ತೆಲುಗಿನ ಜನಪ್ರಿಯ ಹಾಸ್ಯ ನಟ ಪೊಸಾನಿ ಕೃಷ್ಣ ಮುರಳಿ (Posani rishna murali) ಅವರನ್ನು ಪೊಲೀಸರು ಬಂಧಿಸಿದ್ದಾರೆ.ನೆರೆಯ ಆಂಧ್ರಪ್ರದೇಶದಲ್ಲಿ (Andhra pradesh) ಪೊಸಾನಿ ಕೃಷ್ಣ ಮುರಳಿ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

ಹೀಗಾಗಿ ಇಂದು ಹೈದರಾಬಾದ್‌ನಲ್ಲಿರುವ (Hyderabad) ಪೊಸಾನಿ ಕೃಷ್ಣ ಮುರಳಿ ನಿವಾಸಕ್ಕೆ ತೆರಳಿದ ರಾಯಚೋಟಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.ಪೊಸಾನಿಯನ್ನು ಹೈದರಾಬಾದ್‌ನಿಂದ ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ.
ನಟ ಪೊಸಾನಿ ಕೃಷ್ಣ ಮುರಳಿ ಅವರ ವಿರುದ್ಧ ಜಾತಿ ನಿಂದನೆ ಮಾಡಿದ ಆರೋಪ, ಜನರಲ್ಲಿ ವರ್ಗ ಭೇದ ಸೃಷ್ಟಿಸಿದ ಆರೋಪ ಕೇಳಿಬಂದ ಹಿನ್ನಲೆ ಕೇಸ್ ದಾಖಲಿಸಿ ಪೊಸಾನಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.