ಬೆಂಗಳೂರು : ಮೇ.೨೯ : ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದ್ದು, ಬಿಜೆಪಿ ನಾಯಕರ ಪ್ರಕಾರ ದೇಶದಲ್ಲಿ ನ್ಯಾಯ ಕೇಳುವುದು ಹಾಗೂ ತಪ್ಪು ಮಾಡಿದವರನ್ನ ಪ್ರಶ್ನೆ ಮಾಡುವುದು ದೇಶದ್ರೋವಾಗಿ ಬದಲಾಗಿದೆಯೇ ಎಂದು ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಕೃಷಿ ಕಾಯ್ದೆ ವಿರುದ್ಧ ಪ್ರತಿಭಟಿಸಿದವರು – ದೇಶದ್ರೋಹಿಗಳು – ಸಿಎಎ, ಎನ್ಆರ್‌ಸಿ ವಿರುದ್ಧ ಪ್ರತಿಭಟಿಸಿದವರು – ದೇಶದ್ರೋಹಿಗಳು , ಅತ್ಯಾಚಾರಿಯ ವಿರುದ್ಧ ನ್ಯಾಯ ಕೇಳುವ ಕ್ರೀಡಾಪಟುಗಳು – ದೇಶದ್ರೋಹಿಗಳು. ಇದು ಬಿಜೆಪಿಯ ವರಸೆ. ಬಿಜೆಪಿ ಪ್ರಕಾರ “ನ್ಯಾಯ” ಕೇಳುವುದು ಹಾಗೂ ಪ್ರಶ್ನಿಸುವುದು ದೇಶದ್ರೋಹವಾಗಿ ಬದಲಾಗಿದೆಯೇ? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.
ನಿನ್ನೆ ದೆಹಲಿಯ ಜಂತರ್ ಮಂತರ್ ನಲ್ಲಿ ಭಾರತೀಯ ಕುಸ್ತಿ ಅಸೋಸಿಯೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಟನೆ ನಡೆಸುತ್ತಿದ್ದ ಕುಸ್ತಿಪಟುಗಳನ್ನ ದೆಹಲಿ ಪೊಲೀಸರು ಬಂಧಿಸಿ, ಅವರ ವಿರುದ್ಧ ಎಫ್ ಐಆರ್ (FIR) ದಾಖಲಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಯಾಗಿತ್ತು.