ಸ್ಯಾಂಡಲ್ ವುಡ್ ನ (sandalwood) ಮೋಸ್ಟ್ ಸಕ್ಸಸ್ ಫುಲ್ ಸ್ಟಂಟ್ ಮಾಸ್ಟರ್ (stunt master) ಅಂತ ಗುರುತಿಸಿಕೊಂಡಿರುವ ರವಿವರ್ಮ (ravi varma) ಮತ್ತು ಡಿಫ್ರೆಂಟ್ ಡ್ಯಾನಿ ಫೈಟ್ (different Dabi ) ಮಾಸ್ಟರ್ ನಡುವೆ ಜೋರು ಫೈಟ್ (Fight)ಶುರು ಆಗಿದೆ .ಇದಕ್ಕೆ ಕಾರಣ ಜಾಕಿ (Jackie)ಸಿನಿಮಾ ಇದೇ 15ನೇ ತಾರೀಕು ಜಾಕಿ ಸಿನಿಮಾ ರೀ-ರಿಲೀಸ್ (Re-release) ಆಗ್ತಿದ್ರೋದು. 14 ವರ್ಷದ ಹಿಂದೆ ತೆರೆಕಂಡು ಸೂಪರ್ ಡೂಪರ್ ಹಿಟ್ ಆಗಿದ್ದ ಜಾಕಿ ಇದೀಗ ಅಪ್ಪು (Puneeth raj kumar) ಸ್ಮರಣಾರ್ಥ ಮತ್ತೆ ಮಾರ್ಚ್ ೧೫ರಂದು ರಿಲೀಸ್ ಆಗ್ತಿದೆ. ಆದ್ರೆ ಈ ಸಂದರ್ಭದಲ್ಲಿ ಸಿನಿಮಾದ ಫೈಟ್ ಒಂದಕ್ಕೆ ಸಂಬಂಧಪಟ್ಟ ಹಾಗೆ ಈ ಇಬ್ಬರ ನಡುವೆ ಕ್ರೆಡಿಟ್ ವಾರ್ (credit war ) ಶುರುವಾಗಿದೆ.

ಸ್ಟಂಟ್ ಮಾಸ್ಟರ್ (stunt master) ಡಿಫರೆಂಟ್ ಡ್ಯಾನಿ (different dani) ಮಾಡುತ್ತಿರುವ ಆರೋಪದ ಪ್ರಕಾರ ತಮ್ಮ ಆಪ್ತರಿಗೆ ರವಿವರ್ಮ (ravi varma) ಕರೆ ಮಾಡಿ ಡಿಫರೆಂಟ್ ಡ್ಯಾನಿಯನ್ನ ಮುಗಿಸಿಬಿಡ್ತೀನಿ ಅಂತ ಕೊಲೆ ಬೆದರಿಕೆ(death threat ) ಹಾಕಿದ್ದಾರಂತೆ ಇದಕ್ಕೆ ಕಾರಣ ಜಾಕಿ (jackie) ಸಿನಿಮಾದಲ್ಲಿ ಸಂಯೋಜನೆಗೊಂಡಿರುವಂತಹ ಒಂದು ಫೈಯರ್ ಫೈಟ್ (Fire fight) ಸ್ಟಂಟ್ ಸೀಕ್ವೆನ್.

ಬೇರೆ ಇಂಡಸ್ಟ್ರಿಗಳಲ್ಲಿ ಜಾಕಿ ಸಿನಿಮಾದ ಈ ಫೈರ್ ಫೈಟ್(fire fight) ಸ್ವತಹ ತಾನೆ ಕಂಪೋಸ್ ಮಾಡಿದ್ದು ಅಂತ ರವಿವರ್ಮ (ravi varma) ಹೇಳಿಕೊಂಡಿದ್ದಾರಂತೆ . ಇದು ಡಿಫರೆಂಟ್ ಡ್ಯಾನಿಯವರಿಗೆ (different dani) ಬೇಸರ ತರಿಸಿದ್ದು ಇಲ್ಲಿಂದ ವಿವಾದ ಶುರುವಾಗಿದೆ. ಈಗ ಜಾಕಿ ರಿಲೀಸ್ ಆಗ್ತಾ ಇರೋದ್ರಿಂದ ಒಂದಷ್ಟು ಸಂದರ್ಶನದಲ್ಲಿ (interviews) ರವಿವರ್ಮ ನನ್ನ ಕೆಲಸದ ಬಗ್ಗೆ ಟೀಕಿಸುವ ಹಾಗೆ ಮಾತಾಡಿದ್ದಾರೆ ಮತ್ತು ನನ್ನ ಕೆಲಸವನ್ನು ಅವರ ಕಂಪೋಸಿಷನ್ ಅಂತ ಹೇಳಿಕೊಂಡು ಪ್ರಬುದೇವ (prabudeva) ಸೇರಿದಂತೆ ಇನ್ನಿತರ ದೊಡ್ಡವರ ಸಿನಿಮಾಗಳ ಅವಕಾಶ ಗಿಟ್ಟಿಸಿದ್ದಾರೆ ಅಂತ ಆರೋಪಿಸಿದ್ದಾರೆ.

ಇದನ್ನ ಪ್ರಶ್ನೆ ಮಾಡಿದ್ದಕ್ಕೆ ಡಿಫರೆಂಟ್ ಡ್ಯಾನಿ ಅವರ ಆಪ್ತರಿಗೆ ರವಿವರ್ಮ ಕರೆ ಮಾಡಿ (call) ಡಿಫರೆಂಟ್ ಡ್ಯಾನಿಯನ್ನ ಮುಗಿಸಿ ಬಿಡುವುದಾಗಿ ಬೆದರಿಕೆ ಹಾಕಿದ್ದಾರಂತೆ . ಇದಕ್ಕೆ ಸಂಬಂಧಪಟ್ಟ ಹಾಗೆ ಸಿನಿಮಾ ಚೇಂಬರ್ (cinema chamber) ಪ್ರೊಡ್ಯೂಸರ್ ಅಸೋಸಿಯೇಷನ್ (producer association) ನಲ್ಲಿ ದೂರು ದಾಖಲಿಸಿರೋದಾಗಿ ಡಿಫರೆಂಟ್ ಡ್ಯಾನಿ ತಿಳಿಸಿದ್ದಾರೆ . ಸ್ಯಾಂಡಲ್ ವುಡ್ (sandalwood)ನಲ್ಲಿ ಈ ರೀತಿಯಾದಂತಹ ಬೆಳವಣಿಗೆಗಳು ಅಭಿಮಾನಿಗಳ ಪಾಲಿಗೆ ಬೇಸರವನ್ನು ತರಿಸಿದೆ.