ನಡು ರಸ್ತೆಯಲ್ಲಿ ಕಾರು ಧಗ-ಧಗನೆ ಹೊತ್ತಿ ಉರಿದ ಅಪಾಯಕಾರಿ ಘಟನೆ ಬೆಂಗಳೂರಲ್ಲಿ (Bangalore) ನಡೆದಿದೆ. ರಸ್ತೆಯಲ್ಲಿ ಚಲಿಸುತ್ತಿದ್ದ ಸ್ವಿಪ್ಟ್ ಡಿಸೈರ್ ಕಾರಿನ ಇಂಜಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಗಳೂರಿನ ಜಾಲಹಳ್ಳಿ ಮೇಟ್ರೋ ನಿಲ್ದಾಣದ (Jalahlli metro station) ಬಳಿ ಈ ಘಟನೆ ನಡೆದಿದ್ದು, ಕಾರು ಚಲಿಸುತ್ತಿದ್ದಾಗ ಬಾನೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೀಗೆ ಬಾನೆಟ್ ನಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಪ್ರಯಾಣಿಕರು ತಕ್ಷಣ ಕಾರಿನಿಂದ ಕೆಳಗಿಳಿದಿದ್ದಾರೆ.

ಸದ್ಯ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕನ ಸಮಯಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದು, ಘಟನೆಗೆ ಇನ್ನಷ್ಟೇ ಕಾರಣ ತಿಳಿದುಬರಬೇಕಿದೆ.






