ಭಯೋತ್ಪಾದನೆ ಮಾನವ ಹಕ್ಕುಗಳ ಉಲ್ಲಂಘನೆಯ ಒಂದು ದೊಡ್ಡ ರೂಪವಾಗಿರುವುದರಿಂದ ಭಯೋತ್ಪಾದನಾ ವಿರೋಧಿ ಪ್ರಶ್ನೆಗಳನ್ನು ಎತ್ತಿದಾಗ ಮಾನವ ಹಕ್ಕು ಸಂಘಟನೆಗಳೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗುವುದು ಸಹಜ. ಭಯೋತ್ಪಾದನೆ ವಿರುದ್ದ ಜರುಗಿಸುವ ಕ್ರಮಗಳು ಮಾನವ ಹಕ್ಕುಗಳಿಗೆ ವಿರುದ್ದವಾಗಿರಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.
ರಾಷ್ಟ್ರೀಯಾ ತನಿಖಾ ಸಂಸ್ಥೆ(NIA)ಯ 13ನೇ ಸಂಸ್ಥಾಪನಾ ದಿನದಲ್ಲಿ ಮತನಾಡಿದ ಷಾ ಭಾರತ ಪ್ರಪಂಚದಲ್ಲಿ ಭಯೋತ್ಪಾದನೆಯಿಂದ ಹೆಚ್ಚು ಬಾಧೆ ಅನುಭವಿಸಿದ ದೇಶವಾಗಿದೆ. ಇದು ಸಮಾಜಕ್ಕೆ ಒಂದು ಶಾಪ ಎಂದು ಹೇಳಿದ್ದಾರೆ.
ನನ್ನಗೆ ಮಾನವ ಹಕ್ಕು ಸಂಘಟನೆಗಳೊಂದಿಗೆ ಕೆಲವು ಭಿನ್ನಾಬಿಪ್ರಾಯಗಳಿವೆ ಭಯೋತ್ಪಾದನೆ ವಿರೋಧಿ ಕ್ರಮವಿದ್ದ ಸಮಯದಲ್ಲಿ ಕೆಲವು ಗುಂಪುಗಳು ಚಕಾರ ಎತ್ತುತವೆ. ಆದರೆ, ನನ್ನ ಪ್ರಕಾರ ಭಯೋತ್ಪಾದನೆಗಿಂತ ದೊಡ್ಡ ಮಾನವ ಹಕ್ಕುಗಳ ಉಲ್ಲಂಘನೆ ಇನ್ನೊಂದಿಲ್ಲ ಭಯೋತ್ಪಾದನೆಯೂ ಮಾನವ ಹಕ್ಕುಗಳಿಗೆ ವಿರುದ್ದವಾಗಿದೆ ಎಂದಿ ಷಾ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಮಾನವ ಹಕ್ಕುಗಳನ್ನು ರಕ್ಷಿಸಲು ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತುಹಾಕಬೇಕು ನರೇಂದ್ರ ಮೋದಿ ಸರ್ಕಾರವು ಭಯೋತ್ಪಾದನೆ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕಾರಿಗಳು ಭಯೋತ್ಪಾದನೆ ವಿರುದ್ದ ಕಠಿಣ ಕ್ರಮ ಕೈಗೊಂಡಿದ್ದಾರೆ ಇದು ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತೋಟಿಗೆ ತರಲು ಸಹಾಯ ಮಾಡಿದೆ ಎಂದು ಹೇಳಿದ್ದಾರೆ.
2018ರಲ್ಲಿ ಮೊದಲ ಭಾರಿಗೆ NIA ಭಯೋತ್ಪಾದನೆಗೆ ಸಂದಾಯವಾಗುತ್ತಿದ್ದ ನಿಧಿಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿರುವುದನ್ನು ಷಾ ಮಾತನಾಡುವ ವೇಳೆ ಉಲ್ಲೇಖಿಸಿದ್ದಾರೆ. 2021-22ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಸ್ಲೀಪರ್ ಸೆಲ್ಗಳನ್ನು ನಾಶಪಡಿಸಲು NIA ಸಹಾಯ ಮಾಡಿದೆ.
ಭಯೋತ್ಪಾದನೆಗೆ ಸಹಾಯ ಮಾಡಿದವರ ವಿರುದ್ದ ಕಠಿಣ ಕ್ರಮ ಕೈಗೊಂಡಿದೆ. ನಾವು ಜಮ್ಮು-ಕಾಶ್ಮೀರದಿಂದ ಭಯೋತ್ಪಾದನೆಯನ್ನು ಬೇರು ಸಮೇತವಾಗಿ ಕಿತ್ತು ಹಾಕಬೇಕು ಆದ್ದರಿಂದ ನಾವು ಭಯೋತ್ಪಾದಕ ಸಂಘಟನೆಗಳಿಗೆ ಸಂದಾಯವಾಗುವ ನಿಧಿಯನ್ನು ತಡೆಯಬೇಕು ಎಂದು ಸಮಾರಂಭದಲ್ಲಿ ಹೇಳಿದ್ದಾರೆ.