ಮೈಸೂರು : ಮೇ೨೯: ಕೇವಲ 15 ದಿನದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಟೇಕ್ ಆಫ್ ಆಗಿದೆ. 34 ಮಂತ್ರಿಗಳ ಸಂಪೂರ್ಣ ಸರ್ಕಾರ ರಚನೆಯಾಗಿದೆ. ದೇಶದಲ್ಲಿ ಇದೇ ಮೊದಲು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಅವರು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಗ್ಯಾರಂಟಿ ಯೋಜನೆ ವಿಚಾರದಲ್ಲಿ ನಮಗೆ ಯಾವುದೇ ಅನುಮಾನಗಳಿಲ್ಲ. ಕೆಲ ಬಿಜೆಪಿ ಮುಖಂಡರು ತಮ್ಮ ಅಸ್ತಿತ್ವಕ್ಕೆ, ನೀರಿಲ್ಲದೆ ಬೋಟು ಓಡಿಸುವವರಿಗೆ ಅನುಮಾನವಿದೆ. ನಮ್ಮ ವಿರುದ್ದ ಟ್ರೆಂಡ್ ಕ್ರಿಯೇಟ್ ಮಾಡಲು ಹೊರಟಿದ್ದಾರೆ. ನೈತಿಕತೆ, ಮಾನ, ಮರ್ಯಾದೆ ಇದ್ದರೆ ಬಿಜೆಪಿಯವರು 2018ರ ಎಷ್ಟು ಭರವಸೆ ಈಡೇರಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಸಂಸದ ಪ್ರತಾಪಸಿಂಹ ಚುನಾವಣೆ ವೇಳೆ ಎಲ್ಲಿ ಹೋಗಿದ್ದರು? ವರುಣದಲ್ಲಿ ತೊಡೆ ತಟ್ಟಿಕೊಂಡು ಬೆಂಕಿ ಹಚ್ಚಲು ಹೋಗಿದ್ದರು. ನಿಮ್ಮ ಜಿಲ್ಲೆಯ 8 ಕ್ಷೇತ್ರದ ಕಥೆ ಏನು ಆಯ್ತು? ಕ್ಷೇತ್ರಗಳಿಗೆ ಹೋದರೆ ಸಂಸದ ಪ್ರತಾಪ್ ಸಿಂಹಗೆ ಕಲ್ಲು ಹೊಡೆಯುತ್ತಾರೆ. ಓಡಿಸಿಕೊಂಡು ಬಂದು ಕಲ್ಲು ಹೊಡೆಯುತ್ತಾರೆ. ನಿಮಗೆ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸುಮ್ಮನೆ ಮಾತನಾಡಲ್ಲ. 5 ಗ್ಯಾರಂಟಿ ಯೋಜನೆ ರಾಜ್ಯದಲ್ಲಿ ಜಾರಿಗೆ ಬರಲಿದೆ. ಇದಕ್ಕೆ ಡೆಡ್‌ಲೈನ್ ಕೊಡಲು ಪ್ರತಾಪ್ ಸಿಂಹ ಯಾರು? 15 ಲಕ್ಷ ಪ್ರತಿ ಖಾತೆಗೆ ಹಾಕುತ್ತೇವೆ ಅಂದರು ಯುವಕರಿಗೆ ಉದ್ಯೋಗ ಸೃಷ್ಟಿ ಏನಾಯಿತು? ಪ್ರತಿಯೊಬ್ಬರಿಗೆ ಕುಡಿಯುವ ನೀರಿನ ಯೋಜನೆ ಏನಾಯ್ತು? ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಬಿಜೆಪಿಯವರಿಗೆ ಪ್ರಶ್ನೆ ಮಾಡಿದ್ದಾರೆ.
ಬೆಂಕಿ ಹಚ್ಚುವುದು ಬಿಟ್ಟರೆ ಮೈಸೂರಿಗೆ ನಿಮ್ಮ ಕೊಡುಗೆ ಏನು?
ಸಂಸದ ಪ್ರತಾಪ್ ಸಿಂಹ 2014ರಲ್ಲಿ ನೀಡಿದ ಭರವಸೆಗಳು ಏನಾದವೂ? ಜೂನ್ 1ಕ್ಕೆ ನಿಮ್ಮ ಕಚೇರಿಗೆ ಬರುತ್ತೇನೆ. ಈ ಭರವಸೆಗಳಿಗೆ ಉತ್ತರ ಕೊಡಲೇಬೇಕು. ಬೆಂಕಿ ಹಚ್ಚುವುದು ಬಿಟ್ಟರೆ ಮೈಸೂರಿಗೆ ನಿಮ್ಮ ಕೊಡುಗೆ ಏನು? ವಿ.ಸೋಮಣ್ಣ ಅವರನ್ನು ಬಲಿಕಾ ಬಕ್ರಾ ಮಾಡಿದಿರಿ. ಆ ಸಮುದಾಯ ಈಗಲಾದರೂ ಅರ್ಥ ಮಾಡಿಕೊಳ್ಳಬೇಕು.

ಸಿದ್ದರಾಮಯ್ಯ ಕಾಲು ಹಿಡಿಯಲು ಸಿದ್ದ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ವರುಣದಲ್ಲಿ ಯಾವ ರೀತಿ ಮಾತನಾಡಿದಿರಿ? ಯಾವ ರೀತಿ ಬೆಂಕಿ ಹಚ್ಚಲು ಪ್ರಯತ್ನಪಟ್ಟಿರಿ, ಜಾತಿ ಜಾತಿಗಳನ್ನು ಬೇರೆ ಮಾಡುವ ಕೆಲಸ ಮಾಡಿದಿರಿ. ಸಿದ್ದರಾಮನ ಹುಂಡಿಯಲ್ಲಿ ನೀವೆ ಗಲಾಟೆ ಸೃಷ್ಟಿ ಮಾಡಿದ್ದೀರಿ. ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿದಿರಿ. ಮಧ್ಯರಾತ್ರಿ 1 ಗಂಟೆಯವರೆಗೂ ಒಂದು ರೀತಿ ಕಾಫಿ, ಟೀ, 1 ಗಂಟೆ ನಂತರ ಬೇರೆ ರೀತಿ ಕಾಫಿ, ಟೀ ಕುಡಿದು ಪ್ರಯತ್ನ ಮಾಡಿದ್ದೀರಿ ಎಂದರು.
೨.೫೦ ಲಕ್ಷ ಮತಗಳ ಅಂತರದಲ್ಲಿ ನಿಮ್ಮನ್ನು ಸೋಲಿಸುತ್ತಾರೆ.
2024 ಪ್ರತಾಪ್ ಸಿಂಹ ಅವರ ಅಂತಿಮ ಯಾತ್ರೆ, ಎರಡೂವರೆ ಲಕ್ಷ ಮತಗಳ ಅಂತರದಲ್ಲಿ ನಿಮ್ಮನ್ನು ಸೋಲಿಸುತ್ತಾರೆ. ಪ್ರತಾಪ್ ಸಿಂಹ ಒಬ್ಬಂಟಿಯಾಗಿದ್ದಾರೆ. ಗ್ಯಾರಂಟಿ ಬಗ್ಗೆ ಮಾತನಾಡಲು ನೀನು ಯಾರು ದೊಣ್ಣೆ ನಾಯಕ ? ನಮ್ಮ ನಮ್ಮ ನಡುವೆ ತಂದಿಕ್ಕುವ ಕೆಲಸ ಮಾಡಬೇಡಿ. ನಿಮ್ಮ ಅಪ್ಪನ ಮನೆಯ ದುಡ್ಡಾ? ನಾಳೆನೆ ಕೊಡಬೇಕು ಅನ್ನೋಕೆ? ಎಂದು ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.
ನಳೀನ್ ಕುಮಾರ್ ಕಟೀಲು ದೊಡ್ಡ ಕಮಿಡಿಯನ್
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ದೊಡ್ಡ ಕಮಿಡಿಯನ್, ಪ್ರಧಾನಿ ನರೇಂದ್ರ ಮೋದಿ ವಿಶ್ವಗುರು ಕರೆದುಕೊಂಡು ಬಂದಿರಿ. ಪ್ರಧಾನಿ ಮೋದಿ ಕೈ ತೋರಿಸಿ ನಮ್ಮ ಪರ ಪ್ರಚಾರ ಮಾಡಿದರು. ಮೋದಿ ಟೆಲಿ ಪ್ರಿಂಟರ್ ಇದ್ದರೆ ಮಾತ್ರ ಮಾತನಾಡುವುದು ಎಂದರು.
ಜೆಡಿಎಸ್ ಜೋಕರ್ ಪಕ್ಷ
ಜೆಡಿಎಸ್ ಜೋಕರ್ ಪಕ್ಷ, ಅದನ್ನು ಮುಗಿಸಲು ಬಿಜೆಪಿ ಕಾರಣ. ಅದಕ್ಕೆ ಬಿಜೆಪಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜೆಡಿಎಸ್ ವಿಸರ್ಜನೆ ಏಕೆ ಮಾಡಿಲ್ಲ? ಮೈ ಕೈ ಪರಚಿಕೊಳ್ಳುವುದನ್ನು ಬಿಟ್ಟು ವಿಸರ್ಜನೆ ಮಾಡಿ. 19 ಶಾಸಕರನ್ನು ಉಳಿಸಿಕೊಳ್ಳುವುದನ್ನು ಮಾಡಿ. 10 ರಿಂದ 12 ಜನ ಜೆಡಿಎಸ್‌ನಿಂದ ಹೊರ ಹೋಗಲು ಮುಂದಾಗಿದ್ದಾರೆ. ಜೆಡಿಎಸ್ ಕಥೆ ಮುಗಿದಿದೆ, ಜೆಡಿಎಸ್ ಮುಗಿದ ಅಧ್ಯಾಯ. ಜೆಡಿಎಸ್‌ನ್ನು ಇನ್ನು ಮುಂದೆ ಯಾರು ನಂಬುವುದಿಲ್ಲ ಎಂದರು.

ಮೈಸೂರಿನಲ್ಲಿ ನಿಮ್ಮದು ಏನು ನಡೆಯಲ್ಲ. ಏನಾದರೂ ಮಾಡಿದರೆ ರೌಡಿ ಶೀಟರ್ ತೆರೆಯಲಾಗುತ್ತದೆ. ಅಡ್ಡಂಡ ಕಾರ್ಯಪ್ಪಗೆ ಎಂ.ಲಕ್ಷ್ಮಣ ಎಚ್ಚರಿಕೆ. ಹಿಂದೆ ಆತನ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಅಡ್ಡಂಡ ಉದ್ದುದ್ದ ಕಾರ್ಯಪ್ಪ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಆ ದೂರು ಏನಾಗಿದೆ? ಕೂಡಲೇ ಎಫ್ ಐ ಆರ್ ದಾಖಲಿಸಿ, ಅಶ್ವಥ್ ನಾರಾಯಣ್ ವಿರುದ್ದ ಎಫ್‌ಐಆರ್ ದಾಖಲಾಗಿದೆ. ಕೂಡಲೇ ಅಶ್ವಥ್ ನಾರಾಯಣ್ ಅವರನ್ನು ಬಂಧಿಸಬೇಕು. 24 ಗಂಟೆಯಲ್ಲಿ ಅಶ್ವಥ್ ನಾರಾಯಣ್ ಬಂಧಿಸದಿದ್ದರೆ ಐಜಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ. ಪೊಲೀಸರ ಆಟ ಮುಂದೆ ನಡೆಯಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದಂತೆ ಮಾಡಬೇಡಿ. ಯಾರ ಪರವಾಗಿ ಯಾರ ಒತ್ತಾಯಕ್ಕೆ ಕೆಲಸ ಮಾಡುವುದನ್ನು ಬಿಡಿ. ಒತ್ತಡಕ್ಕೆ ಒಳಗಾಗಿ ಕೆಲಸ ಮಾಡಬೇಡಿ ಎಂದು ಪೊಲೀಸರಿಗೆ ಸಲಹೆ ನೀಡಿದರು.

ದ್ವೇಷದ ರಾಜಕಾರಣ ಮಾಡುತ್ತಿರುವುದು ಬಿಜೆಪಿಯವರು, ರಾಜ್ಯದಾದ್ಯಂತ ಬಿಜೆಪಿಯಿಂದ ಸಿದ್ದರಾಮಯ್ಯ ವಿರುದ್ದ 42 ಪ್ರಕರಣಗಳು ದಾಖಲಿಸಿದೆ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಮೇಲೆ ಪ್ರಕರಣ ದಾಖಲಿಸಿದ್ದೀರಾ? ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ.