ಮಂಗಳೂರು: ನಗರದ ಕುಂಟಿಕಾನ ಪ್ರೈಓವರ್ ಬಳಿ ಪಾರ್ಕ್ ಮಾಡಲಾಗಿದ್ದ ಟೆಂಪೋ ಟ್ರಾವೆಲ ವಾಹನವನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಬಂಧಿತರನ್ನು ಹೊರ ರಾಜ್ಯದ ಆರೀಫ್ ಉಲ್ಲಾಖಾನ್, ಅಮಿತ್ ಬಾಹುಬಲಿ ಪಂಚೋಡಿ ಯಾನೆ ಬೇಬಿ, ಸುರೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಸುಮಾರು 15 ಲಕ್ಷ ರೂ. ಮೌಲ್ಯದ ಟೆಂಪೋ ಟ್ರಾವೆಲರ್ ನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಸೆ.14ರಾತ್ರಿ 8.30ಕ್ಕೆ ಈ ವಾಹನವನ್ನು ಕುಂಟಿಕಾನ ಡ್ರೈವರ್ ಬಳಿ ಕಳವು ಮಾಡಲಾಗಿತ್ತು. ಮರುದಿನ ಬೆಳಗ್ಗೆ ನೋಡಿದಾಗ, ಇದು ಕಳವಾಗಿತ್ತು. ಈ ಬಗ್ಗೆ ಉರ್ವ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ರ ನಿರ್ದೇಶನದ ಮೇರೆಗೆ ಉರ್ವಾ ಠಾಣಾ ನಿರೀಕ್ಷಕಿ ಭಾರತಿ ಜಿ ನೇತೃತ್ವದಲ್ಲಿ ರಚಿಸಲಾದ ವಿಶೇಷ ತಂಡದಲ್ಲಿದ್ದ ಎಸೈ ಹರೀಶ್ ಎಚ್ಪಿ, ಹಾಗೂ ಇನ್ನಿತರ ಸಿಬ್ಬಂದಿಗಳು ಆರೋಪಿಗಳನ್ನು ಬೆಳಗಾವಿಯಲ್ಲಿ ಬಂಧಿಸಿ ಕಳವಾದ ವಾಹನ ವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.