ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಯ (Pahalgam terror attack) ನಂತರ ಭಾರತ ಉಗ್ರರ ವಿರುದ್ಧ, ಪಾಕಿಸ್ತಾನದ (Pakistan) ವಿರುದ್ಧ ದೊಡ್ಡ ಪ್ರತೀಕಾರ ತೀರಿಸಿಕೊಳ್ಳಬೇಕು ಎಂಬುದು ಇಡೀ ಭಾರತೀಯರ ಆಶಯವಾಗಿದೆ. ಈ ಕುರಿತು ಈಗಾಗಲೇ ಪ್ರಧಾನಿ ಮೋದಿ (Pm modi) ಮತ್ತು ಅಮಿತ್ ಶಾ (Amit shah)ಮಾತನಾಡಿದ್ದು ಊಹಿಸಿಕೊಳ್ಳಲು ಸಾಧ್ಯವಾಗದ ರೀತಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದರು.

ಇದೀಗ ಈ ಬಗ್ಗೆ ಸಾಧು, ಸಂತರ ಸಮಾವೇಶದ ಬಹಿರಂಗ ವೇದಿಕೆಯಲ್ಲಿ ರಾಜನಾಥ್ ಸಿಂಗ್ ಮಾತನಾಡಿದ್ದು, ನಮ್ಮ ದೇಶದ ಮೇಲೆ ಕೈ ಎತ್ತುವವರಿಗೆ ತಕ್ಕ ಪ್ರತ್ಯುತ್ತರ ನೀಡುವುದು ನನ್ನ ಜವಾಬ್ದಾರಿ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು ನೀವೆಲ್ಲಾ ಏನು ಬಯಸಿದ್ದಿರೋ ಅದು ಆಗುತ್ತೆ ಎಂದು ದೇಶದ ಜನರಿಗೆ ಭರವಸೆ ನೀಡಿದ್ದಾರೆ. ಈ ಮೂಲಕ ಪಾಕಿಸ್ತಾನ ಹಾಗೂ ಉಗ್ರರ ಮೇಲೆ ಪ್ರತೀಕಾರದ ದಾಳಿ ನಿಶ್ಚಿತ ಎಂದು ಪರೋಕ್ಷವಾಗಿ ರಾಜನಾಥ್ ಸಿಂಗ್ ಹೇಳಿದ್ದಾರೆ.

ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ, ಅವರ ಕಾರ್ಯಶೈಲಿಯ ಬಗ್ಗೆ ನಿಮಗೆಲ್ಲಾ ಚೆನ್ನಾಗಿಯೆ ಗೊತ್ತಿದೆ. ಹೀಗಾಗಿ ಎಲ್ಲಾ ಪ್ರಶ್ನೆಗಳಿಗೂ ಸದ್ಯದಲ್ಲೇ ಉತ್ತರ ಸಿಗಲಿದೆ ಎಂದು ಕೇಂದ್ರದ ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.