ಫಿರೋಜಾಬಾದ್ (ಉತ್ತರ ಪ್ರದೇಶ): ಆಕೆಯ ತಂದೆ ಕಡಿಮೆ ವರದಕ್ಷಿಣೆ (Low dowry)ನೀಡಿದ್ದು,ಆಕೆ ನನ್ನ ಕಾರಿನಲ್ಲಿ ಕುಳಿತುಕೊಳ್ಳಲು ಅನರ್ಹಳು ಎಂದು ಹೇಳಿ ಪತಿಯೊಬ್ಬ ತನ್ನ ಪತ್ನಿಯನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ (On the highway)ಕೆಳಗೆ ಇಳಿಸಿ ಉತ್ತರ ಪ್ರದೇಶದ ಫಿರೋಜಾಬಾದ್‌ಗೆ ತೆರಳಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಆರವ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸ್ (ಎಸ್‌ಎಚ್‌ಒ) SHO ಸುಜಲ್ ಪಾಂಡೆ ಮಾತನಾಡಿ, “ನಾವು ಪತಿ-ಪತ್ನಿ ಇಬ್ಬರನ್ನೂ ಕೌನ್ಸೆಲಿಂಗ್‌ಗೆ ಕರೆದಿದ್ದೆವು. ಆದರೆ ಆ ವ್ಯಕ್ತಿ ಬರದ ಕಾರಣ ಮಹಿಳೆ ಆತನ ವಿರುದ್ಧ ದೂರು ದಾಖಲಿಸಿದ್ದಾರೆ ಮತ್ತು ನಂತರ ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದರು.ಸಂತ್ರಸ್ತೆ ನಮ್ರತಾ ಫಿರೋಜಾಬಾದ್‌ನ ಪೆಗು ಗ್ರಾಮದ ನಿವಾಸಿ ಎಂದು ಅವರು ಹೇಳಿದರು.
ಗ್ರೇಟರ್ ನೋಯ್ಡಾದ ನಿವಾಸಿ ವಿಕಾಸ್ ಸೋಲಂಕಿ ಎಂಬಾತನ ಜೊತೆ ಆಕೆ ವಿವಾಹವಾಗಿದ್ದಾಳೆ.ಆಕೆಯ ತಂದೆ 12 ಲಕ್ಷ ರೂಪಾಯಿ ವರದಕ್ಷಿಣೆ ನೀಡಿದ್ದರು.ಆದರೆ ಅತ್ತೆ ಮಾವಂದಿರು ಅದಕ್ಕೆ ತೃಪ್ತರಾಗಲಿಲ್ಲ.ಅವರು ಬೈಕ್ ಮತ್ತು ಇನ್ನೂ ಒಂದು ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟರು.ಆಕೆಗೆ ಚಿತ್ರಹಿಂಸೆ ನೀಡಲಾಯಿತು.ಆಕೆಯ ಪತಿ, ಅತ್ತೆ-ಮಾವಂದಿರು ಮತ್ತು ಇತರ ಸಂಬಂಧಿಕರಿಂದ ಆಕೆಯನ್ನು ಥಳಿಸಲಾಯಿತು” ಎಂದು ಪಾಂಡೆ ಹೇಳಿದರು.
“ಒಂದು ದಿನ, ನಮ್ರತಾ ತಮ್ಮ ಮಗನಿಗೆ ಔಷಧಿ ತರಲು ತನ್ನ ಪತಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ, ವಿಕಾಸ್ ಅವಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಳಿಸಿ ಹೋಗಿದ್ದಾನೆ. ಅವನು ಮಗುವನ್ನು ತನ್ನೊಂದಿಗೆ ಇಟ್ಟುಕೊಂಡಿದ್ದಾನೆ” ಎಂದು ಪೊಲೀಸ್ ಅಧಿಕಾರಿ ಸೇರಿಸಿದ್ದಾರೆ. ಪತಿಯನ್ನು ಹೊರತುಪಡಿಸಿ, ವರದಕ್ಷಿಣೆಗಾಗಿ ಪೀಡಿಸಿದ ಆಕೆಯ ಅತ್ತೆ ಮತ್ತು ಇತರ ಸಂಬಂಧಿಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ಹೇಳಿದರು. “ನಾವು ವಿಷಯವನ್ನು ತನಿಖೆ ಮಾಡುತ್ತಿದ್ದೇವೆ” ಎಂದು ಪೊಲೀಸ್ ಅಧಿಕಾರಿ ಹೇಳಿದರು.