ನಟ ದರ್ಶನ್ (Darshan) ರೇಣುಕಾಸ್ವಾಮಿ (Renukaswamy) ಕೊಲೆ ಕೇಸ್ನಲ್ಲಿ ಬಂಧನಕ್ಕೆ ಒಳಗಾದ ಬಳಿಕ ಎದುರಾದ ಸಮಸ್ಯೆಗಳು ಒಂದೆರಡಲ್ಲ. .

ಕೆಲ ತಿಂಗಳ ಹಿಂದೆ ಜಾಮೀನು ಸಿಕ್ಕಿದ ಬಳಿಕ ಬೆಂಗಳೂರು ಬಿಟ್ಟು ಎಲ್ಲೇ ತೆರಳಬೇಕೆಂದರೂ ಕೋರ್ಟ್ನಿಂದ ಅನುಮತಿ ಪಡೆಯಬೇಕಿತ್ತು. ಈಗ ಕರ್ನಾಟಕ ಹೈಕೋರ್ಟ್ ನಿಯಮಗಳನ್ನು ಸಡಿಲಿಸಿದೆ. ಇದರಿಂದ ದರ್ಶನ್ ನಿಟ್ಟುಸಿರು ಬಿಟ್ಟಿದ್ದಾರೆ. ಈಗ ಹೊಸ ಷರತ್ತುಗಳಿಂದ ದೇಶದಲ್ಲಿ ಎಲ್ಲಿ ಬೇಕಾದರೂ ತೆರಳಬಹುದು. ‘ಡೆವಿಲ್’ ಸಿನಿಮಾ ಶೂಟಿಂಗ್‌ಗಾಗಿ (Devil Film Shooting) ಈ ಆದೇಶ ಅವರಿಗೆ ಸಹಾಯವಾಗಲಿದೆ.

ಈ ಮೊದಲು ಸೆಷನ್ಸ್ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳುವಂತಿರಲಿಲ್ಲ ಎಂಬ ಷರತ್ತನ್ನು ಕೋರ್ಟ್ ಹಾಕಿತ್ತು. ಇದರಿಂದ ದರ್ಶನ್ ಎಲ್ಲೇ ತೆರಳಬೇಕಾದರೂ ಕೋರ್ಟ್ನ ಅನುಮತಿ ಪಡೆದೇ ಹೋಗಬೇಕಿತ್ತು. ಹೀಗಾಗಿ, ಷರತ್ತು ಸಡಿಲಿಕೆ ಕೋರಿ ಹೈಕೋರ್ಟ್ಗೆ ನಟ ದರ್ಶನ್ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಗೆ ಎಸ್ ಪಿಪಿ ಪ್ರಸನ್ನಕುಮಾರ್ (SPP Prasanna Kumar) ಆಕ್ಷೇಪಿಸಿದ್ದರು.

‘ಜಾಮೀನು ಪಡೆಯುವಾಗ ಅನಾರೋಗ್ಯದ ಕಾರಣ ನೀಡಿದ್ದರು. ಈಗ ದೇಶದೆಲ್ಲೆಡೆ ಸುತ್ತಾಡಲು ಬಯಸುತ್ತಿದ್ದಾರೆ’ ಎಂದು ಪ್ರಸನ್ನ ಕುಮಾರ್ ಆಕ್ಷೇಪಿಸಿದ್ದರು. ಆದಾಗ್ಯೂ ಹೈಕೋರ್ಟ್ ದರ್ಶನ್ ಅವರ ಜಾಮೀನು ಷರತ್ತುಗಳನ್ನು ಸಡಿಲಿಸಿದೆ. ‘ಕೋರ್ಟ್ ಅನುಮತಿಯಿಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲ’ ಎಂದು ಕೋರ್ಟ್ ಹೇಳಿದೆ. ಈ ಮೂಲಕ ಅವರು ರಿಲೀಫ್ ಆಗಿದ್ದಾರೆ.

ದರ್ಶನ್ ‘ಡೆವಿಲ್’ ಸಿನಿಮಾದ ಶೂಟ್ನಲ್ಲಿ ಬ್ಯುಸಿ ಆಗಬೇಕಿದೆ. ಇದಕ್ಕೆ ಅವರು ನಾನಾ ಕಡೆಗಳಿಗೆ ತೆರಳಬೇಕಾಗುತ್ತದೆ. ಆಗ ಪ್ರತಿ ಬಾರಿ ಅವರು ಕೋರ್ಟ್ನ ಮೊರೆ ಹೋಗೋಕೆ ಸಾಧ್ಯವಾಗುವುದಿಲ್ಲ. ಹೀಗಾಗಿ, ದರ್ಶನ್ ಅವರು ಷರತ್ತುಗಳ ಸಡಿಲಿಕೆ ಮಾಡುವಂತೆ ಕೋರಿದ್ದರು.