
ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರು ಮತ್ತೊಂದು ಪತ್ರ ಬರೆದಿದ್ದಾರೆ. ರಹಸ್ಯ ಮಾಹಿತಿ ಸೋರಿಕೆ ಆಗಿರುವ ಬಗ್ಗೆ ಗರಂ ಆಗಿರುವ ರಾಜ್ಯಪಾಲರು, ತನಿಖೆ ನಡೆಸಿ ವರದಿ ನೀಡಲು ಸೂಚನೆ ನೀಡಿದ್ದಾರೆ. ಕ್ಯಾಬಿನೆಟ್ ನಿರ್ಣಯ ಹಾಗೂ ಪ್ರಾಸಿಕ್ಯೂಷನ್ ವಿಚಾರದಲ್ಲಿ ಲೋಕಾಯುಕ್ತರಿಗೆ ಬರೆದ ಪತ್ರದ ಬಗ್ಗೆ ರಾಜ್ಯಪಾಲರು ಗರಂ ಆಗಿದ್ದಾರೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಲೋಕಾಯುಕ್ತ ಎಸ್‌ಐಟಿಗೆ ಪತ್ರ ಬರೆದಿದ್ದು, ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಮತ್ತೊಮ್ಮೆ ಪತ್ರ ಸಮರ ಶುರುವಾಗಿದೆ. ಈ ಹಿಂದೆ ರಾಜ್ಯಪಾಲರು ಬರೆದಿದ್ದ ಪತ್ರದ ಬಗ್ಗೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು.
