ಟರ್ಕಿಯ (Turkey) ರಾಜಧಾನಿ ಅಂಕಾರಾದ ಬಳಿಯ ಟರ್ಕಿಶ್ ಏರೋಸ್ಪೇಸ್ ಇಂಡಸ್ಟ್ರೀಸ್ನ ಪ್ರಧಾನ ಕಚೇರಿಯ ಹೊರಗೆ ಭಯೋತ್ಪಾದಕ ದಾಳಿ (Terrorist attack) ನಡೆಸಿದ್ದು,ಈ ದಾಳಿಯಲ್ಲಿ ಮೂವರು ನಾಗರಿಕರು ಹಾಗೂ ಇಬ್ಬರು ಉಗ್ರರು ಸೇರಿದಂತೆ 5 ಮಂದಿ ಸಾವನ್ನಪ್ಪಿದ್ದಾರೆ.
ಟಿಎಐ ಕಚೇರಿ ಬಳಿ ಬೃಹತ್ ಸ್ಫೋಟದಿಂದ ಈ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ. ಶಸ್ತ್ರ ಸಜ್ಜಿತ ಉಗ್ರರ ಗುಂಪು ಕಟ್ಟಡದ ಒಳಗೆ ಬಂದಿದೆ. ಈ ವೇಳೆ ಓರ್ವ ಉಗ್ರ ತನ್ನನ್ನು ಸ್ಪೋಟಿಸಿಕೊಂಡಿದ್ದಾನೆ.
ಇದೇ ವೇಳೆ ಮತ್ತೋರ್ವ ಉಗ್ರನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಇನ್ನೂ ಅಲ್ಲಿನ ಕಂಪನಿಗಳ ಉದ್ಯೋಗಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.