ಕರ್ನಾಟಕದ (Karnataka) ಲಾರಿ ಡ್ರೈವರ್ ಮೇಲೆ ತಮಿಳುನಾಡು (Tamil nadu) ಟ್ರಾಫಿಕ್ ಪೊಲೀಸ್ ಮನಸೋ ಇಚ್ಚೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಲಾರಿ ಡ್ರೈವರ್ ನ ಅಡ್ಡಗಟ್ಟಿ ಕಪಾಳ, ಮುಖ ಅಂತ ನೋಡದೆ ಹಲ್ಲೆ ಮೃಗೀಯವಾಗಿ ಹಲ್ಲೆ ಮಾಡಿದ್ದಾನೆ.

ಕರ್ನಾಟಕ- ತಮಿಳುನಾಡಿನ ಹೊಸೂರು ಬಾರ್ಡರ್ ನಲ್ಲಿ (Hosuru border) ಭಾನುವಾರ ರಾತ್ರಿ ೧೦ ಘಂಟೆ ಸುಮಾರಿಗೆ ಘಟನೆ ನಡೆದಿದೆ. ರ್ಯಾಷ್ ಡ್ರೈವಿಂಗ್ (Rash driving) ಮಾಡ್ತಿದ್ದಿಯಾ ಅಂತ ಆರೋಪಿಸಿ ಲಾರಿ ಅಡ್ಡಗಟ್ಟಿ ಈ ರೀತಿ ಪೊಲೀಸ್ ಪೇದೆ ಹಲ್ಲೆ ಮಾಡಿದ್ದಾನೆ.ಇದೇ ವೇಳೆ ಬಿಟ್ಬಿಡಿ ಸರ್ ಅಂತ ಲಾರಿ ಡ್ರೈವರ್ ಅಂಗಲಾಚಿದ್ರೂ ಬಿಡದೇ ಟ್ರಾಫಿಕ್ ಪೊಲೀಸ್ ಮೊಹ್ಮದ್ ರಂಜನ್ ಎಂಬಾತ ಮೈ ಮೇಲೆ ದೆವ್ವ ಬಂದವರಂತೆ ವರ್ತಿಸಿದ್ದಾನೆ.

ಈ ಘಟನೆಯನ್ನ ಹೊಸೂರರಿನಿಂದ ಬೆಂಗಳೂರು ಕಡೆ ಬರ್ತಿದ್ದ ಕಾರು ಚಾಲಕನಿಂದ ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಆ ಬಳಿಕ ಕಾರು ಚಾಲಕನಿಗೂ ಅವಾಜ್ ಹಾಕಿ ಈ ತಮಿಳುನಾಡು ಪೊಲೀಸ್ ವೀಡಿಯೋ ಡಿಲಿಟ್ ಮಾಡಿಸಿದ್ದಾನೆ ಎನ್ನಲಾಗಿದೆ. ಈತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.







