ಬೆಂಗಳೂರು :ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿಯೋ, ಪ್ರೀತಿ-ಪ್ರೇಮದ ವಿಚಾರಕ್ಕಾಗಿಯೋ ಅಥವಾ ಬೆದರಿಸಿ ಹಣ ವಸೂಲಿ ಗಾಗಿಯೋ ಮನುಷ್ಯರನ್ನು ಅಪಹರಿಸಿದ ಪ್ರಕರಣ ಪೊಲೀಸ್ ಠಾಣೆ. ಕೋರ್ಟ್ ಕಟಕಟೆಗೇರು ವುದನ್ನು ನಾವೆಲ್ಲ ನೋಡಿದ್ದೇವೆ.
ಕೇಳಿದ್ದೇವೆ. ಆದರೆ, ಬೆಕ್ಕು ಕಿಡ್ಡಾಪ್ ಆಗಿರುವ ಪ್ರಕರಣ ವೊಂದು ಹೈಕೋರ್ಟ್ ಮೆಟ್ಟಿಲೇರಿ ಗಂಭೀರ ಹಾಗೂ ಹಾಸ್ಯಭರಿತ ವಾದಕ್ಕೆ ಸಾಕ್ಷಿಯಾಗಿದೆ!ಹೌದು, ಡೈಸಿ ಎಂಬ ಹೆಸರಿನ ಬೆಕ್ಕನ್ನು ಅಪಹರಿಸಿರುವ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಗೊಳಿಸುವಂತೆ ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನೇಕಲ್‌ನ ತಹಾ ಹುಸೇನ್ ಎಂಬುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಸೋಮವಾರ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಅರ್ಜಿಯನ್ನು ವಿಚಾರಣೆ ನಡೆಸಿತು. ಕ್ಷುಲ್ಲಕ ಪ್ರಕರಣದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿರುವ ಪೊಲೀಸರ ಕ್ರಮಕ್ಕೆ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.ಓಹೋ ಬೆಕ್ಕು ಡೈಸಿ ಕಾಣೆಯಾಗಿದೆ. ಅದಕ್ಕಾಗಿ ಹುಡು ಕಾಟ.
ಬೆಕ್ಕಿಗಾಗಿ ಈ ಪರಿ ಹೋರಾಟ? ಏನು ಈಗಾಗಲೇ ಜಾರ್ಜ್‌ಶೀಟ್ ಹಾಕಿದ್ದಾರಾ? ಪೊಲೀಸರಿಗೆ ಬೇರೆ ಕೈಮ್ನೋಡಿ ಎಂದರೆ, ಬೆಕ್ಕು ಅಪಹರಣವಾಗಿರುವ ಬಗ್ಗೆ ಇಷ್ಟು ಆಸಕ್ತಿ ತೋರಿಸಿದ್ದಾರಲ್ಲ ಎಂದು ವಿಚಾ ರಣೆ ವೇಳೆ ನಗುತ್ತಲೇ ಪೊಲೀಸರನ್ನು ನ್ಯಾಯ ಮೂರ್ತಿಗಳು ತರಾಟೆ ತೆಗೆದುಕೊಂಡರು.ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು, ನೀವು ವಿಚಾ ರಣೆಗೆ ಸಹಕರಿಸಿ, ತಪ್ಪಿಸಿಕೊಂಡ ಬೆಕ್ಕು ಮರಳಿ ಬರುತ್ತದೆ.
ವಿಚಾರಣೆ ಪೂರ್ಣಗೊಳ್ಳದೇ ಹೋದರೆ ಬೆಕ್ಕು ಹಿಂತಿರುಗಿ ಬರುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ಈ ಪ್ರಕರಣವನ್ನು ಮುಂದುವರಿಸಿದರೆ ನಮಗೆ ಬಹಳ ಕಷ್ಟವಾಗುತ್ತದೆ. ಏಕೆಂದರೆ ಇಲ್ಲಿ ಬೆಕ್ಕು ಮಾತ್ರವೇ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಹೇಳುತ್ತಿದ್ದಂತೆ
ಇಡೀ ಕಲಾಪವೇ ನಗೆಗಡಲಲ್ಲಿ ತೇಲಾಡಿತು.ಕೊನೆಗೆ ಈ ರೀತಿಯ ಕ್ಷುಲ್ಲಕ ಪ್ರಕರಣದ ತನಿಖೆಯನ್ನು ಮುಂದುವರಿಸಲು ಅನುಮತಿ ನೀಡುವುದರಿಂದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಗಡಿ ದಾಟಿದಂತಾಗುತ್ತದೆ ಎಂದು ಅಭಿ ಪ್ರಾಯಪಟ್ಟ ನ್ಯಾಯಪೀಠ, ಅರ್ಜಿ ಇತ್ಯರ್ಥವಾಗುವ ವರೆಗೆ ಪ್ರಕರಣದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿತು. ಜತೆಗೆ ಪ್ರಕರಣದ ಸಂಬಂಧ ದೂರುದಾರ ಮಹಿಳೆಗೂ ತುರ್ತು ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು.