• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ತಾಂಡಾಗಳಲ್ಲಿ ತೀಜ್ ಹಬ್ಬದ ಸಂಭ್ರಮ ಕುಣಿದು ಸಂಭ್ರಮಿಸಿದ ಲಂಬಾಣಿ ಬೆಡಗಿಯರು

Any Mind by Any Mind
October 18, 2021
in ಕರ್ನಾಟಕ
0
ತಾಂಡಾಗಳಲ್ಲಿ ತೀಜ್ ಹಬ್ಬದ ಸಂಭ್ರಮ ಕುಣಿದು ಸಂಭ್ರಮಿಸಿದ ಲಂಬಾಣಿ ಬೆಡಗಿಯರು
Share on WhatsAppShare on FacebookShare on Telegram

ದಸರಾ ವೇಳೆ ಹಸಿರು ಬೆಳೆ ಪೋಷಿಸುವ ಸಂಕೇತವಾಗಿ ಬುಡಕಟ್ಟು ಜನಾಂಗ ಆಚರಣೆ ಮಾಡುವ ತೀಜ್‌ ಹಬ್ಬವನ್ನು ಗದಗ ತಾಲ್ಲೂಕಿನ ಬೆಳದಡಿ ತಾಂಡಾದಲ್ಲಿ ಲಂಬಾಣಿಗರು ಶುಕ್ರವಾರ ಸಂಜೆ ಸಂಭ್ರಮದಿಂದ ಆಚರಿಸಿದರು. ಸಕಾಲಕ್ಕೆ ಮಳೆ ಬಂದು, ಸಮೃದ್ದಿ ಬೆಳೆ ಬರಲಿ ತಾಂಡಾದಲ್ಲಿ ಆರೋಗ್ಯ ನೆಲೆಸಲಿ ಎಂದು ತೀಜ್‌(ಹುಲ್ಲಿನ ಬುಟ್ಟಿ) ಹೊತ್ತ ಯುವತಿಯರು ಹಾಡಿನ ಮೂಲಕ ಪ್ರಾರ್ಥನೆ ಮಾಡುವ ದೃಶ್ಯಗಳು ನಾಗಾವಿ, ಬೆಳದಡಿ ತಾಂಡಾಗಳಲ್ಲಿ ವಿಶೇಷವಾಗಿ ಕಂಡುಬಂದವು.

ADVERTISEMENT


ತಾಂಡಾಗಳಲ್ಲಿ ತೀಜ್‌ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ದುಡಿಯಲು ಗುಳೆಹೋದ, ನೌಕರಿಗಾಗಿ, ವ್ಯಾಪರಕ್ಕಾಗಿ ದೂರದ ಪಟ್ಟಣಗಳಿಗೆ ಹೋದ ಜನರು ದಸರಾ ಹಬ್ಬದ ಮುಂಚಿತವಾಗಿ ತಾಂಡಾಗಳಿಗೆ ಬರುತ್ತಾರೆ. ಮನೆಗೆ ಬಣ್ಣಹಚ್ಚಿ ಮಡಿ ಮಾಡುತ್ತಾರೆ. ದಸರಾ ಆಚರಣೆಯ 9 ದಿನ ಮುಂಚಿತವಾಗಿ ತಾಂಡಾದ ನಾಯಕ ಅಥವಾ ಸೇವಾಲಾಲ್‌ ಮಹಾರಾಜ್‌ ಭಗತ್‌ (ಪೂಜಾರಿ) ದೇವಿಗೆ ಹಾಗೂ ಸೇವಾಲಾಲರಿಗೆ ಪೂಜೆ ಮಾಡಿ 9 ಗೋಧಿ ಕಾಳುಗಳನ್ನು ತಾಂಡಾದ ಹಿರಿಯ ಮಹಿಳೆಯರಿಗೆ ನೀಡುತ್ತಾರೆ. ನಂತರ ಅದರ ಜೊತೆಗೆ ಹೆಚ್ಚಿನ ಕಾಳುಗಳನ್ನು ಸೇರಿಸಿ ಪ್ರತಿಯೊಂದು ಮನೆಯಲ್ಲಿ ಬಿದುರಿನ ಪುಟ್ಟಿಯಲ್ಲಿ ಮಣ್ಣು, ದೇಶಿ ಆಕಳ ಸಗಣಿ ಗೊಬ್ಬರ ಹಾಕಿ ಗೋಧಿ ಬೀಜಗಳನ್ನು ನೆಡುತ್ತಾರೆ ಹಾಗೂ ಅದಕ್ಕೆ ಸೂರ್ಯನ ಬೆಳಕು ತಾಗದಂತೆ ಮುಚ್ಚಿ ಇಡುತ್ತಾರೆ ಮತ್ತು ಪ್ರತಿದಿನ ಪ್ರಮಾಣಕ್ಕೆ ತಕ್ಕಷ್ಟು ನೀರು ಹಾಕುತ್ತಾರೆ. ಇದಕ್ಕೆ ತೀಜ್‌ ಬುರೆರೋ (ಮುಚ್ಚಿಡುವುದು) ಎಂದು ಕರೆಯುತ್ತಾರೆ.


9 ದಿನಗಳ ಕಾಲ ಸಂಜೆ ವೇಳೆ ನಡೆಯುವ ಈ ಹಬ್ಬದಲ್ಲಿ ಮದುವೆಯಾಗದ ತಾಂಡಾದ ಬಂಜಾರ ಬೆಡಗಿಯರು ಪ್ರಮುಖ ಪಾತ್ರವಹಿಸುತ್ತಾರೆ. ಅವರಿಗೆ ಹಿರಿಯ ಮಹಿಳೆಯರು ಮಾರ್ಗದರ್ಶನ ನೀಡುತ್ತಾರೆ. ಪ್ರತಿ ದಿನವೂ ರಾತ್ರಿ ಪೂಜೆಯ ನಂತರ ವೃತ್ತಾಕಾರದಲ್ಲಿ ಹೆಣ್ಣುಮಕ್ಕಳು ಕುಣಿದು ಕುಪ್ಪಳಿಸುತ್ತಾರೆ. ಬಂಜಾರ ಸಂಪ್ರದಾಯದ ಬಗ್ಗೆ, ದಸಾರ ಹಬ್ಬದ ಹಿನ್ನಲೆ ಬಗ್ಗೆ, ತೀಜ್‌ ಹಬ್ಬದ ಬಗ್ಗೆ ಹಾಡಿನ ರೂಪದಲ್ಲಿ ಹೇಳುತ್ತಾರೆ. ಕೆಲವೊಮ್ಮೆ ಒಡಪು ಇಟ್ಟು ಹಾಡುವಾಗ ಸ್ಪರ್ಧೆಗಳು ನಡೆಯುತ್ತವೆ ಹಾಗಾಗಿ ದಸರಾ ಒಂಭತ್ತು ದಿನವೂ ತಾಂಡಾಗಳಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಕೊನೆಯ ದಿನ ಸಮೀಪದ ನದಿಗೆ ಅಥವಾ ಹಳ್ಳಕ್ಕೆ ಹೋಗಿ ಸಸಿಗಳನ್ನು ನೀರಿನಲ್ಲಿ ಬಿಡುತ್ತಾರೆ ಹಾಗೂ ಗಂಗಾಮಾತಗೆ ಪ್ರಾರ್ಥಿಸುತ್ತಾರೆ ನಂತರ ಬನ್ನಿ ಮುಡಿಯುತ್ತಾರೆ ಎಂದು ಬೆಳದಡಿ ತಾಂಡಾದ ನಾಯಕಣಿಯರಾದ ಗಿರಿಜವ್ವ ಚಂದು ನಾಯಕ, ಶೀಲವ್ವ ಮಾಂತೇಶ ಚವಾಣ, ಶಾಂತವ್ವ ಸೋಮನಾಥ ಮಾಳಗಿಮನಿ ಮಾಹಿತಿ ನೀಡಿದರು.


ಹಬ್ಬದ ಆಚರಣೆಯಲ್ಲಿ ಪರಸ್ಪರರಿಗೆ ತೀಜ್ ಹಂಚಿಕೊಂಡು ಬಾಳು ಯಾವತ್ತೂ ಹಸಿರಾಗಲಿ, ಒಳ್ಳೆಯದಾಗಲಿ ಎಂದು ಹಾರೈಸಲಾಗುತ್ತದೆ. ಬಂಜಾರ ಶೈಲಿಯ ಹೊಸ ಉಡುಗೆ ತೊಡುಗೆಗಳಿಂದ ಗಮನ ಸೆಳೆಯುತ್ತಾರೆ. ಹೀಗಾಗಿ ಇಂದಿಗೂ ನಮ್ಮ ಜನಾಂಗದ ಮಹಿಳೆಯರು ಉಡುಗೆ-ತೊಡುಗೆ ಬಿಟ್ಟಿಲ್ಲ ಎಂದು ಹಿರಿಯ ಮಹಿಳೆಯರಾದ ಸುವರ್ಣ ಟಿಕಪ್ಪ ನಾಯಕ, ಶೀಲವ್ವ ಕೇಶಪ್ಪ ಕಾರಭಾರಿ ಹೇಳಿದರು.

Tags: Dasara FestivalGadagGadag DistrictState Festival
Previous Post

ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಕಟ್ಟೆ ಒಡೆದ ಕೆರೆಗಳ ವೀಕ್ಷಣೆ

Next Post

ಮಹದೇವಪುರ: ಅಧಿಕಾರಿಗಳ ನಿರ್ಲಕ್ಷ್ಯ, ಶಾಸಕರ ಸ್ವಾರ್ಥ ರಾಜಕಾರಣ – ಕತ್ತಲಲ್ಲಿ ಕಳೆಯುತ್ತಿದೆ 300 ಕ್ಕೂ ಹೆಚ್ಚು ಕುಟುಂಬಗಳು

Related Posts

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ
ಕರ್ನಾಟಕ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

by ಪ್ರತಿಧ್ವನಿ
April 9, 2026
0

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026ರ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಇಂದು ಮಧ್ಯಾಹ್ನ 3 ಗಂಟೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಬಾರಿ ರಾಜ್ಯವು...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

April 9, 2026
Next Post
ಮಹದೇವಪುರ: ಅಧಿಕಾರಿಗಳ ನಿರ್ಲಕ್ಷ್ಯ, ಶಾಸಕರ ಸ್ವಾರ್ಥ ರಾಜಕಾರಣ – ಕತ್ತಲಲ್ಲಿ ಕಳೆಯುತ್ತಿದೆ 300 ಕ್ಕೂ ಹೆಚ್ಚು ಕುಟುಂಬಗಳು

ಮಹದೇವಪುರ: ಅಧಿಕಾರಿಗಳ ನಿರ್ಲಕ್ಷ್ಯ, ಶಾಸಕರ ಸ್ವಾರ್ಥ ರಾಜಕಾರಣ - ಕತ್ತಲಲ್ಲಿ ಕಳೆಯುತ್ತಿದೆ 300 ಕ್ಕೂ ಹೆಚ್ಚು ಕುಟುಂಬಗಳು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada