
ಹಾವೇರಿ: ಕಾಂಗ್ರೆಸ್‌ನವರಿಗೆ ಜನ ಜವಾಬ್ದಾರಿ ಸ್ಥಾನ ಕೊಟ್ಟರು, ಆದರೆ ಅವರಿಗೆ ಅಭಿವೃದ್ಧಿ ಕೆಲಸ ಮಾಡಲು ಸಮಯವೂ ಇಲ್ಲ, ಮನಸ್ಸು ಇಲ್ಲ ಎಂದು ಹಾವೇರಿಯಲ್ಲಿ ವಾಗ್ದಾಳಿ ಮಾಡಿದ್ದಾರೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ. ಯಾಕೆಂದರೆ ಹಣಕಾಸಿನ ವ್ಯವಸ್ಥೆ ಸಂಪೂರ್ಣವಾಗಿ ದುಸ್ಥಿತಿಗೆ ಬಂದಿದೆ. ಕಳೆದ ಬಾರಿ ಬಜೆಟ್‌ನ ಹಣ ಕೇವಲ ಶೇಕಡ 50-60 ರಷ್ಟು ಹಣ ಉಪಯೋಗವಾಗಿದೆ..

ಹಿಂದುಳಿದ ವರ್ಗ & ಎಸ್ಸಿ-ಎಸ್ಟಿ ನಾಯಕರ ಜೊತೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದರು.. ಈ ಬಾರಿ ಎಸ್‌ಪಿ, ಟಿಎಸ್‌ಪಿ ಹಣ ಎಷ್ಟು ಖರ್ಚು ಆಯ್ತು ಅನ್ನೋದು ಪ್ರಸ್ತಾಪ ಆಗಿಲ್ಲ.. ದೊಡ್ಡದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿ, ಅದರ ಅರ್ಧದಷ್ಟು ಖರ್ಚು ಆಗದಿದ್ದರೆ ಅದರಿಂದ ಪ್ರಯೋಜನೆ ಏನು ಎಂದು ಪ್ರಶ್ನಿಸಿದ್ದಾರೆ. ಹಿಂದುಳಿದ ವರ್ಗದ ನಾಯಕರು ಮುಖ್ಯಮಂತ್ರಿಯನ್ನ ಪ್ರಶ್ನೆ ಮಾಡಬೇಕಿತ್ತು. ಅದನ್ನು ವಿರೋಧ ಪಕ್ಷವಾಗಿ ಬಿಜೆಪಿ ಪ್ರಶ್ನೆ ಮಾಡ್ತಿದೆ ಎಂದಿದ್ದಾರೆ.

ಮುಖ್ಯಮಂತ್ರಿಗಳು ಬಜೆಟ್‌ಗೂ ಮುನ್ನ, ಹಣಕಾಸಿನ ಸ್ಥಿತಿಗತಿ, ಬಜೆಟ್‌ನಲ್ಲಿ ಖರ್ಚಾದ ಹಣದ ಬಗ್ಗೆ ಮಾಹಿತಿ ಕೊಡಲಿ ಎಂದಿರುವ ಬಸವರಾಜ ಬೊಮ್ಮಾಯಿ.. ಅಕಸ್ಮಾತ್ ಅವರು ಕೊಡದಿದ್ದರೆ, ಬಿಜೆಪಿ ಅದಕ್ಕೆ ಕೌಂಟರ್ ಆಗಿ ಬ್ಲಾಕ್ ಪೇಪರ್‌ನಲ್ಲಿ ಕೊಡ್ತದೆ ಎಂದಿದ್ದಾರೆ. ರಾಜ್ಯದ 9 ವಿಶ್ವ ವಿಶ್ವವಿದ್ಯಾಲಯ ಬಂದ್ ಮಾಡುವ ವಿಚಾರವಾಗಿ ಮಾತನಾಡಿ, ಇದೊಂದು ಘೋರ ಅನ್ಯಾಯ.. ಯೂನಿವರ್ಸಿಟಿಯ ಪರಿಕಲ್ಪನೆ ಬದಲಾಗಿದೆ ಎಂದಿದ್ದಾರೆ.
ಯೂನಿವರ್ಸಿಟಿ ಪರಿಕಲ್ಪನೆ ಬದಲಾವಣೆ ಆಗಿದೆ. ಇವತ್ತು ಡಿಜಿಟಲ್ ಪ್ಲಾಟ್‌ಫಾರ್ಮ್ ಬಂದಿದೆ. ದೊಡ್ಡ ಕ್ಯಾಂಪಸ್ ಮತ್ತು ಕಟ್ಟಡ ಬೇಕಾಗಿಲ್ಲ. ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಕಡಿಮೆ ವೆಚ್ಚದಲ್ಲಿ ಯುನಿವರ್ಸಿಟಿ ನಡೆಸಬಹುದು ಎಂದು ಕಳೆದ ಎರಡು ವರ್ಷದಿಂದ ಯೂನಿವರ್ಸಿಟಿ ಯಶಸ್ವಿಯಾಗಿ ನಡೆದಿವೆ.. ಮೊದಲು ಸ್ಥಾಪನೆ ಮಾಡಿದ ಯುನಿವರ್ಸಿಟಿ ನೂರಾರು ಕೋಟಿ ರುಪಾಯಿ ಅನುಧಾನ ನೀಡಿದೆ. ದೊಡ್ಡ ಹೊರೆ ಅಲ್ಲಿಯಿದೆ. ವೇತನ ಸಹ ಕೊಡಲು ಆಗಿಲ್ಲ. ಪಿಂಚಣಿ ಸಹ ಕೊಡಲು ಆಗಿಲ್ಲ ಎಂದಿದ್ದಾರೆ.

ಸಿಂಡಿಕೇಟ್ ಸಭೆಯಲ್ಲಿ ಕೇವಲ ಭ್ರಷ್ಟಾಚಾರ ಮಾಡಲು ಪ್ರಯತ್ನ ಮಾಡುತ್ತಾರೆ. ಭ್ರಷ್ಟಾಚಾರ ಕೂಪವಾಗಿದೆ. ಅದನ್ನ ತಡೆಗಟ್ಟಲು ವಿಫಲವಾಗಿದೆ. ಹಳೆಯ ವಿಶ್ವವಿದ್ಯಾಲಯ ಹೋಲಿಕೆ ಮಾಡಿದರೆ ಹೊಸ ವಿಶ್ವವಿದ್ಯಾಲಯ ಉತ್ತಮ ರೀತಿಯಲ್ಲಿ ನಡೆಯುತ್ತಿವೆ. ಸಮಯಕ್ಕೆ ಸರಿಯಾಗಿ ಪರೀಕ್ಷೆ ನಡೆಯುತ್ತಿವೆ. 20 ದಿನಗಳಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ. ಸ್ಥಳೀಯವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಬಿಜೆಪಿ ಅವರು ಮಾಡಿದ್ದಾರೆ ಅನ್ನೋ ಒಂದೆ ಒಂದು ಕಾರಣಕ್ಕಾಗಿ, ತಪ್ಪು ವರದಿಯನ್ನ ತೆಗೆದುಕೊಂಡು ಬಂದ್ ಮಾಡಲು ಹೊರಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.












