ಭಾರತೀಯ ವಾಯು ಸೇನೆಗೆ (Air Force) ಶಕ್ತಿ ತುಂಬುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಎರಡು ಮಹತ್ವದ ಯೋಜನೆಗಳಿಗೆ ಸಮ್ಮತಿ ಸೂಚಿಸಿದೆ. ವಾಯುಸೇನೆಗೆ ಮಿಲಿಟರಿ ವಿಮಾನಗಳನ್ನು ತಯಾರಿಸುವ ಜವಾಬ್ದಾರಿಯನ್ನು ಟಾಟಾ ಹಾಗೂ ಏರ್‌ಬಸ್ ಜಂಟಿಯಾಗಿ ಹೊತ್ತುಕೊಂಡಿದೆ.
ಭದ್ರತೆ ಕುರಿತ ಸಚಿವ ಸಂಪುಟ ಸಮಿತಿಯು (ಸಿಸಿಎಸ್) ಟಾಟಾ ಮತ್ತು ಏರ್‌ಬಸ್ ಕಂಪನಿ ಜಂಟಿಯಾಗಿ ಉತ್ಪಾದಿಸಲಿರುವ ನೂತನ ಸಿ 295 ಎಂಡಬ್ಲ್ಯೂ ಮಿಲಿಟರಿ ಲಘು ವಿಮಾನಗಳನ್ನು ಖರೀದಿಸುವ ಪ್ರಸ್ತಾಪವನ್ನು ಅನುಮೋದಿಸಿದೆ.
22,000 ಕೋಟಿ ರೂ. ಒಪ್ಪಂದದಡಿಯಲ್ಲಿ ಟಾಟಾ-ಏರ್‌ಬಸ್ ಜಂಟಿಯಾಗಿ ಸಿ295 ಎಂಡಬ್ಲ್ಯೂ ಮಿಲಿಟರಿ ಸಾರಿಗೆ ವಿಮಾನಗಳನ್ನು ನಿರ್ಮಿಸಿ ಸೇನೆಗೆ ನೀಡಲಿದೆ. ಒಪ್ಪಂದದ ಪ್ರಕಾರ ಅಂದಾಜು 22,000 ಕೋಟಿ ರೂ. ಮೊತ್ತದ ಡೀಲ್ ಇದಾಗಿದ್ದು, ಒಟ್ಟು 56 ವಿಮಾನಗಳನ್ನು ತಯಾರಿಸಿ ಸೇನೆಗೆ ಹಸ್ತಾಂತರಿಸಲಿದೆ. ಸೇನೆಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ದೇಶೀಯವಾಗಿ ಹಾಗೂ ಖಾಸಗಿ ಕಂಪನಿಯೊಂದರಿಂದ ವಿಮಾನಗಳನ್ನು ಉತ್ಪಾದಿಸುತ್ತಿರುವುದು ಇದೇ ಮೊದಲು.
ಏನಿದು ಏರ್ ಬಸ್ C295 ?
ಏರ್‌ಬಸ್ C295 (Air bus C295) ಹೊಸ-ಪೀಳಿಗೆಯ ಯುದ್ಧತಂತ್ರದ ಏರ್‌ಲಿಫ್ಟರ್ (Airlifter) ಆಗಿದ್ದು, ಇದು ವಿವಿಧ ಕಾರ್ಯಗಳನ್ನು ನಿರ್ವಹಿಸಬಹುದಾದ ಶಕ್ತಿ ಹೊಂದಿದೆ. ಈ ವಿಮಾನವು ಸೆಮಿ ಪ್ರಿಪೇರ್ಡ್ ಸ್ಟ್ರೀಪ್ಸ್ ಗಳಲ್ಲೂ ಕಾರ್ಯನಿರ್ವಹಿಸಬಲ್ಲದು. ಮತ್ತು ತ್ವರಿತ ಪ್ರತಿಕ್ರಿಯೆ ಮತ್ತು ಪ್ಯಾರಾ ಡ್ರಾಪ್ಸಿಂಗ್ ಫಾರ್ ಆರ್ಪ್ಸ್ & ಕಾರ್ಗೋವನ್ನು ಹಿಂಬದಿ ರಾಂಪ್ ಡೋರ್ ಹೊಂದಿದೆ. C295 ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಬಹು-ಪಾತ್ರದ ಕಾರ್ಯಾಚರಣೆಗಳನ್ನು ನಡೆಸುತ್ತದೆ.
C295 ಸಾರಿಗೆ ವಿಮಾನದ ಹೊಸ C295W ಆವೃತ್ತಿಯು ರೆಕ್ಕೆಗಳನ್ನು ಹೊಂದಿದ್ದು, ಬಿಸಿ ಮತ್ತು ಅಧಿಕ ಸ್ಥಿತಿಯಲ್ಲಿ ಹೆಚ್ಚಿನ ದೂರದಲ್ಲಿ ಹೆಚ್ಚಿನ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಇದು ಸುಮಾರು ಶೇ. 4 ಇಂಧನ ಬಳಕೆ ಉಳಿತಾಯ ಮಾಡುತ್ತದೆ ಹಾಗೂ ಪರ್ವತ ಪ್ರದೇಶಗಳಲ್ಲಿ ಹೆಚ್ಚು ಸುರಕ್ಷತೆ ಹೊಂದಿರುತ್ತದೆ. ಏರ್‌ಬಸ್ C295 ಅನ್ನು ಸ್ಥಳೀಯವಾಗಿ ಭಾರತದಲ್ಲಿ ಸರ್ಕಾರದ ‘ಆತ್ಮನಿರ್ಭರ್ ಭಾರತ್ ಅಭಿಯಾನ್’ ಅಥವಾ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ತಯಾರಿಸಲಾಗುತ್ತದೆ. ಒಪ್ಪಂದದ ಪ್ರಕಾರ, ಒಟ್ಟು 56 ವಿಮಾನಗಳು IAF ಸೇರಲಿವೆ ಮತ್ತು ಇವುಗಳಲ್ಲಿ 40 ವಿಮಾನಗಳನ್ನು ಭಾರತದಲ್ಲಿ TATA ಒಕ್ಕೂಟವು ತಯಾರಿಸುತ್ತದೆ. ಎಲ್ಲಾ 56 ವಿಮಾನಗಳನ್ನು ಸ್ಥಳೀಯ ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್ ಅಳವಡಿಸಲಾಗುವುದು ಎಂದು ವರದಿಯಾಗಿದೆ.
ಹಾರಾಡುತ್ತಲೇ ಇಂಧನ ತುಂಬುವ ಕಿಟ್‌ನೊಂದಿಗೆ, C295 ಅನ್ನು ಸುಲಭವಾಗಿ ಏರ್ ಟ್ಯಾಂಕರ್ ಆಗಿ ಪರಿವರ್ತಿಸಬಹುದು, ಇದು ಸ್ಥಿರ ಮತ್ತು ರೋಟರಿ ವಿಂಗ್ ರಿಸೀವರ್‌ಗಳಿಗೆ 6,000 ಕೆಜಿ ಇಂಧನವನ್ನು ಒದಗಿಸುತ್ತದೆ.
ಇಷ್ಟೇ ಅಲ್ಲದೆ, ಪ್ಯಾಲೆಟೈಸ್ಡ್ ವಿಐಪಿ-ಸೀಟ್ ಮಾಡ್ಯೂಲ್‌ಗಳೊಂದಿಗೆ, ವಿಐಪಿ ಪ್ರಯಾಣಕ್ಕೂ ಬಳಸಿಕೊಳ್ಳಬಹುದು. ಸಿ -295 ಸಾಮಾನ್ಯ ವಿಮಾನಗಳು ಇಳಿಯಲು ಸಾಧ್ಯವಾಗದ ದೂರದ ಪ್ರದೇಶಗಳಲ್ಲಿ ಸಣ್ಣ/ಸುಸಜ್ಜಿತ ಏರ್‌ಸ್ಟ್ರಿಪ್‌ಗಳಲ್ಲೂ ಲ್ಯಾಂಡ್ ಆಗಲಿದೆ.