ಜಮ್ಮು ಕಾಶ್ಮೀರದಲ್ಲಿ (jammu & kashmir) ಹೊಸ ಸರ್ಕಾರ ರಚನೆಯಾಗ್ತಿದ್ದಂತೆ ಕಣಿವೆ ನಾಡಲ್ಲಿ ಉಗ್ರರ ದಾಳಿ (terror attack) ಮತ್ತೆ ಮಿತಿ ಮೀರುವ ಲಕ್ಷಣಗಳು ಗೋಚರಿಸುತ್ತಿವೆ. ಜಮ್ಮು ಕಾಶ್ಮೀರದ ಗಂದರ್‌ಬಲ್‌ನ ಸೋನಾಮಾರ್ಗ ಪ್ರದೇಶದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.

ಇಲ್ಲಿನ ವಲಸಿಗ ಕಾರ್ಮಿಕರನ್ನೇ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದ್ದು, ಈ ಭೀಕರ ಗುಂಡಿನ ದಾಳಿ ವೇಳೆ ಓರ್ವ ವೈದ್ಯ ಸೇರಿದಂತೆ ಒಟ್ಟು 7 ಮಂದಿ ವಲಸಿಗರು ಸಾವನ್ನಪ್ಪಿದ್ದಾರೆ.
ಇನ್ನು ಈ ದಾಳಿಯಲ್ಲಿ ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇದೀಗ ಉಗ್ರರನ್ನು ಸದೆಬಡೆಯಲು ಭಾರತೀಯ ಸೇನೆ ಕಾರ್ಯಾಚರಣೆ ಮುಂದುವರೆಸಿದೆ.