ಮೈಸೂರು : “ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲ್ಲಲು ಮಡಿವಾಳ ಸಮುದಾಯದ ನಂಜಪ್ಪನ ದೊಡ್ಡ ಪಾತ್ರವಿದೆ. ಸಾವಿರಾರು ಜನರನ್ನು ಸೇರಿಸಿ ಕುಕ್ಕರ್ ಹಾಗೂ ಐರನ್ ಬಾಕ್ಸ್ ಹಂಚಿದ್ರು. ಎರಡು ಮೂರು ಬಾರಿ ಡೇಟ್ ಕ್ಯಾನ್ಸಲ್ ಆದ್ರೂ, ಪಟ್ಟು ಬಿಡದೆ ತಂದೆಯವರ ಕೈಯಲ್ಲೇ ಕೊಡಿಸಿದ್ರು..ಆ ಕಾರ್ಯಕ್ರಮ ಯಶಸ್ವಿಯಾಯಿತು, ದೊಡ್ಡ ಪ್ರಮಾಣದಲ್ಲಿ ಓಟ್ ಪಡೆದರು..” ಹೀಗೆ ಮಾತನಾಡಿದ್ದು, ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅಂದ್ರೆ ವರುಣಾ ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರು ಗೆಲ್ಲಲು ಕುಕ್ಕರ್, ಇಸ್ತ್ರಿಪೆಟ್ಟಿಗೆ ಹಂಚಿ, ಮಡಿವಾಳ ಸಮುದಾಯದ ಓಟ್ ಗೆಲ್ಲಲು ಕಾರಣವಾಯ್ತು ಎಂದು ಯತೀಂದ್ರ ಸಿದ್ದರಾಮಯ್ಯ ಅವರೇ ಬಹಿರಂಗವಾಗಿ ಹೇಳಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಮಡಿವಾಳ ಸಮುದಾಯ ಭವನದ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾ ಯತೀಂದ್ರ ಈ ರೀತಿ ಹೇಳಿದ್ದಾರೆ. ಭಾಷಣದ ವೇಳೆ ಚುನಾವಣಾ ಸತ್ಯ ಬಹಿರಂಗ ಪಡಿಸಿದ್ದಾರೆ. ಈ ವೀಡಿಯೋ ತುಣುಕು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಅಲ್ಲದೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಸಿಎಂ, ತಾವು ಸ್ಪರ್ಧಿಸಿದ ವರುಣ ಕ್ಷೇತ್ರದಲ್ಲಿ ಕುಕ್ಕರ್, ಐರನ್ ಬಾಕ್ಸ್ ಹಂಚಿದ್ದೇ ಚುನಾವಣೆ ಗೆಲ್ಲಲು ಸಹಕಾರಿ ಆಯ್ತಾ ಎಂದೂ ಚರ್ಚೆಯಾಗುತ್ತಿದೆ. ಮಡಿವಾಳ ಸಮುದಾಯದ ಸಾವಿರಾರು ಮತದಾರರಿಗೆ ಚುನಾವಣೆ ವೇಳೆ ಕುಕ್ಕರ್, ಐರನ್ ಬಾಕ್ಸ್ ಕೊಟ್ಟಿದ್ದರು ಎಂದು ಖುದ್ದುಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ.