ಮುಖದಲ್ಲಿ ಕಣ್ಣುಗಳು ಹೇಗೆ ನಮ್ಮ ಅಂದವನ್ನು ಹೆಚ್ಚುತ್ತದೇ ಅದೇ ರೀತಿ ಹುಬ್ಬುಗಳು ಕೂಡ ನಮ್ಮ ಮುಖದ ಸೌಂದರ್ಯ ವನ್ನು ಹೆಚ್ಚಿಸುತ್ತದೆ..ಅದರಲ್ಲಿ ಕೆಲವರಿಗೆ ದಪ್ಪವಾದ ಹುಬ್ಬು ಇರುತ್ತದೆ ಅದು ಮುಖದ ಲಕ್ಷಣವನ್ನು ಜಾಸ್ತಿ ಮಾಡಿತ್ತದೆ..ಆದ್ರೆ ಹೆಚ್ಚು ಜನ ಹೇಳುವುದೆಂದರೆ ನಮ್ಮ ಹುಬ್ಬು ತುಂಬಾನೆ ತೆಳುವಿದೆ ಅಂತ..
ತೆಳುವಿರುವ ಹುಬ್ಬು ದಪ್ಪವಾಗಿ ಕಾಣಿಸಲು ಅವರು ಪ್ರತಿನಿತ್ಯ ಐಬ್ರೋ ಪೆನ್ಸಿಲನ್ನ ಬಳಸ್ತಾರೆ ಜೊತೆಗೆ ಐಬ್ರೋಸ್ ಮಾಡಬೇಕಾದ್ರು ಅವರಿಗೆ ಕರೆಕ್ಟ್ ಆದ ಶೇಪನ್ನ ಕೊಡೋದಕ್ಕೆ ಸ್ವಲ್ಪ ಕಷ್ಟವಾಗುತ್ತೆ.ಹಾಗಾಗಿ ನ್ಯಾಚುರಲ್ ಆಗಿ ನಿಮ್ಮ ಹುಬ್ಬು ದಪ್ಪವಾಗಿಲು ಮನೆಮದ್ದುಗಳನ್ನು ಟ್ರೈ ಮಾಡಬಹುದು..
ಆಲಿವ್ ಆಯಿಲ್
ಪ್ರತಿದಿನ ನೀವು ನಿಮ್ಮ ಹುಬ್ಬಿಗೆ ಆಲಿವ್ ಆಯಿಲ್ ಅನ್ನು ಹಚ್ಚಿ ಮಸಾಜ್ ಮಾಡಿ. ನಂತರ 30 ನಿಮಿಷಗಳ ಕಾಲ ಬಿಟ್ಟು ಬೆಚ್ಚಗಿನ ನೀರಿನಿಂದ ವಾಶ್ ಮಾಡಿ..ಹೀಗೆ ಮಾಡುವುದರಿಂದ ನಿಮ್ಮ ಹುಬ್ಬಿಗೆ ಮಸಾಜ್ ಸಿಗುತ್ತದೆ.. ನಿಮ್ಮ ಹುಬ್ಬನ್ನು ಮಾಯಿಶ್ಚರೈಸ್ ಮಾಡುತ್ತದೆ ಜೊತೆಗೆ ನಿಮ್ಮ ಕೂದಲು ಬೆಳೆಯುವುದಕ್ಕೂ ಕೂಡ ಸಹಾಯ ಮಾಡುತ್ತದೆ..
ಮೊಟ್ಟೆ
ಮೊಟ್ಟೆಯಲ್ಲಿ ಇರುವಂತಹ ಹಳದಿ ಭಾಗವನ್ನ ನೀವು ನಿಮ್ಮ ಹುಬ್ಬಿಗೆ ಹಚ್ಚಿ 20 ರಿಂದ 30 ನಿಮಿಷಗಳ ಕಾಲ ಬಿಟ್ಟು ಅದನ್ನ ವಾಶ್ ಮಾಡುವುದರಿಂದ ನಿಮ್ಮ ಹುಬ್ಬು ಚೆನ್ನಾಗಿ ಬೆಳೆಯುತ್ತದೇ.. ಅದರಲ್ಲಿ ಪ್ರೋಟೀನ್ ಹೆಚ್ಚಿರುತ್ತದೆ ಇದು ನಿಮ್ಮ ಹೇರ್ ಗ್ರೌತಿಗೆ ಸಹಾಯ ಮಾಡುತ್ತದೆ.
ಹರಳೆಣ್ಣೆ
ಕೂದಲ ಬೆಳವಣಿಗೆಯೆ ಹರಳೆಣ್ಣೆ ತುಂಬಾನೇ ಅದ್ಬುತವಾಗಿ ಕಾರ್ಯವನ್ನು ನಿರ್ವಹಿಸುತ್ತದೆ . ನಿಮ್ಮ ಉಬ್ಬು ತುಂಬಾ ದಟ್ಟವಾಗಿ ಹಾಗೂ ಕಪ್ಪಾಗಿ ಬೆಳೆಯಬೇಕು ಅಂದ್ರೆ ಪ್ರತಿದಿನ ರಾತ್ರಿ ಮಲಗೋದಕ್ಕಿಂತ ಮುಂಚೆ ಹಚ್ಚಿ ಬೆಳಗ್ಗೆ ಅದನ್ನ ಬೆಚ್ಚಗಿನ ನೀರಿನಿಂದ ವಾಶ್ ಮಾಡೋದಿಂದ ಹುಬ್ಬು ದಟ್ಟವಾಗಿ ಬೆಳೆಯುತ್ತದೆ . ಜೊತೆಗೆ ಹರಳೆಣ್ಣೆಯಲ್ಲಿ ಪ್ರೋಟೀನ್,ಕೊಬ್ಬಿನಾಮ್ಲ ಮತ್ತು ವಿಟಮಿನ್ ಅಂಶ ಹೆಚ್ಚಿರುತ್ತದೆ..ಇದು ನಿಮ್ಮ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಮೆಂತ್ಯೆ ಕಾಳು
ರಾತ್ರಿ ಮಲಗೋದಕ್ಕಿಂತ ಮುಂಚೆ ಒಂದು ಟೇಬಲ್ ಸ್ಪೂನ್ ಅಷ್ಟು ಮೆಂತ್ಯನ ನೀರಿನಲ್ಲಿ ನೆನಸಿಟ್ಟು ಬೆಳಗ್ಗೆ ಎದ್ದ ತಕ್ಷಣ ಅದನ್ನು ರುಬ್ಬಿ ನಿಮ್ಮ ಐಬ್ರೋಸ್ ಗೆ ಅಪ್ಲೈ ಮಾಡಿ. 30 ನಿಮಿಷಗಳ ಕಾಲ ಬಿಟ್ಟು ವಾಶ್ ಮಾಡುವುದರಿಂದ ಹುಬ್ಬು ದಟ್ಟವಾಗಿ ಬೆಳೆಯುತ್ತೆ. ಮೆಂತೆಯಲ್ಲಿ ಪ್ರೋಟೀನ್ ಹಾಗೂ ನಿಕೋಟಿನಿಕ್ ಆಸಿಡ್ ಜಾಸ್ತಿ ಇರುತ್ತದೆ ಇದು ನಿಮ್ಮ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ..
ಒಟ್ಟಿನಲ್ಲಿ ಯಾವುದೇ ಒಂದು ತೊಂದರೆ ಇಲ್ಲದೆ ನಿಮ್ಮ ಐಬ್ರೋಸ್ ಅಥವಾ ಹುಬ್ಬು ದಟ್ಟವಾಗಿ ಬೆಳೆಯೋದಕ್ಕೆ ಈ ಮೇಲ್ಕಂಡ ಮನೆಮದ್ದುಗಳು ತುಂಬಾನೇ ಹೆಲ್ಪ್ ಫುಲ್.