ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನಂ ನಾಯ್ಡು ಮೇಲೆ ಮೊಟ್ಟೆ ಎಸೆಯಲಾಗಿದೆ. ಡಾ ರಾಜ್‌ಕುಮಾರ್ ಸಮಾಧಿ ರಸ್ತೆಯಲ್ಲಿ ಕಾರ್ಯಕ್ರಮಕ್ಕೆ ಹೋಗುವಾಗ ಅನಾಮಿಕರು ಮೊಟ್ಟೆ ಎಸೆಯಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಕುತಂತ್ರ.. ಸರ್ಕಾರವೇ ಉದ್ದೇಶ ಪೂರ್ವಕವಾಗಿ ಈ ಘಟನೆಗೆ ಕಾರಣವಾಗಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಆದರೆ ಈ ಘಟನೆ ಹಿಂದಿನ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಬಿಜೆಪಿ ಶಾಸಕರೇ ಮಾಡಿಕೊಂಡ ಕೃತ್ಯವಾ..? ಅನ್ನೋ ಬಗ್ಗೆ ಅನುಮಾನಗಳು ಮೂಡುವುದು ಸಹಜ.

ಮೊಟ್ಟೆ ಎಸೆದಿರುವ ವಿಡಿಯೋದಲ್ಲಿ ಆಡಿಯೋ ಕೂಡ ರೆಕಾರ್ಡ್ ಆಗಿದೆ. ಮೊಟ್ಟೆ ಎಸೆಯುವ ಕೆಲವೇ ಕ್ಷಣಗಳ ಮೊದಲು ಆ್ಯಸಿಡ್.. ಆ್ಯಸಿಡ್ ದಾಳಿ ಅನ್ನೋ ಮಾತಿದೆ. ಅದಾದ ಎರಡು ಸೆಕೆಂಡ್‌ನಲ್ಲಿ ಮೊಟ್ಟೆ ಮುನಿರತ್ನಂ ನಾಯ್ಡು ಮೇಲೆ ಬಿದ್ದಿದೆ. ಮುನಿರತ್ನಂ ನಾಯ್ಡು ಮೇಲೆ ಮ ಒಟ್ಟೆ ಬೀಳುತ್ತಿದ್ದ ಹಾಗೆ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ರಿಯಾಕ್ಟ್ ಆಗಿರುವುದನ್ನು ನೋಡಿದಾಗ, ಭಯೋತ್ಪಾಧಕರು ಬಾಂಬ್ ದಾಳಿ ಮಾಡಿದಾಗ ರಕ್ಷಣೆಗೆ ಬರುವಂತಹ ಸಂದರ್ಭವನ್ನು ನೆನಪು ಮಾಡುವಂತಿದೆ.

ಇನ್ನು ಮೊಟ್ಟೆ ಮುನಿರತ್ನಂ ನಾಯ್ಡು ಅವರ ತಲೆ ಮೇಲೆ ನೇರವಾಗಿ ಬಿದ್ದಿದೆ. ಅಂದರೆ ಮೊಟ್ಟೆಯಲ್ಲಿ ತೀರಾ ಸಮೀಪದಿಂದಲೇ ಎಸೆಯಲಾಗಿದೆ ಎನ್ನುವುದು ಕನ್ಫರ್ಮ್. ಕ್ಯಾಮೆರಾಮನ್ ಕೂಡ ಮೊಟ್ಟೆ ಬೀಳುವ ಮೊದಲು ಆ್ಯಸಿಡ್ ದಾಳಿ ಅಂದಿರುವ ಹಾಗೆ ಇರುವ ಕಾರಣಕ್ಕೆ ಇದೊಂದು ನಿಯೋಜಿತ ಕೃತ್ಯ ಎನ್ನುವ ಅನುಮಾನಗಳನ ್ನು ಮೂಡಿಸಿದೆ. ಇನ್ನು ಬೆಂಗಳೂರಿನಲ್ಲಿ ಬಹುತೇಕ ಎಲ್ಲಾ ಕಡೆಗಳಲ್ಲೂ ಸಿಸಿ ಕ್ಯಾಮೆರಾಗಳು ಇರುತ್ತವೆ. ಈ ಘಟನೆ ನಡೆದ ಸ್ಥಳದಲ್ಲಿ ಸಿಸಿಟಿವಿ ಇರಲಿಲ್ವಾ..? ಅನ್ನೋದು ಕೂಡ ಕೌತುಕ ಮೂಡಿಸಿದೆ.

ಒಂದು ಮೊಟ್ಟೆಯಲ್ಲಿ ಯಹಾರಿಗಾದರೂ ಹೊಡೆದರೆ ಸಣ್ಣ ಪ್ರಮಾಣದಲ್ಲಿ ನೋವಾಗುತ್ತದೆ ಅನ್ನೋದು ಸತ್ಯ. ಆದರೆ ಮುಖದ ಮೇಲೋ ಮೂಗಿನ ಮೇಲೋ ಬಿದ್ದಿದ್ದರೆ ನೋವಾಗಿದೆ ಎನ್ನಬಹುದಿತ್ತು. ಆದರೆ ಮುಂದಲೆ (ಮುಂದಿನ ತಲೆ) ಮೇಲೆ ಬಿದ್ದಿದೆ. ಅದು ದೊಡ್ಡ ಪ್ರಮಾಣದಲ್ಲಿ ಹಾನಿ ಆಗಿದೆ ಎಂದರೆ ನಂಬುವುದು ಅಸಾಧ್ಯದ ಮಾತು. ಹೀಗಿರುವಾಗ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾಗುವುದು..! ಸಿಟಿ ಸ್ಕ್ಯಾನ್ ಮಾಡಿಸುವುದು. ಅಡ್ಮಿಟ್ ಆಗುವುದು. ಇದೆಲ್ಲವನ್ನೂ ನೋಡಿದಾಗ ಮುನಿರತ್ನಂ ನಾಯ್ಡು ಅವರದ್ದು ನಾಟಕವೇ ಸರಿ ಎನ್ನುವಂತಹ ಅನುಮಾನಗಳು ಮೂಡುವುದು ಸಹಜ.
