Team India ಮಾಜಿ ಕ್ಯಾಪ್ಟನ್ MS Dhoni ಮ್ಯಾನೇಜರ್ಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. Tirupathi ಲ್ಲಿ ಸ್ಪೆಷಲ್ ದರ್ಶನ ಮಾಡಿಸಲಾಗುತ್ತದೆ ಎಂದು ಹೇಳಿ ಲಕ್ಷ ಲಕ್ಷ ಹಣ ಪಡೆದು ವಂಚನೆ ಮಾಡಲಾಗಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.
ಎಂ.ಎಸ್ ಧೋನಿ ಮ್ಯಾನೇಜರ್ ಸ್ವಾಮಿನಾಥನ್ ಎಂಬುವರಿಗೆ ಬರೋಬ್ಬರಿ ಆರೂವರೆ ಲಕ್ಷ ರೂಪಾಯಿ ವಂಚಿಸಲಾಗಿದೆ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ವಂಚನೆ ಮಾಡಲಾಗಿದೆ ಎನ್ನಲಾಗಿದೆ. ಐಎಎಸ್ ಅಧಿಕಾರಿಯಾಗಿದ್ದು, ಕೇಂದ್ರ ಹಣಕಾಸು ಸಚಿವರ ಬಳಿ ಆಪ್ತ ಕಾರ್ಯದರ್ಶಿ ಎಂದು ಹೆಸರು ದುರ್ಬಳಕೆ ಮಾಡಿಕೊಂಡು ವಂಚಿಸಲಾಗಿದೆ ಎಂದು ಆರೋಪ ಮಾಡಲಾಗಿದೆ.

ಹನ್ನೆರಡು ಮಂದಿಗೆ ವಿಶೇಷ ದರ್ಶನ ಮಾಡಿಸುತ್ತೇವೆ. ತಿರುಪತಿಯಲ್ಲಿ ರೂಮ್ ವ್ಯವಸ್ಥೆ ಇರುತ್ತದೆ. ಪ್ರೋಟೋಕಾಲ್ ಮೂಲಕ ಯಾರನ್ನಾದ್ರು ದರ್ಶನಕ್ಕೆ ಕಳುಹಿಸಬಹುದು ಎಂದು ಮಾತುಕತೆ ನಡೆಸಿದ್ದರು. ಆ ಬಳಿಕ ಸ್ನೇಹಿತರನ್ನ ಕಳಿಸೋ ಉದ್ದೇಶದಿಂ ಮೂರು ಲಕ್ಷ ಹಣವನ್ನ ಫೋನ್ ಪೇ ಮಾಡಿದ್ದರು ಸ್ವಾಮಿನಾಥನ್. ಬೆಂಗಳೂರಿನ HSR ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪಿಎ ಎನ್ನುವ ಹೆಸರಲ್ಲಿ ಸಾಯಿ ಟ್ರಸ್ಟ್ಗೆ ಸಹಾಯ ಮಾಡಿ ಎಂದು ಮೂರು ಲಕ್ಷ ಹಣ ಪಡೆದಿದ್ದಾರೆ. ಇಲ್ಲೀವರೆಗೂ ಹಣ ಪಡೆದು ಹಿಂತಿರುಗಿಸದ ಹಿನ್ನಲೆಯಲ್ಲಿ ಧೋನಿ ಅವರ ಮ್ಯಾನೇಜರ್ ಸ್ವಾಮಿನಾಥನ್ ಅವರು ಹೆಚ್.ಎಸ್.ಆರ್ ಲೇಔಟ್ ಠಾಣೆಗೆ ದೂರು ಸಲ್ಲಿಕೆ ಮಾಡಲಾಗಿದೆ. ಇದೀಗ ಪೊಲೀಸ್ರು ತಿರುಪತಿ ನಾಮ ಹಾಕಿದವರನ್ನು ಕರೆದು ವಿಚಾರಣೆ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ.
#MSD #MSDhoni #TeamIndia #Tirupathi #Bangaluru