿದೆ. ಮೊದಲನೆಯದು ಸೈದ್ಧಾಂತಿಕ ಮಿಥ್ಯೆ, ಅಂದರೆ ತಳಮಟ್ಟದಲ್ಲಿ ಕಾಣಬಹುದಾದ ಹಿಂದುತ್ವದ ನೆಲೆಗಳು. ಎರಡನೆಯದು ಆಳ್ವಿಕೆಯ ಮಿಥ್ಯೆ, ಅಂದರೆ ಡಬಲ್‌ ಇಂಜಿನ್‌ ಸರ್ಕಾರಗಳು. ಈ ಮಿಥ್ಯೆಗಳ ಮುಖಾಂತರವೇ ಪಕ್ಷವು ರಾಚನಿಕ ದೌರ್ಬಲ್ಯಗಳನ್ನು ಹಿಮ್ಮೆಟ್ಟಿಸಿ ಮುನ್ನಡೆಸಲು ಸಾಧ್ಯವಾಗಿದ್ದು, ತನ್ನದೇ ಆದ ಸ್ವಯಂ ಘೋಷಿತ ಅಜೇಯತ್ವದ ಪ್ರಭಾವಳಿಯನ್ನು ಸೃಷ್ಟಿಸುವುದರಲ್ಲಿ ಯಶಸ್ವಿಯಾಗಿದೆ. ಕರ್ನಾಟಕದ ಚುನಾವಣಾ ಫಲಿತಾಂಶಗಳು ಈ ಮಿಥ್ಯೆಗಳ ಬುನಾದಿಯನ್ನೇ ಅಲುಗಾಡಿಸುವಂತಿದ್ದು, ರಾಷ್ಟ್ರ ಮಟ್ಟದಲ್ಲೂ ತನ್ನದೇ ಆದ ಛಾಪು ಮೂಡಿಸುತ್ತದೆ.

ಮೊದಲನೆಯದಾಗಿ ತಳಮಟ್ಟದ ಹಿಂದುತ್ವವನ್ನು (Subaltern Hindutva) ಪರಾಮರ್ಶಿಸಬಹುದು. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ತಳಮಟ್ಟದ ಸಮುದಾಯಗಳಾದ ದಲಿತರು, ಆದಿವಾಸಿಗಳು, ಪ್ರಾಬಲ್ಯವಿಲ್ಲದ ಬಡ ಹಿಂದುಳಿದ ವರ್ಗಗಳ ನಡುವೆ ತನ್ನ ಅಸ್ತಿತ್ವವನ್ನು ಕಂಡುಕೊಂಡಿದ್ದು, ಚುನಾವಣಾ ರಾಜಕಾರಣದಲ್ಲಿ ಈ ಸಮುದಾಯಗಳ ನಡುವೆ ವಿಶಾಲವಾಗಿ ಹರಡಿಕೊಂಡಿದೆ. ಆದರೆ ಎರಡು ರಾಷ್ಟ್ರ ಮಟ್ಟದ ಮೋದಿ ಅಲೆಯನ್ನು ಹೊರತುಪಡಿಸಿದರೆ, ಎಲ್ಲಿಯೂ ಸಹ ಈ ತಳಸಮುದಾಯಗಳು ವಿಶಾಲ ಹಿಂದೂ ಮೈತ್ರಿಕೂಟಕ್ಕೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿರುವುದನ್ನು ಕಾಣಲಾಗುವುದಿಲ್ಲ. ಹಿಂದುತ್ವ ರಾಜಕಾರಣಕ್ಕೆ ತಳಸಮುದಾಯಗಳ ಬೆಂಬಲ ವ್ಯಕ್ತವಾಗಲು ಇರುವ ಸೈದ್ಧಾಂತಿಕ ತಳಹದಿ ಇನ್ನೂ ಅಸ್ಪಷ್ಟವಾಗಿದ್ದು, ಈ ಸಮುದಾಯಗಳು ವಿಶಾಲ ಹಿಂದೂ ಮೈತ್ರಿಕೂಟಕ್ಕೆ ಕೊನೆಯ ಕ್ಷಣದಲ್ಲಿ ಸೇರ್ಪಡೆಯಾಗುವ ಅಥವಾ ಹೊರನಡೆಯುವುದರಲ್ಲಿ ಮೊದಲಿಗರಾಗುವ ಸಮೂಹಗಳಂತೆಯೇ ಕಾಣುತ್ತವೆ. ಮಧ್ಯ ಪ್ರದೇಶ, ಜಾರ್ಖಂಡ್‌ ಮತ್ತು ಛತ್ತಿಸ್‌ಘಡ್‌ ರಾಜ್ಯಗಳ ಚುನಾವಣೆಗಳಲ್ಲಿ ಕೊನೆಯ ಕ್ಷಣದಲ್ಲಿ ಸೇರ್ಪಡೆಯಾಗುವ ತಳಸಮುದಾಯಗಳ ಪ್ರವೃತ್ತಿಯು ಬಿಜೆಪಿಗೆ ಮಾರಕವಾಗಿ ಪರಿಣಮಿಸಿದ್ದರೆ, ತೆಲಂಗಾಣ, ಒಡಿಷಾ ಮತ್ತು ಮಹಾರಾಷ್ಟ್ರದ ಚುನಾವಣೆಗಳಲ್ಲಿ ಈ ರೀತಿ ಮೊದಲೇ ನಿರ್ಗಮಿಸುವ ತಳಸಮುದಾಯಗಳು ಬಿಜೆಪಿಯ ವಿಸ್ತರಣೆಗೆ ತೊಡಕಾಗಿ ಪರಿಣಮಿಸಿದೆ.

ಬಿಜೆಪಿಯ ರಾಷ್ಟ್ರೀಯ ನಾಯಕತ್ವವು, ರಾಜ್ಯ ಘಟಕದಲ್ಲಿರುವ ಹಿಂದುತ್ವ ಪರ ಬಣದೊಂದಿಗೇ ಹಲವು ವರ್ಷಗಳಿಂದ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳುತ್ತಿದ್ದು ಪಕ್ಷದ ರಾಜ್ಯ ಘಟಕವನ್ನು ಲಿಂಗಾಯತ ನಿಯಂತ್ರಣದಿಂದ ಹೊರತಂದು, ಮೂಲಭೂತವಾದಿ ಹಿಂದುತ್ವದ ನೆಲೆಯಲ್ಲಿ ತಳಸಮುದಾಯಗಳನ್ನು ಒಳಗೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ರೂಪಿಸಿದೆ. ಈ ಕಾರ್ಯತಂತ್ರದಲ್ಲಿ ಕಾಣಲಾಗುವ ಪ್ರಮುಖ ಮಿತಿ ಎಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್)‌ ತಳಮಟ್ಟದ ಪ್ರಭಾವ ಕರ್ನಾಟಕದ ಕರಾವಳಿ ಪ್ರದೇಶವನ್ನು ಹೊರತುಪಡಿಸಿ ಉಳಿದೆಡೆಗಳಲ್ಲಿ ವ್ಯಾಪಿಸಲು ಸಾಧ್ಯವಾಗಿಲ್ಲ. ಇಲ್ಲಿ ಕೆಲವೊಮ್ಮೆ ಕೋಮುವಾದದ ವಿಚಾರಗಳು ಚುನಾವಣೆಗಳ ದೃಷ್ಟಿಯಿಂದ ಎಲ್ಲಿ ಪ್ರಧಾನವಾಗಿ ಕಂಡಿದೆಯೋ ಅಲ್ಲಿ ಆರೆಸ್ಸೆಸ್‌ ತನ್ನ ಪ್ರಭಾವವನ್ನು ವಿಸ್ತರಿಸಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ, ಹಲಾಲ್, ಹಿಜಾಬ್ ಮತ್ತು ಅಜಾನ್ (ನಂತರ ‘ಭಯೋತ್ಪಾದನೆ’ ಮತ್ತು ‘ಭಜರಂಗಬಲಿ’) ಮುಂತಾದ ಕೋಮುವಾದಿ ವಿಚಾರಗಳಿಂದ ವಾತಾವರಣವನ್ನು ಬದಲಿಸಿ ಸ್ವಯಂಪ್ರೇರಿತವಾಗಿ ರೂಪುಗೊಂಡ ಹಿಂದೂ ಐಕ್ಯತೆಯನ್ನು ಸಾಧಿಸುವುದೇ ಬಿಜೆಪಿಯ ಕಾರ್ಯತಂತ್ರವಾಗಿತ್ತು ಎಂದು ನಿಖರವಾಗಿ ಹೇಳುವುದು ಕಷ್ಟವಾದೀತು.

ಆದರೆ ವಾಸ್ತವದಲ್ಲಿ ಬಿಜೆಪಿಯ ಮೂಲಭೂತವಾದಿ ಹಿಂದುತ್ವ ಪ್ರಚಾರಾಂದೋಲನವು, ಎರಡು ವರ್ಷಗಳ ಕಾಲ ನಿರಂತರವಾಗಿ ನಡೆದರೂ, ಕರಾವಳಿ ಕರ್ನಾಟಕದ 20 ಕ್ಷೇತ್ರಗಳಿಂದಾಚೆಗೆ ಯಾವುದೇ ಪ್ರಭಾವ ಬೀರದಿರುವುದು ಮಹತ್ವದ ಅಂಶವಾಗಿ ಕಾಣುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಕಾಂಗ್ರೆಸ್‌ ಪಕ್ಷವು ಬಿಜೆಪಿ ವಿರೋಧಿ ನೆಲೆಯಲ್ಲಿ ತಳಸಮುದಾಯಗಳ ಐಕ್ಯತೆಯನ್ನು ಸಾಧಿಸುವುದೇ ಅಲ್ಲದೆ, ಪ್ರಗತಿಪರ ಎನ್ನಬಹುದಾದ ಸಾಮಾಜಿಕ-ಆರ್ಥಿಕ ಕಾರ್ಯಸೂಚಿಯನ್ನು ಮುಂದಿಟ್ಟುಕೊಂಡು ಚುನಾವಣೆಗಳಲ್ಲಿ ಸ್ಪಷ್ಟ ಬಹುಮತವನ್ನು ಗಳಿಸಲು ಯಶಸ್ವಿಯಾಗಿದೆ. ಆಕ್ಸಿಸ್‌ ಮೈ ಸಮೀಕ್ಷೆಯ ಅನುಸಾರ ದಲಿತ ಮತದಾರರ ಶೇ 38ರಷ್ಟು, ಆದಿವಾಸಿಗಳ ಶೇ 11, ಕುರುಬ ಸಮುದಾಯದ ಶೇ 39 ಹಾಗೂ ಮುಸಲ್ಮಾನ ಮತದಾರರ ಶೇ 86ರಷ್ಟು ಹೆಚ್ಚುವರಿ ಮತಗಳನ್ನು ಬಿಜೆಪಿಯ ವಿರುದ್ಧ ಕಾಂಗ್ರೆಸ್‌ ಪಡೆದುಕೊಂಡಿದೆ.

ಮತ್ತೊಂದು ಮಿಥ್ಯೆ ಎಂದರೆ ಡಬಲ್‌ ಇಂಜಿನ್‌ ಸರ್ಕಾರ ಎನ್ನುವ ಆಳ್ವಿಕೆಯ ಮಿಥ್ಯೆ. ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು, ಅಸಮರ್ಥ ಸ್ಥಳೀಯ ನಾಯಕರ ರಕ್ಷಕನಂತೆ ಬಿಂಬಿಸಲಾಗಿತ್ತು. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಏಕೆ ಕೊನೆಯ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತಕ್ಷೇಪ ಅಥವಾ ಪ್ರವೇಶವನ್ನು ಬಯಸುತ್ತವೆ ಎನ್ನುವ ರಾಚನಿಕ ಕಾರಣಗಳನ್ನು ಇನ್ನೂ ಶೋಧಿಸಬೇಕಿದೆ. ಈ ಮದ್ಯಸ್ತಿಕೆಯ ರಾಜಕಾರಣವು ಒಂದು ಹಂತದಲ್ಲಿ ಆಯ್ಕೆಯಾಗುವ ಮುಖ್ಯಮಂತ್ರಿಯನ್ನು ಬದಲಿಸುವ ಮಟ್ಟಕ್ಕೂ ಹೋಗುತ್ತದೆ. ಅಥವಾ ಪ್ರಧಾನಮಂತ್ರಿ ಮೋದಿ ಉದಯೋನ್ಮುಖ ಮುಖ್ಯಮಂತ್ರಿಯನ್ನು ರಕ್ಷಿಸುವ ಸಲುವಾಗಿ ಸುದೀರ್ಘವಾದ, ವೈಯುಕ್ತಿಕ ನೆಲೆಗಟ್ಟಿನ ಪ್ರಚಾರಾಂದೋಲನವನ್ನು ಕೈಗೊಳ್ಳುವುದನ್ನೂ ಗುರುತಿಸಬಹುದು. ಪ್ರಾಸಂಗಿಕವಾಗಿ ಕರ್ನಾಟಕದಲ್ಲಿ ಈ ಎರಡೂ ಕಾರ್ಯತಂತ್ರಗಳನ್ನು ಗುರುತಿಸಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಇದೇ ರೀತಿಯ ಮಧ್ಯಸ್ತಿಕೆಯ ಪ್ರಹಸನಗಳನ್ನು ಹಿಮಾಚಲ ಪ್ರದೇಶ, ಗುಜರಾತ್‌, ಉತ್ತರಖಂಡ, ಗೋವಾ, ತ್ರಿಪುರಾ ರಾಜ್ಯಗಳಲ್ಲಿ ಕಾಣಬಹುದಾಗಿತ್ತು. ಆದರೆ ಫಲಿತಾಂಶಗಳು ಒಂದೇ ಆಗಿರಲಿಲ್ಲ.

ರಾಜಕೀಯ ತಜ್ಞ ನೀಲಾಂಜನ್‌ ಸರ್ಕಾರ್‌ ಮತ್ತಿತರ ವಿದ್ವಾಂಸರು ಹೇಳುವಂತೆ ಮೂಲತಃ ಇಲ್ಲಿ ಗುರುತಿಸಬೇಕಾಗಿರುವುದು, ಜನಕಲ್ಯಾಣ ಯೋಜನೆಗಳ ಶ್ರೇಯವನ್ನು ಯಾರಿಗೆ ಆರೋಪಿಸಬೇಕು ಎನ್ನುವ ಪ್ರಶ್ನೆ. ತುಲನಾತ್ಮಕವಾಗಿ ಒಂದೆಡೆ ನರೇಂದ್ರ ಮೋದಿಯ ಎತ್ತರದ ವ್ಯಕ್ತಿತ್ವವಾದರೆ ಮತ್ತೊಂದೆಡೆ ದುರ್ಬಲವಾದ ರಾಜ್ಯ ನಾಯಕರು ಕಂಡುಬರುತ್ತಾರೆ. ಕರ್ನಾಟಕದ ಮಟ್ಟಿಗೆ ನೋಡಿದಾಗ ಬಸವರಾಜ ಬೊಮ್ಮಾಯಿ ಅವರ ಆಳ್ವಿಕೆಯನ್ನು ಇದೇ ಚೌಕಟ್ಟಿನಲ್ಲಿ ವಿಶ್ಲೇಷಿಸಬಹುದು. ಸದಾ ಸಂಘರ್ಷದಲ್ಲಿರುವ ಗುಂಪುಗಳ ನಡುವೆಯೇ ಬೊಮ್ಮಾಯಿ ಸರ್ಕಾರದ ಡಬ್ಬಲ್‌ ಇಂಜಿನ್‌ ಸರ್ಕಾರ ಚಲಾವಣೆಯಲ್ಲಿತ್ತು. ಈಗ ಎಲ್ಲ ರೀತಿಯ ವೈಫಲ್ಯವನ್ನೂ ಪರಾಜಿತ ಮುಖ್ಯಮಂತ್ರಿ ಬೊಮ್ಮಾಯಿ ಅವರ ಹೆಗಲಿಗೆ ಕಟ್ಟುವುದು ಸುಲಭ. ಆದರೆ ಆರಂಭದಲ್ಲಿ ಅವರು ದುರ್ಬಲರಾಗಿದ್ದರು ಅಷ್ಟೇ ಅಲ್ಲದೆ ಮೋದಿ-ಶಾ ಹಾಗೂ ಅವರ ಮಾಜಿ ಮಾರ್ಗದರ್ಶಕ ಯಡಿಯೂರಪ್ಪ ಅವರಿಗೆ ಬದ್ಧರಾಗಿದ್ದುದರಿಂದ ಬೊಮ್ಮಾಯಿ ಅವರು ಪಕ್ಷದೊಳಗಿನ ಗುಂಪು ಅಥವಾ ಬಣಗಳ ಮೇಲೆ ಯಾವುದೇ ಸ್ವತಂತ್ರ ನಿಯಂತ್ರಣವನ್ನು ಸಾಧಿಸಲಾಗಲೀ, ತಮ್ಮದೇ ಆಡಳಿತವನ್ನು ಶಿಸ್ತುಬದ್ಧವಾಗಿ ಚಲಾಯಿಸಲಾಗಲೀ ಹೆಣಗಾಡಬೇಕಾಯಿತು.

ಭ್ರಷ್ಟಾಚಾರದ ವಿವಾದಗಳು

ಕರ್ನಾಟಕದಲ್ಲಿ ಭ್ರಷ್ಟಾಚಾರದ ಬೇರುಗಳು ಜಾತಿ-ಸಮುದಾಯಗಳನ್ನು ಆಧರಿಸಿದ ಮುಖ್ಯವಾಹಿನಿಯ ಸಂರಚನೆಯಲ್ಲೇ ಅಂತರ್ಗತವಾಗಿವೆ. ಆದಾಗ್ಯೂ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಅವನತಿಯ ಬಗ್ಗೆ 1997ರಲ್ಲಿ ರಾಜಕೀಯತಜ್ಞ ಹೆರಾಲ್ಡ್‌ ಗೋಲ್ಡ್‌ ಪ್ರತಿಪಾದಿಸಿದಂತೆ, ರಾಜ್ಯದಲ್ಲಿ ಸಾರ್ವಜನಿಕರು ವ್ಯಾಪಕ ಭ್ರಷ್ಟಾಚಾರದ ಪರಿಕಲ್ಪನೆಯನ್ನು ಇತರ ನೆಲಮಟ್ಟದ ರಾಜಕೀಯ ಕಾರ್ಯಸಾಧ್ಯತೆಗಳ ಮೂಲಕ ಅಂದರೆ ಉನ್ನತ ಮಟ್ಟದ ಗುಂಪುಗಳ ಸಂಘರ್ಷದ ಮೂಲಕ ಅಥವಾ ದುರ್ಬಲ ರಾಜ್ಯ ನಾಯಕತ್ವದ ನೆಲೆಯಲ್ಲಿ ಮಾತ್ರವೇ ಗ್ರಹಿಸಲು ಇಚ್ಚಿಸುತ್ತಾರೆ. ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಕೇಳಿಬಂದ ಈ ಅನಿಯಂತ್ರಿತ ಭ್ರಷ್ಟಾಚಾರದ ಗ್ರಹಿಕೆಯೂ ಸಹ ಅದೇ ರೀತಿಯ ರಾಚನಿಕ ದೌರ್ಬಲ್ಯದ ಗ್ರಹೀತಗಳಿಂದಲೇ ಉಗಮಿಸಿರಬಹುದೇ ಹೊರತು ಭ್ರಷ್ಟಾಚಾರದ ನೈಜ ಗುಣೀಕರಣದಿಂದಲ್ಲ.

ಸಿಎಸ್‌ಡಿಎಸ್-ಎನ್‌ಡಿಟಿವಿ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿನ ಕೆಲವು ಪುರಾವೆಗಳನ್ನೇ ಸೂಕ್ಷ್ಮವಾಗಿ ಗಮನಿಸಿದರೆ ಶೇ 63ರಷ್ಟು ಜನರು ಸರ್ಕಾರದ ಕಾರ್ಯವೈಖರಿ ಮತ್ತು ಸಾಧನೆಯ ಬಗ್ಗೆ ಸಮಾಧಾನ ವ್ಯಕ್ತಪಡಿಸುತ್ತಾರೆ. ಕೇವಲ ಶೇ 32ರಷ್ಟು ಜನರು ತಮ್ಮ ಅಸಮಾಧಾನ ತೋರುತ್ತಾರೆ. ಕೇಂದ್ರ ಸರ್ಕಾರದ ಬಗ್ಗೆಯೂ ಇದೇ ಪ್ರಮಾಣದಲ್ಲಿ ಅಂಕಿಅಂಶಗಳು ಕಂಡುಬರುತ್ತವೆ. ಅಭಿವೃದ್ಧಿ ಯೋಜನೆಗಳ ಬಗ್ಗೆ ಸರ್ಕಾರಕ್ಕೆ ಬಹುಮಟ್ಟಿಗೆ ಮೆಚ್ಚುಗೆಯೇ ದೊರೆತಿತ್ತು, ರಸ್ತೆ ನಿರ್ಮಾಣ, ನೀರು ಮತ್ತು ವಿದ್ಯುತ್‌ ಸರಬರಾಜು ಮುಂತಾದ ಸೌಕರ್ಯಗಳ ವಿಷಯದಲ್ಲೂ ಉತ್ತಮ ಅಂಕಗಳು ದೊರೆತಿದ್ದವು. ಪ್ರಾಸಂಗಿಕವಾಗಿ ಅಂತರಿಕ ಭಿನ್ನಾಭಿಪ್ರಾಯ ಮತ್ತು ಗುಂಪುಗಾರಿಕೆ , ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತದ ವಿಚಾರಗಳಲ್ಲಿ ಕ್ರಮವಾಗಿ ಶೇ 55 , 59 ಮತ್ತು 59ರಷ್ಟು ಸಮಾಧಾನಕರ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇದೇ ಮತದಾರರೇ ಬೊಮ್ಮಾಯಿ ಅವರನ್ನು ದಶಕದಲ್ಲೇ ಅತಿ ಭ್ರಷ್ಟ ಮುಖ್ಯಮಂತ್ರಿ ಎಂದೂ ಮತ್ತೊಮ್ಮೆ ಆಯ್ಕೆಯಾಗಕೂಡದು ಎಂದೂ ಅಭಿಪ್ರಾಯಪಟ್ಟಿದ್ದರು.

ಡಬ್ಬಲ್‌ ಇಂಜಿನ್‌ ಸಂಯೋಜನೆಯಿಂದ ಉಸಿರುಗಟ್ಟಿದಂತಾಗಿದ್ದ ಬೊಮ್ಮಾಯಿ ಅವರ ಖಾಲಿ ಸೂಚಕವು ಇದೇ ಡಬ್ಬಲ್‌ ಇಂಜಿನ್‌ನ ಎಲ್ಲ ಪಾಪಗಳ ಹೊರೆಯನ್ನೂ ಹೊರಬೇಕಾಗಿದೆ. ಆದರೆ ಇದನ್ನು ಧೈರ್ಯದಿಂದ ಪಾರು ಮಾಡುವ ಶ್ರೇಯವು ಮೇಲ್ಮಟ್ಟದ ಇಂಜಿನ್‌ನೆಡೆಗೆ ಹರಿಯುತ್ತದೆ.

Tags: basavarajbommaiBJPbsyediyurappacmsiddaramiahCongress Partydcm dkshivakumarModisiddaramaiahಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಸಿದ್ದರಾಮಯ್ಯ
Previous Post

The expectations of the people of Karnataka are false : ಕರ್ನಾಟಕದ ಜನತೆಯ ನಿರೀಕ್ಷೆ ಹುಸಿ : ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ವಾಗ್ದಾಳಿ..!

Next Post

Prashant Neil Surprise | ಟಾಲಿವುಡ್ ಸಿಂಹಾದ್ರಿ ಹುಟ್ಟುಹಬ್ಬಕ್ಕೆ ಪ್ರಶಾಂತ್ ನೀಲ್ ಸರ್ಪ್ರೈಸ್…NTR31 ಸಿನಿಮಾದ ಶೂಟಿಂಗ್ ಯಾವಾಗ ಶುರು

Related Posts

Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
0

ಹಾಸನದ ಹೊಳೆನರಸೀಪುರದ ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal revanna) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ (Karnataka High Court) ಇತ್ಯರ್ಥಗೊಳಿಸಿದೆ. ಮನೆ ಕೆಲಸದಾಕೆ...

Read moreDetails

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

CM Siddaramaiah: ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರನ್ನು ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..

July 9, 2025

CM, DCM: ಸಿಎಂ, ಡಿಸಿಎಂ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ: ಜನರಿಗೆ ಯಾಮಾರಿಸಿದ್ದ ಮಹಿಳೆ ಅರೆಸ್ಟ್‌

July 9, 2025
Next Post
Prashant Neil Surprise | ಟಾಲಿವುಡ್ ಸಿಂಹಾದ್ರಿ ಹುಟ್ಟುಹಬ್ಬಕ್ಕೆ ಪ್ರಶಾಂತ್ ನೀಲ್ ಸರ್ಪ್ರೈಸ್…NTR31 ಸಿನಿಮಾದ ಶೂಟಿಂಗ್ ಯಾವಾಗ ಶುರು

Prashant Neil Surprise | ಟಾಲಿವುಡ್ ಸಿಂಹಾದ್ರಿ ಹುಟ್ಟುಹಬ್ಬಕ್ಕೆ ಪ್ರಶಾಂತ್ ನೀಲ್ ಸರ್ಪ್ರೈಸ್…NTR31 ಸಿನಿಮಾದ ಶೂಟಿಂಗ್ ಯಾವಾಗ ಶುರು

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada