ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ನ ವ್ಯಭಿಚಾರವೇ ಇದಕ್ಕೆಲ್ಲ ಕಾರಣ ಎಂದು ಶಾಸಕ ಶಿವಲಿಂಗೇಗೌಡ (Shivalinge Gowda) ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ನಗರದಲ್ಲಿ ಮಾತನಾಡಿದ ಅವರು, ಸದ್ಯ ಆ ಪಕ್ಷದವರು ಹಾಗೂ ಕುಟುಂಬಸ್ಥರು ಪ್ರಜ್ವಲ್ ಕರೆ ತಂದು ಮಾನ ಮರ್ಯಾದೆ ಉಳಿಸಿಕೊಳ್ಳಬೇಕು. ವಿಡಿಯೋ ಹೊರ ತಂದಿದ್ದು ಕಾರು ಡ್ರೈವರ್. ಆತನೂ ಅದನ್ನು ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ವಿಡಿಯೋವನ್ನು ದೇವರಾಜೇಗೌಡಗೆ (Devarajegowda) ಕೊಟ್ಟಿದ್ದೆ ಎಂದು ಕಾರ್ತಿಕ್ ಹೇಳಿದ್ದಾನೆ. ವಿಡಿಯೋಗಳನ್ನು ಸೀಲ್ ಮಾಡಿಕೊಂಡು ಇಟ್ಟುಕೊಂಡಿದ್ದೇನೆ ಎಂದು ದೇವರಾಜೇಗೌಡ ಹೇಳಿದ್ದ. ದೇವರಾಜೇಗೌಡ ಅಮಿತ್ ಶಾ ಜೊತೆಗೂ ಮಾತನಾಡಿದ್ದಾನೆ. ನ್ಯಾಯದ ಪರವೇ ದೇವರಾಜೇಗೌಡ ಇದ್ದಾನೆ ಎಂದು ನಾವು ಆರಂಭದಲ್ಲಿ ಭಾವಿಸಿದ್ದೇವು ಎಂದು ಹೇಳಿದ್ದಾರೆ.
ದೇವೇಗೌಡರ ಕುಟುಂಬವನ್ನು ಪ್ರಜ್ವಲ್ ರೇವಣ್ಣ ಮುಗಿಸಿದ್ದಾನೆ. ಕುಮಾರಸ್ವಾಮಿ ಹಿಟ್ ಅಂಡ್ ರನ್ (Hit and Run) ಮಾಡುತ್ತಾರೆ. ಸಾಕ್ಷಿ ಆಧಾರವಾಗಿ ಡಿಕೆಶಿ ವಿರುದ್ಧ ದೂರು ನೀಡಲಿ. ವಿಷಯಾಂತರ ಮಾಡಲು ಈ ರೀತಿಯ ಆರೋಪ ಮಾಡಿದ್ದಾರೆ. ಯಾರೇ ಪೆನ್ ಡ್ರೈವ್ ಬಿಟ್ಟಿದ್ದರು ತನಿಖೆಯಲ್ಲಿ ಸಿಲುಕಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಪ್ರಜ್ವಲ್ ಮೊಬೈಲ್ನಿಂದ ಯಾರಾದರೂ ಕಳಿಸಿಕೊಂಡಿರಬೇಕು. ಯಾವುದೋ ಕಾಣದ ಕೈಹಂಚಿಕೆ ಮಾಡಿರಬಹುದು. ಯಾರು ಹಂಚಿಕೆ ಮಾಡಿದ್ದಾರೆ ಎಂದು ಸರ್ಕಾರ ಪತ್ತೆ ಹಚ್ಚಬೇಕು ಎಂದು ಹೇಳಿದ್ದಾರೆ.