ಬೆಂಗಳೂರು: ಮಂಗಳವಾರ ಉತ್ತರಹಳ್ಳಿಯಲ್ಲಿ ಶ್ರೀಲಕ್ಷ್ಮೀ ಎಂಬವೃದ್ಧೆಯನ್ನ ಕೊಲೆ ಮಾಡಿ ಚಿನ್ನ ದೋಚಿದ್ದ ಪ್ರಕರಣವನ್ನು ಸುಬ್ರಮಣ್ಯಪುರ ಪೊಲೀಸರು ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಯಾದ ವೃದ್ಧೆಯ ಮನೆಯಲ್ಲಿ ಬಾಡಿಗೆಗೆ ಇದ್ದ ಪ್ರಸಾದ್ ಶ್ರೀಶೈಲ (26) ಮತ್ತು ಸಾಕ್ಷಿ ಹನುಮಂತ್ ಹೊದ್ದೂರು (23) ಎಂಬುವವರೇ ಕೊಲೆ ಆರೋಪಿಗಳು. . ಬಂಧಿತ ಆರೋಪಿಗಳಿಬ್ಬರೂ ಮೂಲತಃ ಮಹಾರಾಷ್ಟ್ರ ರಾಜ್ಯದವರು ಎಂದು ತಿಳಿದುಬಂದಿದೆ. ಆರೋಪಿ ಪ್ರಸಾದ್ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರೆ, ಆರೋಪಿತೆ ಸಾಕ್ಷಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು.
ಕಳೆದ 6 ತಿಂಗಳಿಂದ ವೃದ್ದೆ ಮನೆಯಲ್ಲಿ ಬಾಡಿಗೆಗೆ ಇದ್ದ ದಂಪತಿ ಮಂಗಳವಾರ ಟಿವಿ ನೋಡಲು ಶ್ರೀಲಕ್ಷ್ಮಿ ಮನೆಗೆ ಹೋಗಿದ್ದರು. ಈ ವೇಳೆ ಚಿನ್ನಕ್ಕಾಗಿ ಆಕೆಯನ್ಮ ಕೊಲೆ ಮಾಡಿದ್ದ ದಂಪತಿ ನಂತರ ತಮಗೆ ಏನು ಗೊತ್ತಿಲ್ಲದಂತೆ ಮನೆಯಲ್ಲೇ ಇದ್ದರು. ಕೊಲೆ ಕೇಸ್ ಸಂಬಂಧ ದಂಪತಿಯನ್ನು ಪೊಲೀಸರು ಬಂದು ಕೇಳಿದಾಗ ಏನು ಗೊತ್ತಿಲ್ಲ ಎಂದು ಕಥೆ ಕಟ್ಟಿದ್ರು. ವಿಚಾರಣೆ ವೇಳೆ ಗೊಂದಲದ ಹೇಳಿಕೆ ನೀಡಿದ್ದರು. ಅನುಮಾನ ಬಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿ ಚಿನ್ನ ಕದ್ದಿರೋದನ್ನ ಒಪ್ಪಿಕೊಂಡಿದ್ದಾರೆ
ಸದ್ಯ ಇಬ್ಬರನ್ನೂ ಬಂಧಿಸಿರುವ ಸುಬ್ರಮಣ್ಯ ಪುರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಪತ್ನಿ ಕಳೆದುಕೊಂಡ ಪತಿ ಕಂಗಾಲಾಗಿದ್ದಾರೆ







