ಲೋಕಸಭಾ ಚುನಾವಣಾ (parliment election) ಕಣ ದಿನೇ ದಿನೇ ರಂಗೇರತೊಡಗಿದೆ. ತಮ್ಮ ಅಭ್ಯರ್ಥಿಗಳ ಗೆಲುವಿಗೆ ಪ್ರಚಾರ ನಡೆಸಲು ಘಟಾನುಘಟಿ ನಾಯಕರು ಬಿರು ಬಿಸಿಲನ್ನೂ ಲೆಕ್ಕಿಸದೇ ಬಿರುಸಿನಿಂದ ಮತಯಾಚನೆ ಮಾಡ್ತಿದ್ದಾರೆ. ಬೆಂಗಳೂರು (Bengalore) ವ್ಯಾಪ್ತಿಯ ಮೂರುಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ (Congress) ವಶ ಮಾಡಿಕೊಳ್ಳಲು ಖುದ್ದು ಸಿಎಂ ಸಿದ್ದರಾಮಯ್ಯ(Cm siddaramaiah) ಅಖಾಡಕ್ಕೆ ಇಳಿದಿದ್ದಾರೆ.

ಬೆಂಗಳೂರು ಉತ್ತರ (Bangalore north) ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭ್ಯರ್ಥಿ ಪ್ರೊ. ರಾಜೀವ್ ಗೌಡ ಪರ ಚುನಾವಣಾ ಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ, ಮಹಾಲಕ್ಷ್ಮಿ ಲೇಔಟ್ (mahalakshmi layout) ನಲ್ಲಿ ಬಹಿರಂಗ ಸಭೆ ನಡೆಸಿದ್ರು.ಬೆಂಗಳೂರು ಉತ್ತರದಲ್ಲಿ ಪ್ರಚಾರ ಮುಗಿಸಿ ಬಂದ ಸಿಎಂ, ಮತ್ತೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಸಕೆರೆಹಳ್ಳಿಯಲ್ಲಿ ಅಭ್ಯರ್ಥಿ ಸೌಮ್ಯರೆಡ್ಡಿ (sowmya reddy) ಪರ ರೋಡ್ ಶೋ ಮಾಡಿದ್ರು.. ಸಿಎಂ ಸಿದ್ದರಾಮಯ್ಯಗೆ ಸಚಿವ ರಾಮಲಿಂಗಾರೆಡ್ಡಿ, ಹೆಚ್.ಎಂ. ರೇವಣ್ಣ ಸಾಥ್ ನೀಡಿದ್ರು.

ಇನ್ನು ಇದೇ ವೇಳೆ ಬ್ಯಾಲಿಯನ್ನ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ತೇಜಸ್ವಿ ಸೂರ್ಯ (tejaswi surya) ನಿಮ್ಮ ಆರ್ಶಿವಾದ ಪಡೆದು ದೆಹಲಿಗೆ ಹೋದ್ರು. ಆದರೆ ಲೋಕಸಭೆಯಲ್ಲಿ ರಾಜ್ಯಕ್ಕೆ ಅನ್ಯಾಯ ಅದಾಗ ಧ್ವನಿ ಎತ್ತಲಿಲ್ಲ. ಹೀಗೆ ಮಾತಿನ ಬರದಲ್ಲಿ ತೇಜಸ್ವಿ ಸೂರ್ಯನನ್ನ ನಾನು ಅಮಾವಾಸ್ಯೆ ಎಂದು ಕರೆಯುವೆ ಎಂದು.ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿರುವ ಮೂರು ಲೋಕಸಭಾ ಕ್ಷೇತ್ರಗಳನ್ನು ಕೈ ವಶ ಮಾಡಿಕೊಳ್ಳಲು ಕಾಂಗ್ರೆಸ್ (Congress) ಪಣತೊಟ್ಟಿದೆ. ಸಿಎಂ ಸಿದ್ದರಾಮಯ್ಯ ಇಡೀ ದಿನ ಬಿಸಿಲನ್ನೂ ಲೆಕ್ಕಿಸದೇ ಸುಮಾರು 12 ಗಂಟೆಗಳ ಕಾಲ ಕಾಂಗ್ರೆಸ್ ಅಭ್ಯರ್ಥಿಗಳ ಕೈ ಹಿಡಿಯುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದೀಗ ಸಿಎಂ ಭರ್ಜರಿ ಕ್ಯಾಂಪೇನ್ ವರ್ಕೌಟ್ ಆಗುತ್ತಾ? ಇಲ್ವಾ ಅನ್ನೋದು ಲೋಕಸಬಾ ಫಲಿತಾಂಶದ (Results) ಬಳಿಕ ಗೊತ್ತಾಗಲಿದೆ.













