ದೆಹಲಿ ರೈಲು ನಿಲ್ದಾಣದಲ್ಲಿ RPF ಮಹಿಳಾ ಸಿಬ್ಬಂದಿಯೊಬ್ಬರು, ಪುಟ್ಟಮಗುವಿನೊಂದಿಗೆ ತಮ್ಮ ಕರ್ತವ್ಯ ನಿರ್ವಹಿಸ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗ್ತಿದೆ. ರೈಲ್ವೇ ಕಾನ್‌ಸ್ಟೇಬಲ್ ರೀನಾ (Railway Co stable Reena) ತಮ್ಮ 1 ವರ್ಷದ ಮಗುವನ್ನ ಹೊತ್ತುಕೊಂಡು ಕರ್ತವ್ಯ ನಿರ್ವಹಿಸುವ ದೃಶ್ಯ ಇದಾಗಿದೆ. ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗ್ತಿದ್ದು (Viral video), ಈ ಬಗ್ಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejaswi surya) ಪೋಸ್ಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಚಿತ್ರವು ಭಾರತ ನಿಜವಾಗಿಯೂ ಏನೆಂಬುದನ್ನು ಪ್ರತಿನಿಧಿಸುತ್ತದೆ – ಯುವ, ಜವಾಬ್ದಾರಿಯುತ ಮತ್ತು ಶ್ರಮಶೀಲ. ಕುಟುಂಬ ಮತ್ತು ಕೆಲಸವನ್ನು ಸಮತೋಲನಗೊಳಿಸುವುದು. ಮುಂದಿನ ಪೀಳಿಗೆಗೆ ಅದೇ ಮೌಲ್ಯಗಳನ್ನು ತುಂಬುವುದು.

ನಾವು ಶ್ರೀಮಂತ ಸೆಲೆಬ್ರಿಟಿಗಳನ್ನು ಐಕಾನ್‌ಗಳಾಗಿ ಆಚರಿಸುತ್ತಿದ್ದರೂ, ಭಾರತದ ನಿಜವಾದ ಮಹಿಳೆಯರನ್ನು – ದಾದಿ ಮತ್ತು ಸೇವಕಿಯರ ಸಹಾಯವಿಲ್ಲದೆ ಮಕ್ಕಳನ್ನು ಬೆಳೆಸುವ, ಕೆಲಸದಲ್ಲಿ ಸೂಪರ್‌ಸ್ಟಾರ್‌ಗಳಾಗಿರುವ, ಕುಟುಂಬಗಳನ್ನು ನಿರ್ವಹಿಸುವ, ಮಕ್ಕಳಿಗೆ ಶಿಕ್ಷಣ ನೀಡುವ, ವೃದ್ಧರನ್ನು ನೋಡಿಕೊಳ್ಳುವ ಮತ್ತು ಮುಖದಲ್ಲಿ ನಗುವಿನೊಂದಿಗೆ ಇದನ್ನೆಲ್ಲ ಮಾಡುವ ಯುವ ತಾಯಂದಿರನ್ನು ನಾವು ಮರೆತುಬಿಡುತ್ತೇವೆ.
ಅವರಿಗೆ ನಮಸ್ಕಾರ! ಅವರು ನಮ್ಮ ಕುಟುಂಬಗಳ ಆಧಾರಸ್ತಂಭಗಳು – ನಮ್ಮ ಸಮಾಜದ ಪ್ರಮುಖ ಸ್ತಂಭ ಎಂದು ತೇಜಸ್ವಿ ಸೂರ್ಯ ಪೋಸ್ಟ್ ಮಾಡುವ ಮೂಲಕ ಭಾರತಕ್ಕೆ ಈ ರೀತಿಯ ಮಹಿಳೆಯರೇ ಆದರ್ಶ ಎಂದು ಬರೆದುಕೊಂಡಿದ್ದಾರೆ.