ದೇಶದ ಅತಿದೊಡ್ಡ ರಾಬರಿ ಬಯಲು: 400 ಕೋಟಿ ಎಲ್ಲಿ ಹೋಯ್ತು..?: ಮೂರು ರಾಜ್ಯಗಳಿಗೆ ಲಿಂಕ್, ಏನಿದು ಕೋಟಿ ಕೋಟಿ ದೋಣಿದ ಕಥೆ..?
ಬೆಂಗಳೂರು: ಇಡೀ ದೇಶವೇ ಬೆಚ್ಚಿಬೀಳಿಸುವ ದೇಶದ ಅತಿದೊಡ್ಡ ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಮೂರು ರಾಜ್ಯಗಳಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಎರಡು ಕಂಟೇನರ್ ನಲ್ಲಿ ಅಕ್ರಮವಾಗಿ ಸಾಗ್ತಿಸುತ್ತಿದ್ದ 400ಕೋಟಿ ಹಣ ದರೋಡೆಯಾಗಿರುವ ದೂರು ದಾಖಲಾಗಿದೆ. ಹೀಗಾಗಿ ಎರಡು ಕಂಟೇನರ್ ಹುಡುಕಾಟಕ್ಕೆ ಕರ್ನಾಟಕ ಗೋವಾ ಹಾಗೂ ಮಹಾರಾಷ್ಟ್ರ ಮೂರು ರಾಜ್ಯಗಳ ಪೊಲೀಸರು! ಇಳಿದಿದ್ದಾರೆ.
ದರೋಡೆಯಾಗಿದೆ ಎನ್ನಲಾಗಿರುವ 400ಕೋಟಿ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟನಲ್ಲಿ ದರೋಡೆ ನಡೆದಿತ್ತು. ಆದರೆ ಇದು ತಡವಾಗಿ ಬೆಳಕಿಗೆ ಬಂದಿದೆ.

ಪ್ರಮುಖವಾಗಿ ಗೋವಾದಿಂದ ಕಂಟೇನರ್‌ನಲ್ಲಿ ನಾಲ್ಕುನೂರು ಕೋಟಿ ರೂಪಾಯಿ ಸಾಗಾಟದ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರ ನಿದ್ದೆಗೆಡಿಸಿದೆ. ಕಳೆದ 2025ರ ಅಕ್ಟೋಬರ್ 16 ರಂದು ನಡೆದಿದ್ದ ಈ ರಾಬರಿ ಪ್ರಕರಣ ಇದೀಗ ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.
ಅತ್ಯಂತ ದೊಡ್ಡ ದರೋಡೆ ಪ್ರಕರಣವಾಗಿರುವ ಇದನ್ನು ಖುದ್ದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಕರಣದ ಕುರಿತು ತ್ವರಿತ ತನಿಖೆಗೆ ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಎಂಬುವವರಿಗೆ ಸೇರಿದ ಹಣ ಇದಾಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ರಾಬರಿ ಬಯಲಾಗಿದ್ದೆ, ರಣರೋಚಕ..!

ಇನ್ನೂ ದೇಶದ ಅತಿದೊಡ್ಡ ರಾಬರಿ ಪ್ರಕರಣ ಬೆಳಕಿಗೆ ಬಂದಿರೋದೇ ರಣರೋಚಕವಾಗಿದೆ. ಕಂಟೇನರ್ ದರೋಡೆಯ ನಂತರ ನಾಸಿಕ್ ಮೂಲದ ಸಂದೀಪ್ ಪಾಟೀಲ್ ಎನ್ನುವ ವ್ಯಕ್ತಿಯನ್ನು ಅಪಹರಣ ಮಾಡಲಾಗಿತ್ತು. ಗನ್ ಪಾಯಿಂಟ್ ಹಿಡಿದು ಬಿಲ್ಡರ್ ಕಿಶೋರ್ ಸಾಳ್ವೆ ಸಹಚರರು ಈ ಅಪಹರಣಕ್ಕೆ ಕಾರಣರಾಗಿದ್ದರು.
ಸಂದೀಪ್ ನನ್ನು ಒಂದೂವರೆ ತಿಂಗಳ ಒತ್ತೆಯಾಳಾಗಿಸಿಕೊಂಡು ಸಂದೀಪ್‌ಗೆ ಆರೋಪಿಗಳು ಚಿತ್ರಹಿಂಸೆ ನೀಡಿದ್ದರು.
ಕಂಟೇನರ್ ಹೈಜಾಕ್‌ಗೆ ನೀನೇ ಕಾರಣ ಎಂದು ಸಂದೀಪ್‌ಗೆ ಕಿಶೋರ್ ಸಹಚರರ ಕಿರುಕುಳ ನೀಡಿ, ಹಣದ ದರೋಡೆಗೆ ನೀನೇ ಕಾರಣ. 400 ಕೋಟಿ ರೂಪಾಯಿ ಕೊಡದಿದ್ರೆ, ನಿನ್ನ ಜೀವವೇ ಇರಲ್ಲ ಎಂದು ಬೆದರಿಕೆ ಹಾಕಿದ್ದರು.
ಸಂದೀಪ್ ಹೇಗೋ ಮಾಡಿ ಅಪಹರಣಕಾರರಿಂದ ತಪ್ಪಿಸಿಕೊಂಡು ತಕ್ಷಣ ನಾಸಿಕ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಲ್ಕು ನೂರು ಕೋಟಿ ದರೋಡೆಯ ಉಲ್ಲೇಖ..!

ಸಂದೀಪ್ ಪಾಟೀಲ್ ತಮ್ಮ ದೂರಿನಲ್ಲಿ ನಾಲ್ಕುನೂರು ಕೋಟಿ ರೂಪಾಯಿ ಹಣದ ವಾಹನ ಅಪಹರಿಸಿರುವುದು ಉಲ್ಲೇಖಿಸಿದ್ದಾರೆ.
ಈ ದೂರಿನನ್ವಯ ಐವರು ಆರೋಪಿಗಳ ಬಂಧನವಾಗಿದ್ದು, ಇಬ್ಬರಿಗಾಗಿ ಹುಡುಕಾಟ ನಡೆದಿದೆ. ಪ್ರಮುಖವಾಗಿ ಈ ಕೋಟ್ಯಂತರ ರೂಪಾಯಿ ದರೋಡೆಯ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಬಂಧನದ ಬಳಿಕವೇ ಕಂಟೇನರ್ ಹೈಜಾಕ್ ಪ್ರಕರಣ ಸುಖಾಂತ್ಯವಾಗುವ ಸಾಧ್ಯತೆಗಳಿವೆ.
ಮಹಾ ಚುನಾವಣೆಯಲ್ಲಿ ಹರಿಯಿತಾ ಈ ಹಣದ ಹೊಳೆ..?
ಅಲ್ಲದೆ ಈ ದರೋಡೆ ಪ್ರಕರಣ ಸಾಮಾನ್ಯವಾಗಿದ್ದಲ್ಲ, ಯಾಕೆಂದರೆ ಇದು ದೊಡ್ಡವರ ಕೈವಾಡವಿಲ್ಲದೆ ನಡೆಯುವ ಕೆಲಸವಲ್ಲ. ಇದರಲ್ಲಿ ಪ್ರಭಾವಿಗಳ ಪಾಲು ಇರಬಹುದು ಎಂಬ ಚರ್ಚೆಯು ಎಲ್ಲೆಡೆ ಜೋರಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ನಡೆದ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈ ಅಪಾರ ಪ್ರಮಾಣದ ಹಣದ ಹೊಳೆ ಹರಿಯಿತಾ ಎಂಬ ಚರ್ಚೆಗಳು ಇನ್ನೊಂದು ಆಯಾಮದಲ್ಲಿ ಹುಟ್ಟಿಕೊಂಡಿವೆ.
ಬೆಳಗಾವಿ ಎಸ್ ಪಿಗೆ ಸಹಕಾರಕ್ಕೆ ಮನವಿ..

ಇನ್ನೂ ಈ ದರೋಡೆ ಪ್ರಕರಣ ಭೇದಿಸಲು ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಜಿಲ್ಲೆಯ ಎಸ್ ಪಿ ಅವರಲ್ಲಿ ಮನವಿ ಮಾಡಿದೆ. ಪ್ರಕರಣದ ತನಿಖೆಯಲ್ಲಿ ಸಹಕಾರ ನೀಡುವಂತೆ ಕೋರಿದೆ.











