ಬೆಂಗಳೂರು / ದೆಹಲಿ : ಕಾಂಗ್ರೆಸ್ನಲ್ಲಿ ಸಿಎಂ ಆಯ್ಕೆ ವಿಚಾರದ ನಿ ಕೊಡೆ ನಾ ಬಿಡೆ ಎಂಬ ಸ್ಥಿತಿಗೆ ತಲುಪಿದೆ. ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಸಿಎಂ ಸ್ಥಾನಕ್ಕಾಗಿ ಪಟ್ಟು ಸಡಿಲಿಸದೇ ಕೂತಿದ್ದಾರೆ. ಇದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಹೊಸ ಪ್ಲಾನ್ ರೂಪಿಸಿದ್ದು 30 ತಿಂಗಳ ಅವಧಿಗೆ ಇಬ್ಬರಿಗೂ ಸಿಎಂ ಸ್ಥಾನ ಹಂಚಲು ತೀರ್ಮಾನಿಸಿದೆ.
ಆದರೆ ಈ 30 ತಿಂಗಳ ಆಡಳಿತಕ್ಕೆ ಡಿ.ಕೆ ಶಿವಕುಮಾರ್ ಸುತಾರಾಂ ನೋ ಎಂದಿದ್ದಾರೆ ಎನ್ನಲಾಗಿದೆ. ನಾನು ಈ ಬಾರಿ ಕಷ್ಟಪಟ್ಟು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೇನೆ. ಹೀಗಾಗಿ ನನಗೆ ಸಿಎಂ ಸ್ಥಾನ ಬೇಕೆಂದು ಹಠ ಸಾಧಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಸಿದ್ದರಾಮಯ್ಯ ಕೂಡ ಅಧಿಕಾರ ಹಂಚಿಕೆಗೆ ವಿರೋಧ ಸೂಚಿಸಿದ್ದು ಕಾಂಗ್ರೆಸ್ ಹೈಕಮಾಂಡ್ಗೆ ತಲೆನೋವು ಬಗೆಹರಿಯುವ ಯಾವ ಸೂಚನೆ ಸಿಗುತ್ತಿಲ್ಲ.