ಬಿಗ್ ಬಾಸ್ ಸೀಸನ್ 11 ಈಗಾಗಲೇ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ.ಅದರಲ್ಲೂ ನಾಲ್ಕನೇ ವಾರದ ಕ್ಯಾಪ್ಟನ್ ಸಿ ಟಾಸ್ಕ್ ತುಂಬಾನೇ ವಿಭಿನ್ನವಾಗಿದ್ದು, ಇಬ್ಬರೂ ಕಂಟೆಸ್ಟೆಂಟ್ಗಳು ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಇಬ್ಬರು ಕ್ಯಾಪ್ಟನ್ಸ್ ಹೇಗೆ ಮನೆಯನ್ನ ಮೇಂಟೇನ್ ಮಾಡ್ತಾರೆ, ಇದು ಯಾವ ರೀತಿ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು ಆದರೆ ಬಿಗ್ ಬಾಸ್ ಅಲ್ಲೇ ಒಂದು ಟ್ವಿಸ್ಟ್ ನ ಇಟ್ಟಿದ್ದರು. ಆ ಇಬ್ಬರು ಕ್ಯಾಪ್ಟನ್ಸ್ ಎರಡು ಗುಂಪಿನ ನಾಯಕರಾಗಿದ್ದಾರೆ.

ಪ್ರತಿ ಗುಂಪಿನಲ್ಲೂ ಏಳೇಳು ಕಂಟೆಸ್ಟೆಂಟ್ಗಳು ಇದ್ದು,ರಾಜಕೀಯ ಟಾಸ್ಕ್ ಮನೆ ಒಳಗಡೆ ನಡಿತಾ ಇದೆ. ಒಂದು ಕಡೆ ಐಶ್ವರ್ಯ ಅವರ ಗುಂಪು ನಾವೇ ಮೇಲು ನಾವೇ ಸ್ಟ್ರಾಂಗ್ ಅಂತ ತೋರಿಸಿದರೆ, ಇನ್ನೊಂದು ಕಡೆ ತ್ರಿವಿಕ್ರಮ್ ಅವರ ತಂಡ ನಾವು ಯಾರಿಗೂ ಕಡಿಮೆ ಇಲ್ಲ ಅನ್ನೋದನ್ನ ಪ್ರೂವ್ ಮಾಡೋಕೆ ಟ್ರೈ ಮಾಡ್ತಾ ಇದಾರೆ.. ಇದರ ಮಧ್ಯೆ ಜಗಳ ಕೂಡ ಜೋರಾಗಿದೆ, ಈ ಜಗಳವನ್ನ ನೋಡಿದಂತಹ ಕಂಟೆಸ್ಟೆಂಟ್ ಹನುಮಂತ ಫುಲ್ ಗಾಬ್ರಿಯಾಗಿ ಮೂಲೆಗುಂಪಾಗಿದ್ದಾನೆ.

ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ ಮತ್ತೊಂದು ಪ್ರೊಮೊ ರಿಲೀಸ್ ಆಗಿದ್ದು,ಹೊಸ ಟ್ವಿಸ್ಟ್ ಇದೆ.ಈ ಪ್ರೊಮೊದಲ್ಲಿ ಬಿಗ್ ಬಾಸ್ ಮನೆಗೆ ಮತ್ತೊಬ್ಬ ವ್ಯಕ್ತಿ ಎಂಟ್ರಿ ಆಗಿದೆ. ಅವರು ಮತ್ಯಾರು ಅಲ್ಲ ರಾಧಾ ಹಿರೇಗೌಡ..

ನಿರೂಪಕ್ಕೆ ಆಗಿರುವ ರಾಧಾ ಹಿರೇಗೌಡ ತಮ್ಮ ಮಾತಿನ ಚಕಮಕಿ ಮೂಲಕ ಪ್ರತಿಯೊಬ್ಬರ ಬಾಯನ್ನು ಮುಚ್ಚಿಸುತ್ತಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ರಾಜಕೀಯ ಟಾಸ್ಕ್ ನಡಿತಾ ಇರೋದ್ರಿಂದ ರಾಧಾ ಹಿರೇಗೌಡ ಅವರು ಎಂಟ್ರಿಕೊಟ್ಟು ಎರಡು ಗುಂಪುಗಳಿಗೂ ಒಂದಿಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ಕಂಟೆಸ್ಟೆಂಟ್ಗಳು ಕಕ್ಕಾಬಿಕ್ಕಿಯಾಗಿದ್ದಾರೆ.

ಆದರೆ ರಾಧಾ ಹಿರೇಗೌಡ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರೋದು ಜಸ್ಟ್ ಗೆಸ್ಟ್ ಆಗಿಯ ಅಥವಾ ವೈಟ್ ಕಾರ್ಡ್ ಎಂಟ್ರಿನ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ ಆ ಕುತೂಹಲಕಾರಿ ಪ್ರಶ್ನೆಗೆ ಇವತ್ತಿನ ಎಪಿಸೋಡ್ ಉತ್ತರಾ ನೀಡಲಿದೆ






