ಮಹಾರಾಷ್ಟ್ರದ ಸದ್ಯದ ರಾಜಕೀಯ ವಿವಾದಗಳಿಗೆ ಇಂದು ಮುಕ್ತಿ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಒಂದು ವೇಳೆ ಹಳೆಯ ವಿವಾದಗಳು ಅಂತ್ಯವಾಗಿ ಹೊಸದೊಂದು ರಾಜಕೀಯ ವಿವಾದ ಕೂಡ ಉದ್ಭವಿಸಬಹುದು ಅನ್ನೋದು ರಾಜಕೀಯ ಪಂಡಿತರ ಮಾತಾಗಿದೆ. ಹೌದು.. ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ನಡುವೆ ಒಂದು ವರ್ಷದಿಂದ ನಡೆಯುತ್ತಿರುವ ಕಾನೂನು ಹೋರಾಟಕ್ಕೆ ಸುಪ್ರೀಂ ಕೋರ್ಟ್ ಇಂದು ಅಂತ್ಯ ಹಾಡಲಿದೆ. ಆ ಮೂಲಕ ಮಹಾರಾಷ್ಟ್ರದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಲಿದೆ. ಅಷ್ಟಕ್ಕೂ ಮಹಾರಾಷ್ಟ್ರದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟು ಏನು ಅನ್ನೋದು ಸಾಕಷ್ಟು ಜನರಿಗೆ ಕಾಡ್ತಾ ಇರಬಹುದು. ಇದಕ್ಕೆ ಉತ್ತರ ತಿಳಿದುಕೊಳ್ಳಬೇಕು ಅಂದ್ರೆ ನಾವು ಹಿಂದಿನ ವರ್ಷದಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನ ತಿಳಿದುಕೊಳ್ಳಬೇಕು
ಅಸಲಿಗೆ ಹಿಂದಿನ ವರ್ಷ ಶಿವಸೇನೆಯಿಂದ ಹೊರಬಂದು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಹಾಲಿ ಸಿಎಂ ಏಕನಾಥ್ ಶಿಂಧೆ ಹಾಗೂ ಅವರ ಬಣವೇ ಈ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿಗೆ ಪ್ರಮುಖ ಕಾರಣ. ಹೀಗಾಗಿ ಏಕನಾಥ್ ಶಿಂಧೆ ಹಾಗೂ ಅವರ ನೇತೃತ್ವದ ಬಣದ ರಾಜಕೀಯ ಭವಿಷ್ಯ ಸುಪ್ರಿಂ ಕೋರ್ಟ್‌ನಲ್ಲಿ ನಿರ್ಧಾರವಾಗಲಿದೆ. ಶಿವಸೇನೆ-ಕಾಂಗ್ರೆಸ್- ಎನ್‌ಸಿಪಿ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರ ಪತನಗೊಂಡು ಬಿಜೆಪಿ ಜೊತೆಗೆ ಶಿಂಧೆ ಬಣದ ಶಿವಸೇನೆ ಸರ್ಕಾರ ರಚಿಸಿದೆ. ಎಂವಿಎ ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸಮತ ಎದುರಿಸುವ ಮುನ್ನ ರಾಜ್ಯಪಾಲರಾಗಿದ್ದ ಭಗತ್ ಸಿಂಗ್ ಕೋಶಿಯಾರಿ ಸರ್ಕಾರ ರಚನೆಗೆ ಆಹ್ವಾನಿಸಿದ್ದು, ಶಿಂಧೆ ಬಣದ ಶಾಸಕರಿಗೆ ಮಾನ್ಯತೆ ನೀಡುವ ವಿಚಾರದಲ್ಲಿ ಸ್ಪೀಕರ್ ಅನುಸರಿಸಿದ ಕ್ರಮ, ಪಕ್ಷದ ವಿಪ್ ಉಲ್ಲಂಘಿಸಿದ್ದು ಸೇರಿದಂತೆ ಹಲವು ಅಂಶಗಳ ವಿರುದ್ಧ ಕಾನೂನಾತ್ಮಕ ಹೋರಾಟ ಸುಪ್ರೀಂಕೋರ್ಟ್‌ನಲ್ಲಿ ನಡೆದಿತ್ತು. ಈಗ ಇದೇ ವಿಚಾರಕ್ಕೆ ಸಂಬಂದ ಪಟ್ಟ ಹಾಗೆ ಇಂದು ತೀರ್ಪು ಹೊರ ಬರುವ ನಿರೀಕ್ಷೆ ಇದೆ