• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಗುಣಾತ್ಮಕ ಚಿತ್ರಗಳ ಸಾಮ್ರಾಟ ಭಗವಾನ್‌ ನಿರ್ಗಮನ

ನಾ ದಿವಾಕರ by ನಾ ದಿವಾಕರ
February 20, 2023
in ಅಂಕಣ, ಸಿನಿಮಾ
0
ಗುಣಾತ್ಮಕ ಚಿತ್ರಗಳ ಸಾಮ್ರಾಟ ಭಗವಾನ್‌ ನಿರ್ಗಮನ
Share on WhatsAppShare on FacebookShare on Telegram

ಕನ್ನಡ ಚಿತ್ರರಂಗದಲ್ಲಿ ಗುಣಾತ್ಮಕತೆಗೆ ಹೊಸ ಸ್ವರೂಪ ಕೊಟ್ಟ ಜೋಡಿ ದೊರೆ-ಭಗವಾನ್‌

ADVERTISEMENT

ರಜತಪರದೆಯ ಮೇಲೆ ಕೌಟುಂಬಿಕ-ಗುಣಾತ್ಮಕತೆಯನ್ನು ಸೂಕ್ಷ್ಮ ದರ್ಶಕದ ಮೂಲಕ ಶೋಧಿಸಬೇಕಾದ ಕಾಲಘಟ್ಟದಲ್ಲಿ ಕನ್ನಡ ಚಿತ್ರರಂಗ ನಡೆಯುತ್ತಿರುವಾಗಲೇ ಕನ್ನಡದ ಮೇರು ನಿರ್ಮಾಪಕ-ನಿರ್ದೇಶಕರೊಬ್ಬರು ನಮ್ಮನ್ನು ಅಗಲಿದ್ದಾರೆ. ತಮ್ಮ 90ನೆಯ ವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯದಿಂದ ಇಹಲೋಕ ತೊರೆದ ಭಗವಾನ್‌ ಕಮರ್ಷಿಯಲ್‌ ಚಿತ್ರಗಳಿಗೆ ಕೌಟುಂಬಿಕ ಸ್ಪರ್ಶ ನೀಡುವ ಮೂಲಕ ಚಲನ ಚಿತ್ರಗಳು ಕೇವಲ ಮನರಂಜನೆಯ ಸಾಧನಗಳಲ್ಲ ಎಂದು ನಿರೂಪಿಸುವುದರಲ್ಲಿ ಯಶಸ್ವಿಯಾಗಿದ್ದರು. ಇವರ ಸಹವರ್ತಿ  ದೊರೆ ಅವರೊಂದಿಗೆ ಭಗವಾನ್‌  ನಿರ್ದೇಶಿಸಿದ 30ಕ್ಕೂ ಹೆಚ್ಚು ಚಿತ್ರಗಳು ಕಮರ್ಷಿಯಲ್‌ ಎನಿಸಿದ್ದರೂ, ಅವರು ಆಯ್ಕೆ ಮಾಡಿದ ಕಥಾವಸ್ತು ಮತ್ತು ಕಾದಂಬರಿಗಳು ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿತ್ತು.

1960ರ ನಂತರ, ಕನ್ನಡ ಚಿತ್ರರಂಗ ಭಕ್ತಿ ಪ್ರಧಾನ, ಪೌರಾಣಿಕ-ಚಾರಿತ್ರಿಕ ಕಥಾವಸ್ತುಗಳಿಂದ ದೂರ ಸರಿದು ಸಾಮಾಜಿಕ ಕಥಾಹಂದರವನ್ನೊಳಗೊಂಡ, ಸಂದೇಶಾತ್ಮಕ ಚಿತ್ರಕಥೆಗಳ ಯುಗಕ್ಕೆ ಕಾಲಿಟ್ಟಿತ್ತು. 1960 ರಿಂದ 80ರವರೆಗಿನ ಎರಡು ದಶಕಗಳನ್ನು ಕನ್ನಡ ಚಿತ್ರರಂಗದ ಸುವರ್ಣ ಯುಗ ಎಂದು ಕರೆದರೂ ಅತಿಶಯೋಕ್ತಿಯಾಗಲಾರದು. ಏಕೆಂದರೆ ಈ ಇಪ್ಪತ್ತು ವರ್ಷಗಳಲ್ಲಿ ಕನ್ನಡದ ಮೇರು ನಟ ಡಾ ರಾಜಕುಮಾರ್‌ ತಮ್ಮ ಅಭಿನಯ ಕೌಶಲ ಹಾಗೂ ಭಾವಪೂರ್ಣ ನಟನೆಯ ಮೂಲಕ , ಭವಿಷ್ಯದ ಚಿತ್ರರಂಗಕ್ಕೆ ಒಂದು ಮಾರ್ಗದರ್ಶಿ ಸೂತ್ರವನ್ನು ನೀಡಿದ್ದರು. ಈ ಸೂತ್ರದ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸಿದ ನಿರ್ದೇಶಕರ ಪೈಕಿ ದೊರೆ-ಭಗವಾನ್‌ ಬಹುಶಃ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ದಿವಂಗತ ಪುಟ್ಟಣ್ಣ ಕಣಗಾಲ್ ಮತ್ತೋರ್ವ ನಿರ್ದೇಶಕರು.

ಒಟ್ಟು ಮೂವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ದೊರೆ-ಭಗವಾನ್‌ ಜೋಡಿ 12 ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ಮಿಸಿರುವುದು ಅವರ ವೈಯಕ್ತಿಕ ಹೆಗ್ಗಳಿಕೆ ಮಾತ್ರವೇ ಅಲ್ಲ, ಅದು ಕನ್ನಡ ಚಿತ್ರರಂಗದ ಹೆಗ್ಗಳಿಕೆಯೂ ಹೌದು. ಕೌಟುಂಬಿಕ ಜಗಳ, ಸೋದರರ ನಡುವಿನ ಭಿನ್ನಾಭಿಪ್ರಾಯ, ಆಸ್ತಿ ಹಂಚಿಕೆಯ ವಿವಾದ, ಹರೆಯದ ಪ್ರೇಮಿಗಳ ಸಂಕಷ್ಟಗಳು, ಇವುಗಳ ನಡುವೆ ನುಸುಳುವ ಜಾತಿ-ಸಂಪತ್ತು-ಅಂತಸ್ತು ಮತ್ತು ಬಡತನ ಶ್ರೀಮಂತಿಕೆಯ ನಡುವಿನ ಸಂಘರ್ಷಗಳು ಹಾಗೂ ಸಮಾಜಘಾತುಕ ಶಕ್ತಿಗಳ-ಪಾತಕ ಜಗತ್ತು ಹಾಗೂ ಕಾನೂನು-ಪೊಲೀಸ್-ಆಡಳಿತ ವ್ಯವಸ್ಥೆಯ ನಡುವಿನ ಸಂಘರ್ಷಗಳು,  ಈ ಸೂತ್ರಗಳಿಲ್ಲದೆ ಚಲನಚಿತ್ರಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಭಾರತದ ಕಮರ್ಷಿಯಲ್‌ ಚಿತ್ರರಂಗಕ್ಕೆ ಈ ಸೂತ್ರಗಳೇ ಮೂಲಾಧಾರ ಎನ್ನುವುದನ್ನು ದಿಲೀಪ್‌ ಕುಮಾರ್-ರಾಜಕಪೂರ್‌ ಕಾಲದಿಂದ ದರ್ಶನ್‌- ಸುದೀಪ್‌ ಕಾಲದವರೆಗೂ ಗುರುತಿಸಬಹುದು.

ಈ ಕಮರ್ಷಿಯಲ್‌ ಸೂತ್ರಾಧಾರಿತ ಚಿತ್ರಗಳ ನಡುವೆಯೇ, ಸಿನಿಮಾ ಮಾರುಕಟ್ಟೆಯ ವಾಣಿಜ್ಯ ಲಕ್ಷಣಗಳನ್ನು ಉಳಿಸಿಕೊಂಡೇ, ಉತ್ತಮ ಸಾಂಸಾರಿಕ ಕಥಾವಸ್ತುವನ್ನು ರಜತಪರದೆಗೆ ಅಳವಡಿಸುವ ಜಾಣ್ಮೆ ಮತ್ತು ಕೌಶಲ ಕೆಲವರಿಗೆ ಮಾತ್ರವೇ ಒಲಿದಿರುವುದೂ ವಾಸ್ತವ. ಕನ್ನಡದ ಮಟ್ಟಿಗೆ ಇಂತಹ ನಿರ್ದೇಶಕರ ಪೈಕಿ ದೊರೆ-ಭಗವಾನ್‌ ಮೊದಲಿಗರಾಗಿ ಕಾಣುತ್ತಾರೆ. ಸಿನಿಮಾ ಸಮಾಜ ಪರಿವರ್ತನೆಯ ಮಾಧ್ಯಮವಾಗಲಾರದು ಆದರೆ ಸಮಾಜದಲ್ಲಿ ನಡೆಯುವ ದಿನನಿತ್ಯದ ಜಂಜಾಟಗಳನ್ನು ಮತ್ತು ಮಧ್ಯಮ ವರ್ಗದ ಕುಟುಂಬಗಳು ಸಾಂಸಾರಿಕ ನೆಲೆಯಲ್ಲಿ ಎದುರಿಸುವ ಗಂಭೀರ ಸಿಕ್ಕುಗಳನ್ನು ರಜತಪರದೆಯ ಮೇಲೆ ಹೃದಯಸ್ಪರ್ಶಿಯಾಗಿ ಬಿಂಬಿಸುವ ಮೂಲಕ, ಪ್ರೇಕ್ಷಕರಿಗೆ ಮತ್ತು ವಿಶಾಲ ಸಮಾಜಕ್ಕೆ , ಬದುಕನ್ನು ಈ ರೀತಿಯಲ್ಲಿ ಸಾಗಿಸಲೂ ಸಾಧ್ಯ ಎಂಬ ಸಂದೇಶ ನೀಡುವ ಶಕ್ತಿ ಸಿನಿಮಾ ಎಂಬ ಮಾಧ್ಯಮಕ್ಕೆ ಇದೆ. ಹಾಗೆಯೇ ಸಮಾಜದೊಳಗಿನ ಹುಳುಕುಗಳನ್ನು, ಅನಿಷ್ಠಗಳನ್ನು ಪರದೆಯ ಮೇಲೆ ಬಿಂಬಿಸುವ ಮೂಲಕ, ಸಮಾಜದಲ್ಲಿ ಸಂಯಮ, ಸಂವೇದನೆ ಮತ್ತು ಸೂಕ್ಷ್ಮತೆಗಳನ್ನು ಮೂಡಿಸುವ ಪ್ರಯತ್ನಗಳನ್ನು ಮಾಡಲು ಸಾಧ್ಯವಿದೆ.

ಇಂತಹ ಪ್ರಯತ್ನಗಳನ್ನು ಮಾಡಿದ ಕೆಲವೇ ನಿರ್ದೇಶಕರ ಪೈಕಿ ಇಂದು ನಿಧನರಾದ ಭಗವಾನ್‌ ಒಬ್ಬರು. ಸಂಗೀತ ಮತ್ತು ಚಿತ್ರಕಲೆಯಲ್ಲಿ ಆಸಕ್ತರಾಗಿದ್ದುಕೊಂಡು, ಛಾಯಾಗ್ರಾಹಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ದೊರೈರಾಜ್‌ ಮತ್ತು ರಂಗಭೂಮಿಯಲ್ಲಿ ಆಸಕ್ತರಾಗಿದ್ದ ಭಗವಾನ್‌ ವಿಭಿನ್ನ ಅಭಿರುಚಿಯನ್ನು ಹೊಂದಿದರವಾಗಿದ್ದರೂ ಅವರ ಜೋಡಿ ನಿರ್ಮಿಸಿದ ಚಿತ್ರಗಳು, ಕನ್ನಡ ಚಿತ್ರರಂಗದ ಅನರ್ಘ್ಯ ರತ್ನಗಳಾಗಿ ನಮ್ಮ ಮುಂದಿರುವುದು ಈ ನಿರ್ದೇಶಕ ಜೋಡಿಯ ಏಕಾಗ್ರತೆ ಮತ್ತು ಶ್ರದ್ಧೆಗೆ ಸಾಕ್ಷಿಯಾಗಿ ಕಾಣುತ್ತದೆ.  1956ರಲ್ಲಿ ಕಣಗಾಲ್‌ ಪ್ರಭಾಕರ ಶಾಸ್ತ್ರಿ ಅವರೊಂದಿಗೆ ʼ ಭಾಗ್ಯೋದಯ ʼ ಚಿತ್ರದ ಸಹಾಯಕ ನಿರ್ದೇಶಕರಾಗಿ ದುಡಿದ ಭಗವಾನ್‌ ನಂತರ ಡಾ ಅಭಿನಯದ ಮೇರು ಚಿತ್ರ ʼ ಸಂಧ್ಯಾರಾಗ ʼ ಎ. ಸಿ. ನರಸಿಂಹಮೂರ್ತಿ ಅವರೊಂದಿಗೆ ಸೇರಿ ನಿರ್ದೇಶಿಸಿದ್ದರು. ಟಿ. ವಿ. ಸಿಂಗ್‌ ಠಾಕೂರ್‌ ಅವರ ಗರಡಿಯಲ್ಲಿ ಪಳಗಿದ್ದ ಭಗವಾನ್‌ ದೊರೈ ಅವರೊಡನೆ ಸೇರಿ ನಿರ್ದೇಶಿಸಿದ ಮೊದಲ ಚಿತ್ರ ಡಾ. ರಾಜ್‌ ಅಭಿನಯದ ʼ ಜೇಡರಬಲೆ ʼ. ಇದು ಕನ್ನಡದ ಪ್ರಪ್ರಥಮ ಜೇಮ್ಸ್‌ ಬಾಂಡ್‌ ಚಿತ್ರ ಎಂಬ ಹಿರಿಮೆಗೂ ಪಾತ್ರವಾಗಿದೆ.

ಡಾ ರಾಜ್‌ ಪುಟ್ಟಣ್ಣ ಕಣಗಾಲ್‌ ಅವರೊಂದಿಗೆ ಸಾಕ್ಷಾತ್ಕಾರ ನಂತರ ಯಾವುದೇ ಚಿತ್ರಗಳಲ್ಲಿ ನಟಿಸಲಿಲ್ಲ. ಆದರೆ ರಾಜಕುಮಾರ್‌ ಅಭಿನಯ ಕೌಶಲ್ಯವನ್ನು ಹೊರಗೆಳೆದು, ಅತ್ಯುತ್ಕೃಷ್ಟ  ನಟನೆಯನ್ನು ರಜತಪರದೆಯ ಮೇಲೆ ಮೂಡಿಸುವ ನಿಟ್ಟಿನಲ್ಲಿ ದೊರೆ-ಭಗವಾನ್‌ ಯಶಸ್ವಿಯಾಗಿದ್ದರು.  ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ನಿರ್ದೇಶಕ ಜೋಡಿ ಎಂದೇ ಹೆಸರಾಗಿದ್ದ ದೊರೆ-ಭಗವಾನ್‌ ಡಾ ರಾಜ್‌ ಅಭಿನಯದಲ್ಲಿ ನಿರ್ದೇಶಿಸಿದ ಚಿತ್ರಗಳು ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹವು. ʼ  ಜೇಡರ ಬಲೆ ʼ ʼ ಗೋವಾದಲ್ಲಿ ಸಿಐಡಿ 999 ʼ  ʼಆಪರೇಷನ್‌ ಜಾಕ್‌ಪಾಟ್‌ನಲ್ಲಿ ಸಿಐಡಿ 999ʼ ಮತ್ತು ʼ ಆಪರೇಷನ್‌ ಡೈಮಂಡ್‌ ರಾಕೆಟ್‌ ʼ ಈ ನಾಲ್ಕು ಜೇಮ್ಸ್‌ ಬಾಂಡ್‌ ಚಿತ್ರಗಳನ್ನು ಹೊರತುಪಡಿಸಿದರೆ ಈ ಜೋಡಿ ನಿರ್ಮಿಸಿದ ಚಿತ್ರಗಳೆಲ್ಲವೂ ಸಾಂಸಾರಿಕ ಕಥಾ ಹಂದರವನ್ನೇ ಒಳಗೊಂಡಿದ್ದವು. ಡಾ ರಾಜ್‌ ಅವರೊಂದಿಗೆ ಸುಮಾರು  20 ಚಿತ್ರಗಳನ್ನು ನಿರ್ದೇಶಿಸಿದರೂ, ದೊರೆ-ಭಗವಾನ್‌ ʼ ಬಯಲು ದಾರಿ ʼ , ʼ ಚಂದನದ ಗೊಂಬೆ ʼ , ʼ ಬಿಡುಗಡೆಯ ಬೇಡಿ ʼ , ʼ ಬೆಂಕಿಯ ಬಲೆ ʼ ಚಿತ್ರಗಳ ಮೂಲಕ ಅನಂತನಾಗ್‌ ಅವರ ನಟನಾ ಕೌಶಲ್ಯವನ್ನೂ ಕನ್ನಡಿಗರಿಗೆ ಪರಿಚಯಿಸಿದ್ದರು. ʼ ಗಾಳಿಮಾತು ʼ ಚಿತ್ರದ ಜೈಜಗದೀಶ್‌ , ʼ ಮುನಿಯನ ಮಾದರಿ ʼ ಚಿತ್ರದ ಶಂಕರ್‌ ನಾಗ್‌, ʼ ನೀನು ನಕ್ಕರೆ ಹಾಲು ಸಕ್ಕರೆ ʼ ಚಿತ್ರದ ವಿಷ್ಣುವರ್ಧನ್‌, ಈ ನಾಯಕ ನಟರಿಗೆ ಒಂದು ವಿಶಿಷ್ಟ ನೆಲೆಯನ್ನು ಒದಗಿಸಿದವರಲ್ಲಿ ಈ ಜೋಡಿಯೂ ಒಂದು ಎನ್ನುವುದು ವಾಸ್ತವ.

ʼ ಸಂಧ್ಯಾರಾಗ ʼ ದಿಂದ ಆರಂಭಿಸಿ ʼ ಒಡಹುಟ್ಟಿದವರು ʼ ವರೆಗೂ ಮುಂದುವರೆದ ದೊರೆ-ಭಗವಾನ್‌ –ರಾಜಕುಮಾರ್‌ ಅವರ ಪಯಣದಲ್ಲಿ ಮೂಡಿಬಂದ ಚಿತ್ರಗಳೆಲ್ಲವೂ ಗುಣಾತ್ಮಕವಾಗಿ ಉತ್ತಮವಾಗಿದ್ದುದೇ ಅಲ್ಲದೆ, ಡಾ ರಾಜ್‌ ಅವರ ಮೇರು ಅಭಿನಯ ಮತ್ತು ಬಿಗಿಯಾದ ನಿರ್ದೇಶನಕ್ಕೆ ಸ್ಪೂರ್ತಿದಾಯಕವಾಗಿದ್ದವು. ಕಸ್ತೂರಿ ನಿವಾಸ, ಎರಡು ಕನಸು, ಸಮಯದ ಗೊಂಬೆ, ವಸಂತ ಗೀತ, ಹೊಸಬೆಳಕು,  ಜೀವನ ಚೈತ್ರ , ಒಡಹುಟ್ಟಿದವರು, ನಾನೊಬ್ಬ ಕಳ್ಳ ಈ ಚಿತ್ರಗಳು ಕನ್ನಡಿಗರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಕೊಡುಗೆಗಳು. ದಿವಂಗತ ಕಲ್ಪನಾ ಅವರ ಸಹಜ ಭಾವನಾತ್ಮಕ ಅಭಿನಯಕ್ಕೆ, ಪುಟ್ಟಣ್ಣ ಕಣಗಾಲ್‌ ಹೊರತುಪಡಿಸಿದರೆ,  ಎರಡು ಕನಸು ಮತ್ತು ಬಯಲುದಾರಿ ಚಿತ್ರಗಳ ಮೂಲಕ , ಒಂದು ಸ್ಪಷ್ಟ ರೂಪ ನೀಡಿದ್ದು ಸಹ ಇದೇ ಜೋಡಿ ಎನ್ನುವುದು ಗಮನಾರ್ಹ. ಕನ್ನಡದ ಅತ್ಯುತ್ತಮ ಕಾದಂಬರಿಗಳನ್ನು ಚಿತ್ರಕಥೆಗೆ ಅಳವಡಿಸಿ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪಿದ ಕೀರ್ತಿಯೂ ಈ ಜೋಡಿಗೆ ಸಲ್ಲಬೇಕಾಗುತ್ತದೆ.

ಚಲನ ಚಿತ್ರ ಅಥವಾ ರಜತ ಪರದೆ ಎನ್ನುವುದು ಕೇವಲ ಮನರಂಜನೆಯ ಸಾಧನಗಳಾಗದೆ, ಸಮಾಜದ ಒಳಸುಳಿಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ, ತನ್ಮೂಲಕ ಒಂದು ಸಕಾರಾತ್ಮಕ ಸಂದೇಶವನ್ನು ರವಾನಿಸುವ ಸಾಧನವಾಗಿಯೂ ಬಳಸಬಹುದು ಎಂಬ ಸಂದೇಶವನ್ನು ನೀಡಿದ ಕೀರ್ತಿಗೆ ಭಗವಾನ್‌ ಮತ್ತು ಅವರ ಒಡನಾಡಿ ದೊರೆ (ದೊರೈರಾಜ್)‌ ಭಾಜನರಾಗುತ್ತಾರೆ. ನಟನೆ, ಭಾವಾಭಿನಯ, ಪರಕಾಯಪ್ರವೇಶ, ಸಹಜಾಭಿನಯ ಈ ಎಲ್ಲ ಮೌಲ್ಯಗಳು ರಜತಪರದೆಯಿಂದ ದೂರವಾಗಿರುವ ಈ ಹೊತ್ತಿನಲ್ಲಿ, ಅಭಿನಯ ಕಲೆಗೆ ಸೂಕ್ತ ಕಥಾ ಹಂದರವನ್ನು ಕಲ್ಪಿಸಿ,, ಸಮರ್ಥವಾಗಿ ನಿರ್ದೇಶಿಸಿದ ಭಗವಾನ್‌ ಮತ್ತು ದೊರೆ ಕನ್ನಡ ಚಿತ್ರರಂಗದ ಮೇರು ನಿರ್ದೇಶಕರಾಗಿ ಅಷ್ಟೇ ಅಲ್ಲದೆ, ಸಹೃದಯ ಕಲಾಕಾರರಾಗಿಯೂ ಶಾಶ್ವತವಾಗಿ ನೆಲೆಸುತ್ತಾರೆ.  65 ವರ್ಷಗಳ ಯಶಸ್ವಿ ಚಿತ್ರ ಪಯಣ ಪೂರೈಸಿ, ವಿಶ್ರಮಿಸುತ್ತಿದ್ದ ಭಗವಾನ್‌ ತಮ್ಮ  ಒಡನಾಡಿ ದೊರೆ ಅವರನ್ನು ಹಿಂಬಾಲಿಸಿದ್ದಾರೆ. ಈ ಜೋಡಿ ನಿರ್ಮಿಸಿದ ಚಿತ್ರಗಳು ಸದಾ ಅವರನ್ನು ನೆನಪಿಸುತ್ತಲೇ ಇರುತ್ತವೆ. ದೊರೆ ಮತ್ತು  ಭಗವಾನ್‌ ಲೌಕಿಕ ಜಗತ್ತಿನಿಂದ ನಿರ್ಗಮಿಸಿದರೂ,  ಭಾವುಕ ಜಗತ್ತಿನಲ್ಲಿ ಸದಾ ಜೀವಂತಿಕೆಯಿಂದಿರುತ್ತಾರೆ.

ಕನ್ನಡ ಚಿತ್ರರಂಗದ ಗುಣಾತ್ಮಕತೆಗೆ ತಳಪಾಯ ಹಾಕಿದೆ ಮೇರು ನಿರ್ದೇಶಕರಿಗೆ ಅಂತಿಮ ನಮನ.

Tags: ಭಗವಾನ್‌
Previous Post

ಡಿ ರೂಪ ಕೇಳಿರುವ ಪ್ರಶ್ನೆಗಳು ನೈತಿಕವಾಗಿವೆ: ಐಪಿಎಸ್ ಅಧಿಕಾರಿ ಡಿ.ರೂಪ ಪರ ಸಂಸದ ಪ್ರತಾಪ್ ಸಿಂಹ

Next Post

ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ: ರೋಹಿಣಿ ಸಿಂಧೂರಿ

Related Posts

Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
0

ಸ್ಯಾಂಡಲ್ವುಡ್ ನ ಭರವಸೆಯ ನಟ ಕಿರಣ್ ರಾಜ್ ಹುಟ್ಟು ಹಬ್ಬದಂದು ಸಿಕ್ಕಿತು ಮತ್ತೊಂದು ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ ಮತ್ತು ಉದ್ಯೋನ್ಮುಖ ನಟ ಕಿರಣ್ ರಾಜ್,...

Read moreDetails

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

July 5, 2025

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

July 5, 2025
Next Post
ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ: ರೋಹಿಣಿ ಸಿಂಧೂರಿ

ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ: ರೋಹಿಣಿ ಸಿಂಧೂರಿ

Please login to join discussion

Recent News

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 5, 2025

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada