ತುಮಕೂರು: ನಮ್ಮ ಮನೆಯ ತುಂಬಾ ಮಕ್ಕಳು ಮರಿ ಅಂತೆಲ್ಲಾ ತುಂಬಾ ಜನರಿದ್ದೇವೆ. ಆದರೆ, ಬರಗಾಲದ ಹಿನ್ನೆಲೆಯಲ್ಲಿ ಕೂಲಿಯೂ ಸಿಗ್ತಿಲ್ಲ. ಸರ್ಕಾರದಿಂದಕೊಡುವ 5 ಕೆ.ಜಿ. ಅಕ್ಕಿಯೂ ಊಟಕ್ಕೆಸಾಲುತ್ತಿಲ್ಲ. ಹೀಗಾಗಿ, ದಯವಿಟ್ಟು ನಮ್ಮ ಕುಟುಂಬಕ್ಕೆ 5 ಕೆಜಿ ಆಹಾರ ಧಾನ್ಯದ ಬದಲಾಗಿ ನೀಡುತ್ತಿರುವ ಹಣದ ಬದಲು ನಮಗೆ ಅಕ್ಕಿಯನ್ನು ಕೊಡಬೇಕು ಎಂದು ತುಮಕೂರಿನಲ್ಲಿ ರೈತನೊಬ್ಬ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಅವರ ಬಳಿ ಮನವಿ ಮಾಡಿಕೊಂಡಿದ್ದಾನೆ.

ತುಮಕೂರು ಜಿಲ್ಲೆಯಲ್ಲಿ ನಡೆದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಕಚೇರಿ ಬಳಿ ನಡೆದ ಜನತಾ ದರ್ಶನದಲ್ಲಿ ಭಾಗಿಯಾದ ರೈತನೊಬ್ಬ ಹೊಟ್ಟೆ ತುಂಬಾ ಊಟ ಮಾಡೋಕೆ ಆಗ್ತಿಲ್ಲ ಸ್ವಾಮೀ, ನಮಗೆ ಹಣದ ಬದಲು 10 ಕೆಜಿ ಅಕ್ಕಿ ಕೊಡಿ ಎಂದು ಸಚಿವರ ಎದುರು ಅಳಲು ತೋಡಿಕೊಂಡಿದ್ದಾನೆ. ಸರ್ಕಾರದಿಂದ ಕೇವಲ 3 ಕೆ.ಜಿ. ಅಕ್ಕಿ ಕೊಡ್ತಾರೆ. ಇದರಿಂದಾಗಿ ನಮ್ಮ ಕುಟುಂಬದ ಎಲ್ಲ ಸದಸ್ಯರು ಹೊಟ್ಟೆ ತುಂಬ ಅನ್ನ ಊಟ ಮಾಡೋಕೆ ಆಗ್ತಿಲ್ಲ. ದಯವಿಟ್ಟು ನಮಗೆ ಹಣದ ಬದಲು ಸಂಪೂರ್ಣವಾಗಿ ಅಕ್ಕಿಯನ್ನು ಕೊಡಿ. ಇಲ್ಲದಿದ್ದರೆ ನಾವು ಹೊಟ್ಟೆ ಹಸಿವಿನಿಂದ ಇರಬೇಕಾಗುತ್ತದೆ ಎಂದು ಮನವಿ ಮಾಡಿದ್ದಾರೆ.











