
ಹಾಸನದಲ್ಲಿ ವರುಣನ ಮೊದಲ ಸಿಂಚನವಾಗಿದೆ. ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಆಗಿದ್ದು, ಬಿರುಗಾಳಿ ಸಹಿತ ಸುರಿದಿದೆ ವರ್ಷದ ಮೊದಲ ಮಳೆ. ಹಾಸನ ನಗರದ ಸೇರಿದಂತೆ ಜಿಲ್ಲೆಯ ಹಲವೆಡೆ ಸುರಿದ ಮಳೆಯಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಚನ್ನರಾಯಪಟ್ಟಣ, ಆಲೂರು, ಸಕಲೇಶಪುರ ತಾಲ್ಲೂಕುಗಳಲ್ಲಿ ಭಾರೀ ಮಳೆಯಾಗಿದೆ. ಈ ವರ್ಷದ ಮೊದಲ ಮಳೆಗೆ ಜನರು ಖುಷ್ ಆಗಿದ್ದಾರೆ.

ಹಾಸನ ಜಿಲ್ಲೆಯ ಹಲವೆಡೆ ಸುರಿದ ಭಾರಿ ಮಳೆಯಿಂದ ಮಳೆ ನಡುವೆ ಸಾರಿಗೆ ಬಸ್‌ನಲ್ಲಿ ವೈಪರ್ ಇಲ್ಲದೆ ಚಾಲಕ ಪರದಾಡಿದ್ದಾರೆ. ಹಾಸನದಿಂದ ಬೆಂಗಳೂರು ತೆರಳುತ್ತಿದ್ದ ಸಾರಿಗೆ ಬಸ್‌ನಲ್ಲಿ ಚಾಲಕ ಬಸ್ ಚಾಲನೆ ಮಾಡಲು ಪರದಾಡಿದ್ದಾನೆ. ಸ್ವಿಚ್ ಸರಿಯಿಲ್ಲದ ಕಾರಣಕ್ಕೆ ಬಸ್‌ನಲ್ಲಿ ವೈಪರ್ ಆನ್ ಆಗದೆ ಪರದಾಡಲಾಗಿದೆ. ಚನ್ನರಾಯಪಟ್ಟಣದಲ್ಲಿ ಪ್ರಯಾಣಿಕರು ಟಿಕೆಟ್ ಹಣ ವಾಪಾಸ್ ಕೊಡಿ ಎಂದು ಆಗ್ರಹಿಸಿದ್ದಾರೆ. ಬೇಸಿಗೆ ಕಾಲ ಆದ್ದರಿಂದ ಪರಿಶೀಲಿಸಿಲ್ಲ ಎಂದಿದ್ದಾರೆ ನಿರ್ವಾಹಕ.

ಚಾಮರಾಜನಗರದಲ್ಲೂ ಮೊದಲ ವರ್ಷಧಾರೆ ಆಗಿದೆ. ಚಾಮರಾಜನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆ ಆಗಿದೆ. ಬಿಸಿಲ ಬೇಗೆಯಿಂದ ಬೇಸತ್ತಿದ್ದ ಜನತೆಗೆ ವರುಣನ ಸಿಂಚನ ಆಗಿದ್ದು, ಜನರು ಖುಷ್ ಆಗಿದ್ದಾರೆ. ಬೆಳಗ್ಗೆಯಿಂದ ಬಿರುಬಿಸಿಲು ಇದ್ದು, ಸಂಜೆಯಾಗುತ್ತಿದ್ದಂತೆ ಏಕಾಏಕಿ ಮೋಡ ಕವಿದ ವಾತಾವರಣ ಸೃಷ್ಟಿ ಆಗಿತ್ತು. ಪೂರ್ವ ಮುಂಗಾರು ಆರಂಭ ಆಗಿದ್ದು, ಗುಡುಗು ಮಿಂಚು ಸಮೇತ ಮಳೆ ಸುರಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಲ್ಲೂ ಉತ್ತಮ ಮಳೆಯಾಗಿದೆ. ಬಿಸಿಲ ಝಳದಿಂದ ತತ್ತರಿಸಿದ ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ಮಳೆಯ ಸಿಂಚನ ಆಗಿದ್ದು, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕಿನ ಹಲವೆಡೆ ಮಳೆ ಸುರಿದಿದೆ. ಕಡಬದಲ್ಲಿ ಭಾರೀ ಗಾಳಿ ಸಹಿತ ಮಳೆ ಆಗಿದೆ. ಮೊದಲ ಮಳೆಗೇ ಕಡಬದ ಕೋಡಿಂಬಾಳ-ಕಲ್ಲಂತ್ತಡ್ಕ ರಸ್ತೆಯ ಸೇತುವೆ ಜಲಾವೃತ ಆಗುವಷ್ಟು ಮಳೆಯಾಗಿದ್ದು ವಿಶೇಷ. ನೀರು ಹರಿಯಲು ಚರಂಡಿ ವ್ಯವಸ್ಥೆ ಸಮರ್ಪಕವಿಲ್ಲದ ಕಾರಣ ಸೇತುವೆಯ ಮೇಲೆಯೇ ಹರಿದಿದೆ ಮಳೆ ನೀರು. ಮಳೆ ನೀರಿನಿಂದಾಗಿ ಪ್ರಯಾಣಿಕರಿಗೆ ತೊಂದರೆಯೂ ಆಗಿದೆ.

ಕಲ್ಪತರು ನಾಡು ತುಮಕೂರಿನಲ್ಲಿ ವರ್ಷದ ಮೊದಲ ಮಳೆಯ ಸಿಂಚನ ಆಗಿದೆ. ಬಿಸಿಲ ಬೇಗೆಯಿಂದ ಬಸವಳಿದ್ದ ಜನರಿಗೆ ತಂಪೆರೆದಿದ್ದಾನೆ ಮಳೆರಾಯ. ಸಂಜೆ ವೇಳೆಗೆ ವರುಣನ ಅಬ್ಬರದಿಂದ ಅಕಾಲಿಕ ಮಳೆಗೆ ಜನರ ತತ್ತರಿಸಿದ್ದಾರೆ. ತುಮಕೂರು ನಗರ ಸೇರಿದಂತೆ ಹಲವೆಡೆ ಧಾರಕಾರ ಮಳೆ ಆಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಉತ್ತಮ ಮಳೆ ಆಗಿದೆ. ಜಿಲ್ಲೆಯಲ್ಲಿ ಬಿಸಿಲ ಬೇಗೆಗೆ ತಂಪನ್ನೆರೆದಿದ್ದಾನೆ ವರುಣದೇವ. ಸಂಜೆ ವೇಳೆಗೆ ಸುರಿದ ಮಳೆಗೆ ಮನೆ ಕಡೆಗೆ ಹೊರಟಿದ್ದ